ಕೌಶಲ್ಯಾಧಾರಿತ ಶಿಕ್ಷಣ ಅಗತ್ಯವಿದೆ : ಅಬೂಬಕ್ಕರ್

ಹಳೆಯಂಗಡಿ: ಕೇವಲ ಪದವಿ ವ್ಯಾಸಾಂಗ ಮಾಡಿ ಉದ್ಯೋಗ ಅರಸುವ ಬದಲಿಗೆ ಕೌಶಲ್ಯಾಧಾರಿತ ಶಿಕ್ಷಣದ ತರಬೇತಿಯನ್ನು ಪಡೆದುಕೊಂಡು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಯಾಗಲು ಯುವಜನರು ಪ್ರಯತ್ನ ನಡೆಸಬೇಕು, ಸರಕಾರದ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಹೆಸರನ್ನು ನೋದಾಯಿಸಲು ಗ್ರಾಮ ಪಂಚಾಯತ್ ಮೂಲಕ ಅಭಿಯಾನ ಆರಂಭಿಸಿದ್ದು ಈಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಸೂಕ್ತ ಸಮಯದಲ್ಲಿ ಉದ್ಯೋಗದಾತರಾಗಿರಿ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಹೇಳಿದರು.
ಅವರು ಹಳೆಯಂಗಡಿ ಗ್ರಾಮ ಪಂಚಾಯತ್‌ನ ರಾಜೀವಗಾಂಧಿ ಸಭಾಭವನದಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ನಿರುದ್ಯೋಗಿ ಯುವಜನರ ನೋಂದಣಿ ಕಾರ್ಯದಲ್ಲಿ ವಿಶೇಷವಾಗಿ ಮಾಹಿತಿ ನೀಡಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಲಜಾ ಅಧ್ಯಕ್ಷತೆಯನ್ನು ವಹಿಸಿ, ಗ್ರಾಮದ ಯುವಜನರಿಗೆ ಆರ್ಥಿಕ ಸಂಸ್ಥೆಗಳು ನೆರವು ನೀಡಿದಲ್ಲಿ ಅವರು ಸಹ ಇನ್ನಿತರರಿಗೆ ಉದ್ಯೋಗವನ್ನು ಕಲ್ಪಿಸುವ ಜವಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯ, ಕೌಶಲ್ಯ ತರಬೇತಿಯ ಸದಾವಕಾಶವನ್ನು ಪಡೆಯಲು ಮುಕ್ತವಾಗಿ ಅವಕಾಶ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಮಾರು 30 ಮಂದಿ ಹೆಸರನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿದರು.
ಹಳೆಯಂಗಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ನಂದಾ ಪಾಯಸ್, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್, ಸಿಬ್ಬಂದಿ ನವಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಾಗ್ ಅಂಗನವಾಡಿ ಕಾರ್ಯಕರ್ತೆ ರತ್ನಾ ಸ್ವಾಗತಿಸಿದರು, ಯುಬಿಎಂಸಿ ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ ವಂದಿಸಿದರು, ಹಳೆಯಂಗಡಿ ಅಂಗನವಾಡಿ ಕಾರ್ಯಕರ್ತೆ ಗೀತಾ ನಿರೂಪಿಸಿದರು.

Kinnigoli-04071701

Comments

comments

Comments are closed.

Read previous post:
Kinnigoli-030717011
ಯಕ್ಷಗಾನದಿಂದ ಮಕ್ಕಳ ಶಿಕ್ಷಣಕ್ಕೆ ಸಹಕಾರಿ

ಮೂಲ್ಕಿ: ಮಕ್ಕಳಲ್ಲಿನ ಯಕ್ಷಗಾನದ ಆಸಕ್ತಿಯಿಂದ ಅವರ ಕಲಿಕೆಯಲ್ಲಿ ಬಹಳಷ್ಟು ಸಹಕಾರಿಯಾಗಿದ್ದು, ಯಕ್ಷಗಾನದಲ್ಲಿನ ಕಲಾಸಕ್ತಿಯನ್ನು ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದು ಕಟೀಲು ಶ್ರಿ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಶ್ರಿಹರಿನಾರಾಯಣ...

Close