ಕಟೀಲು: ಶ್ರೀ ದೇವಿ ಚರಿತೆ ಧಾರವಾಹಿ

ಕಟೀಲು: ಕಟೀಲು ಶ್ರೀ ದೇವಿ ಚರಿತೆ ಧಾರವಾಹಿ ನಿರ್ಮಾಣದಿಂದ ಸನಾತನ ಸಂಸ್ಕೃತಿ, ಸಂಸ್ಕಾರಗಳ ಬೆಳವಣಿಗೆ ಆಗಲಿದೆ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮಿ ಹೇಳಿದರು.
ಕಟೀಲು ದುರ್ಗಾಪರಮೇಶ್ವರೀ ದೇವಳದಲ್ಲಿ ಬುಧವಾರ ನಡೆದ ಕಟೀಲು ಶ್ರೀ ದೇವಿ ಚರಿತೆ ಧಾರವಾಹಿ ಮೂಹೂರ್ತ ಸಮಾರಂಭದಲ್ಲಿ ಕ್ಯಾಮಾರಾ ಚಾಲನೆ ನೀಡಿ ಮಾತನಾಡಿದರು.
ಮುಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಮಾತನಾಡಿ ಕಟೀಲು ದೇವಳದಲ್ಲಿ ಯಕ್ಷಗಾನ ಪ್ರಸಿದ್ದಿಯನ್ನು ಪಡೆದಿದ್ದು, ಈ ಧಾರಾವಾಹಿ ಕೂಡ ಯಕ್ಷಗಾನದಂತೆ ಪ್ರಸಿದ್ಧಿ ಪಡೆದು ಯಶಸ್ಸಾಗಲಿ ಎಂದರು.
ಭವಾನಿ ಶಿಪ್ಪಿಂಗ್ ಸರ್ವಿಸಸ್ ನ ಕುಸುಮೋಧರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪುರಾಣ ಪ್ರಸಿದ್ಧ ಕಟೀಲು ದೇವಿಯ ಚರಿತೆಯನ್ನು ಧಾರವಾಹಿಯಾಗಿ ನೀಡಲಿದ್ದೇವೆ, ಕಟೀಲು ಕ್ಷೇತ್ರದಂತೆ ಧಾರಾವಾಹಿಯೂ ಕೂಡ ಪ್ರಸಿದ್ದಿಯನ್ನು ಪಡೆಯಲಿದೆ ಎಂಬ ನಂಬಿಕೆ ಇದೆ ಎಂದರು.
ಶ್ರೀ ಕ್ಷೇತ್ರ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮಿ ಕ್ಲಾಪ್ ತೋರಿಸಿದರು, ಕಟೀಲು ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ ಹಾಗೂ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಶುಭಾಶಂಸನೆಗೈದರು.
ಯಕ್ಷಗಾನ ಸಾಹಿತಿ ಛಂಧೋಬ್ರಹ್ಮ ಖ್ಯಾತಿಯ ಡಾ. ಎನ್ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಟೀಲು ದೇವಳದ ಅರ್ಚಕರಾದ ಲಕ್ಷೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟಗಳ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಯಕ್ಷದ್ರುವ ಪಟ್ಲ ಪೌಂಡೇಶನ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೇಪು ಉಳ್ಳಾಲ್ತಿ ದೇವಳದ ಪ್ರಧಾನ ಅರ್ಚಕ ಸೂರ್ಯನಾರಾಯಣ ಕೇಕುಣ್ಣಾಯ, ಡಾ| ಸುರೇಶ್ ರಾವ್, ಕೋಟಿ ಚೆನ್ನಯ ಧಾರಾವಾಹಿಯ ನಿರ್ಮಾಪಕ ಅಶೋಕ್ ಎಮ್ ಸುವರ್ಣ, ಮಹಾರಾಷ್ಟ್ರ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯಧ್ಯಕ್ಷೆ ಗೀತಾ ಬಿ.ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್‌ಕುಮಾರ್ ಕಟೀಲು, ನಟ ರಾಜಶೇಖರ ಶೆಟ್ಟಿ ಅಳಿಕೆ, ಖ್ಯಾತ ಸಾಹಿತಿ ಡಾ| ರಾಘವೇಂದ್ರ ರಾವ್ ಉಡುಪಿ, ಡಾ| ರಾಜೇಶ್, ರಾಘವೇಂದ್ರ ರಾವ್, ದ.ಕ. ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನಾಥ ಶೆಟ್ಟಿ, ಯಕ್ಷಗಾನ ಕಲಾವಿದರಾದ ಅರುವ ಕೊರಗಫ್ಪ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಮುಂಡ್ಕೂರು ಸುಧಾಕರ ಶೆಟ್ಟಿ, ಜಯಶಂಕರ ಶೆಟ್ಟಿ ಕರ್ಮಾರ್ ಗುತ್ತು, ಪ್ರಕಾಶ್ ಶೆಟ್ಟಿ ಚೆಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿ ಧಾರಾವಾಹಿಯ ನಿರ್ದೇಶಕ ಚಂದ್ರಹಾಸ ಅಳ್ವ ಪ್ರಸ್ತಾವನೆಗೈದರು.
ಅಶೋಕ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.

Kateel-05071703 Kateel-05071704 Kateel-05071705 Kateel-05071706 Kateel-05071707 Kateel-05071708

Comments

comments

Comments are closed.