ಸಾಹಿತಿ ಸಾಂ.ಶ್ರೀ.ತಂ.-ಕೊ.ಅ.ಉಡುಪ ಪ್ರಶಸ್ತಿ

ಕಿನ್ನಿಗೋಳಿ : ಯುಗಪುರುಷ ಸಂಸ್ಥಾಪಕ ದಿ. ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಸೇವೆ ಸಲ್ಲಿಸಿದ ಸಾಂತೂರು ಶ್ರೀನಿವಾಸ ತಂತ್ರಿ ಇವರಿಗೆ ನೀಡಲಾಗುವುದು. ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ “ಶ್ರೀ ವಿಶ್ವೇಶ ವಾಣಿ”, “ಉಡುಪಿ” ಸಚಿತ್ರ ಪರಿಚಯ ಹಾಗೂ “ದಕ್ಷಿಣ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರಗಳು” ಕೃತಿ ರೂಪದಲ್ಲಿ ಪ್ರಕಟವಾಗಿವೆ. ಯುಗಪುರುಷ ಪತ್ರಿಕೆಯಲ್ಲಿ “ದೇಗುಲ ದರ್ಶನ” ವಿಭಾಗದಲ್ಲಿ ಕರಾವಳಿಯ 108 ದೇವಾಲಯಗಳ ಸರಣಿ ಲೇಖನ ಪ್ರಕಟವಾದದು ವಿಶೇಷ. ಪ್ರಸ್ತುತ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಜಿರೆ ಶಾಖೆಯಲ್ಲಿ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ಅನೇಕ ಗೌರವಗಳು ಸಂದಿವೆ.
ಕೊ.ಅ.ಉಡುಪ ಪ್ರಶಸ್ತಿಯನ್ನು ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿರುವ ಕೊ.ಅ.ಉಡುಪ ಸಂಸ್ಮರಣ ಸಮಾರಂಭದಲ್ಲಿ ರೂ. 10,000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Kinnigoli-06071702

Comments

comments

Comments are closed.

Read previous post:
Kinnigoli-06071701
ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಣೆ

ಕಿನ್ನಿಗೋಳಿ: ಪುನರೂರು ಅನುದಾನಿತ ಭಾರತಮಾತಾ ಹಿ. ಪ್ರಾ ಶಾಲೆಯಲ್ಲಿ ಶನಿವಾರ ಆರ್ಥಿಕವಾಗಿ ಹಿಂದುಳಿದ 50ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ದಾನಿಗಳಾದ ಕೃಷ್ಣ ಮೂರ್ತಿ...

Close