ಮುಲ್ಕಿ: ಪ್ರತಿಭಾ ಪುರಸ್ಕಾರ

ಮುಲ್ಕಿ:  ಶ್ರೀ ನವದುರ್ಗಾ ಯುವಕ ವೃಂದ, ಕೋಟೆಕೇರಿ, ಮುಲ್ಕಿ ನಗರ ಪಂಚಾಯಿತಿಗೆ ಒಳಪಟ್ಟ ವಿವಿಧ ಶಾಲೆ / ಕಾಲೇಜುಗಳಲ್ಲಿ ಮಾರ್ಚ್ / ಏಪ್ರಿಲ್ 2017 ರ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿತು.
ಮಂಗಳೂರು ಮಹಾನಗರಪಾಲಿಕೆಯ ಸದಸ್ಯರು ಹಾಗೂ ಆರ್ಥಿಕ ಸಮಿತಿಯ ಅಧ್ಯಕ್ಷೆ ಪ್ರತಿಭಾ ಕುಳಾಯಿ ಉದ್ಘಾಟಿಸಿದರು. ನಾರಾಯಣಗುರು ಸಂಯುಕ್ತ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರವೀಂದ್ರ ಪೂಜಾರಿ ಅಡ್ವೆ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಹಾಗೂ ಮುಲ್ಕಿ ನಗರ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಯೋಗೀಶ್ ಕೋಟ್ಯಾನ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯಿತಿ ಉಪಾಧ್ಯಕ್ಷೆ ರಾಧಿಕಾ ಯಾಧವ ಕೋಟ್ಯಾನ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ 9 ವಿದ್ಯಾರ್ಥಿಗಳನ್ನು ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 100 ಫಲಿತಾಂಶ ಪಡೆದ ಮುಲ್ಕಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಹಾಗೂ ಪಿಯುಸಿಯಲ್ಲಿ ಶೇಕಡಾ 100 ಫಲಿತಾಂಶ ಪಡೆದ ಮೆಡಲಿನ್ ಪದವಿ ಪೂರ್ವ ಕಾಲೇಜುಗಳಿಗೆ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಯುವಕ ವೃಂದದ ಜಯ ಸಿ. ಪೂಜಾರಿ ಇವರು ಸ್ವಾಗತಿಸಿದರು. ಸುರೇಶ್ ಡಿ. ಎಸ್. ವಂದಿಸಿದರು. ವಿಜಯ ಕುಮಾರ್ ಕುಬೆವೂರು ಹಾಗೂ ಉದಯ ಅಮಿನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.

Kinnigoli-030717010

Comments

comments

Comments are closed.

Read previous post:
Kinnigoli-03071708
ಮುಕ್ಕ ಸಸಿಹಿತ್ಲು ಗ್ರಾಮದಗೌಜಿ ಸಂಪನ್ನ

ಸಸಿಹಿತ್ಲು : ಯಾರಿಗೂ ಸಮಯವೇಇಲ್ಲದಂತಹ ಬ್ಯುಸಿ ದಿನಗಳು ಇಂದು, ಎಲ್ಲವೂತಕ್ಷಣಕ್ಕೆ ಬೇಕು ಎನ್ನುವ ಹಂಬಲ ನಮ್ಮದು ಈ ಕಾರಣದಿಂದಲೇ ನಾವು ಗ್ರಾಮೀಣಜೀವನಕ್ರಮದಿಂದದೂರವಾಗುತ್ತಿದೆ, ಕೃಷಿ, ಪ್ರಕೃತಿ, ಸಾಂಪ್ರದಾಯಿಕಆಚಾರ ವಿಚಾರದಿಂದ...

Close