ಮುಕ್ಕ ಸಸಿಹಿತ್ಲು ಗ್ರಾಮದಗೌಜಿ ಸಂಪನ್ನ

ಸಸಿಹಿತ್ಲು : ಯಾರಿಗೂ ಸಮಯವೇಇಲ್ಲದಂತಹ ಬ್ಯುಸಿ ದಿನಗಳು ಇಂದು, ಎಲ್ಲವೂತಕ್ಷಣಕ್ಕೆ ಬೇಕು ಎನ್ನುವ ಹಂಬಲ ನಮ್ಮದು ಈ ಕಾರಣದಿಂದಲೇ ನಾವು ಗ್ರಾಮೀಣಜೀವನಕ್ರಮದಿಂದದೂರವಾಗುತ್ತಿದೆ, ಕೃಷಿ, ಪ್ರಕೃತಿ, ಸಾಂಪ್ರದಾಯಿಕಆಚಾರ ವಿಚಾರದಿಂದ ವಿಮುಖರಾಗುತ್ತಿದ್ದೇವೆಇಂತಹ ದಿನದಲ್ಲಿ ಸಾವಿರಾರು ಮಂದಿ ಯುವ ಸಮುದಾಯವನ್ನು ಕೃಷಿ ನಂಟಿನಜೊತೆ ಬೆಸುಗೆ ಹಾಕಿಸಿ ಗದ್ದೆಯಲ್ಲಿಆಡಿಸುವುದು ಸುಲಭದ ಮಾತಲ್ಲಇದೊಂದು ಸಾಧನೆಎಂದುಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ ತಿಳಿಸಿದರು.
ಅವರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಮತ್ತುಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯಜಂಟಿಆಶ್ರಯದಲ್ಲಿ ನಡೆದದ.ಕ ಮತ್ತುಉಡುಪಿ ಜಿಲ್ಲಾ ಮಟ್ಟದಗ್ರಾಮೀಣಕ್ರೀಡಾಕೂಟಗ್ರಾಮದಗೌಜಿಯ ಸಮಾರೋಪ ಸಮಾರಂಭದಲ್ಲಿಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಗಾಳಿ ಮಳೆ ಲೆಕ್ಕಿಸದೆಕೆಸರುಎಂದುಅಂಜದೆ ಮಕ್ಕಳು ಮತ್ತುಯುವಕರುಗದ್ದೆಯಲ್ಲಿಆಡುವುದನ್ನುಕಂಡಾಗ ನಮಗೂ ಗದ್ದೆಗಿಳಿಯುವ ಮನಸಾಗುತ್ತಿದೆ, ನಮ್ಮ ಬಾಲ್ಯದ ದಿನದಲ್ಲಿ ಹೆಚ್ಚಿನ ದಿನ ಇದರಲ್ಲಿಯೇ ಕಳೆದು ಹೋಗುತ್ತಿದ್ದವುಇದೊಂದುಅವಿಸ್ಮರಣೀಯ ದಿನಗಳು ಇಂದುಅಂತಹ ದಿನ ಮತ್ತೆ ಬರುತ್ತಿದೆಎಂದರೆಅದನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿಇರಬೇಕುಎಂದವರುಅಭಿಪ್ರಾಯ ವ್ಯಕ್ತ ಪಡಿಸಿದರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ವತಿಯಿಂದಅವರನ್ನುಅಭಿನಂದಿಸಲಾಯಿತು.
ಸಮಾರಂಭದಲ್ಲಿಚಿತ್ರನಟ ಮತ್ತುರಂಗಕಲಾವಿದ ಸತೀಶ್ ಬಂದಲೆ ಉಪಸ್ಥಿತಿರಿದ್ದು ನಾವೆಲ್ಲಗ್ರಾಮೀಣ ಭಾಗದಿಂದ ಬಂದವರುಕಲೆಯನ್ನು ನಂಬಿಕೊಂಡವರುಅದನ್ನೇ ಗೌರವಿಸಿದವರು ಇಂದು ಆ ಕಲೆ ನಮ್ಮನ್ನು ಉಳಿಸಿದೆ ಹಾಗೆ ನಾವೆಲ್ಲಕಲೆಯಆರಾಧಕರು ಆಗಬೇಕು ಇಂತಹ ಕಾರ್ಯಕ್ರಮಗಳೇ ಕಲೆಯ ಬುನಾದಿಗಳು ಇಲ್ಲಿಂದಲೇ ನಮ್ಮ ಪಯಣಆರಂಭವಾಗಲಿ ಎಂದರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರಗೌರವಾಧ್ಯಕ್ಷರಾದಚಂದಯ್ಯ ಬಿ.ಕರ್ಕೇರಾಅಧ್ಯಕ್ಷತೆ ವಹಿಸಿದ್ದರು. ಹಳೆಯಂಗಡಿ ಗ್ರಾಮ ಪಂಚಾಯತ್‌ಅಧ್ಯಕ್ಷೆಜಲಜ, ಜಿಲ್ಲಾಯುವಕಾಂಗ್ರೆಸ್ ಸಮಿತಿಅಧ್ಯಕ್ಷ ಮಿಥುನ್‌ರೈ, ಪಿಸಿಎ ಬ್ಯಾಂಕ್‌ಅಧ್ಯಕ್ಷ ಸತೀಶ್ ಭಟ್, ಉದ್ಯಮಿ ಹರೀಶ್ ಮುಂಚೂರು, ಪೂಜಾಏರೆಂಜರ‍್ಸ್ ಮಾಲಕಜೈ ಕೃಷ್ಣ ಕುಮಾರ್, ಮಯೂರ್ ಉಳ್ಳಾಲ್, ಸಂತೋಷ್ ಉಳ್ಳಾಲ್, ವಾಸು ಪೂಜಾರಿ,ಯುವವಾಹಿನಿ ಕೇಂದ್ರ ಸಮಿತಿಅಧ್ಯಕ್ಷ ಪದ್ಮನಾಭ ಮರೋಳಿ, ಗೌರವಾಧ್ಯಕ್ಷರಾದಚಂದಯ್ಯ ಬಿ.ಕರ್ಕೇರಾ, . ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರಅಧ್ಯಕ್ಷರಾದ ಪ್ರಕಾಶ್‌ಕುಮಾರ್ ಬಿ.ಎನ್, ರಮೇಶ್ ಪೂಜಾರಿ ಚೇಳಾರು, ಧನ್‌ರಾಜ್‌ಕೋಟ್ಯಾನ್, ಪರುಷೋತ್ತಮ ಮುಂಬೈ, ಮೂಡಾ ಸದಸ್ಯ ವಸಂತ ಬೆರ್ನಾಡ್, ಮಹಾಬಲಪೂಜಾರಿಕಡಂಬೋಡಿ, ಗೌತಮ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸ್ಪರ್ಧೆಯ ಫಲಿತಾಂಶ : ಪುರುಷರ ಹಗ್ಗ ಜಗ್ಗಾಟದಲ್ಲಿ ಪೊಲಿಪು ಫ್ರೆಂಡ್ಸ್ ಪ್ರಥಮ ಬಹುಮಾನಇಪ್ಪತ್ತು ಸಾವಿರ ನಗದು ಮತ್ತು ಶಾಶ್ವತ ಫಲಕ ಪಡೆದುಕೊಂರೆದ್ವತೀಯ ಬಹುಮಾನ ಹತ್ತು ಸಾವಿರ ನಗದು ಮತ್ತು ಶಾಶ್ವತ ಫಲಕ ಪಟ್ಟೆ ಫ್ರೆಂಡ್ಸ್ ಪಟ್ಟೆ ಪಾಲಾಯಿತು. ಮಹಿಳೆಯರ ವಿಭಾಗದಲ್ಲಿ ಭಗವತೀ ಫ್ರೆಂಡ್ಸ್ ಮುಕ್ಕ ಪ್ರಥಮ ಬಹುಮಾನ ಪಡೆದರೆ ಪೇಜಾವರ ಫ್ರೆಂಡ್ಸ್‌ದ್ವತೀಯ ಸ್ಥಾನ ಪಡೆಯಿತು. ಮಿರಮಿಡ್ಡ್ ಸ್ಫರ್ಧೆಯಲ್ಲಿಎಮ್‌ಆರ್‌ಪೂಂಜಾಐಟಿಐತಂಡ ಪ್ರಥಮ ಸ್ಥಾನ ಹತ್ತು ಸಾವಿರ ನಗದು ಮತ್ತು ಶಾಶ್ವತ ಫಲಕ ಹಾಗೂ ಎಸ್‌ಕೆಎಸ್‌ಎಸ್‌ಕರಂಬಾರು ದ್ವಿತೀಯ ಸ್ಥಾನ ಎರಡು ಸಾವಿರ ನಗದುಪಡೆದುಕೊಂಡಿತು.ಜಾನಪದಕುಣಿತ ಸ್ಪರ್ಧೆಯಲ್ಲಿಗತವೈಭವಕೂಟ ಮೂಲ್ಕಿ ಪ್ರಥಮ ಸ್ಥಾನ ಹಾಗೂ ಯುವವಾಹಿನಿ ಹಳೆಯಂಗಡಿ ಘಟಕ ದ್ವಿತೀಯ ಸ್ಥಾನ ಪಡೆದುಕೊಂಡಿತು.

Kinnigoli-03071707 Kinnigoli-03071708 Kinnigoli-03071709

Comments

comments

Comments are closed.

Read previous post:
Kinnigoli-03071704
ಕೆಸರ್‌ದ ಕಂಡೊಡು ಗೊಬ್ಬುದ ಪಂಥ

ಸಸಿಹಿತ್ಲು : ಅಳಿಯುತ್ತಿರುವ ಕೃಷಿ ಸಂಸ್ಕ್ರತಿ ಬದುಕು ಪರಂಪರೆ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡಾ ಕೂಟ ಮತ್ತು ಆಹಾರ ಪದ್ದತಿಯನ್ನು ಇಂದಿನ ಯುವ ಸಮುದಾಯಕ್ಕೆ ಪರಿಚಯ ಮಾಡಿ ತಿಳಿ ಹೇಳುವ ಸದುದ್ದೇಶದೊಂದಿಗೆ...

Close