ಸರ್ಕಾರಿ ಶಾಲೆಗೆ ಆಸರೆಯಾಗಬೇಕು

ಕಿನ್ನಿಗೋಳಿ: ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಆಸರೆಯಾದಾಗ ಮಾತ್ರ ಶಾಲೆ ಉಳಿಸಬಹುದು. ಶಿಕ್ಷಣ ಎನ್ನುವುದು ಸರ್ಕಾರಿ ಮತ್ತು ಖಾಸಗಿ ಶಾಲೆಯ ಸೊತ್ತಲ್ಲ ಬದಲಾಗಿ ಶಿಕ್ಷಣ ಪಡೆಯುವ ಹಕ್ಕನ್ನು ಎಲ್ಲಾ ಮಕ್ಕಳು ಪಡೆಯಲು ಅರ್ಹರು ಅದರ ಮೌಲ್ಯ ಭವಿಷ್ಯದಲ್ಲಿ ಸುಖಮಯ ಜೀವನ ನಿರ್ಮಾಣ ಮಾಡಲು ಸಹಕಾರಿ ಆಗುತ್ತದೆ ಎಂದು ಯಕ್ಷಗಾನ ರಂಗದ ಚಾರ್ಲಿ ಚಾಪ್ಲಿನ್ ನಾಮಾಂಕಿತ ಸೀತಾರಾಮ್‌ಕುಮಾರ್ ಕಟೀಲು ಹೇಳಿದರು.
ಕಿನ್ನಿಗೋಳಿ ಸಮೀಪದ ಬೆಳ್ಳಾಯರು ಹಿಂದೂಸ್ತಾನಿ ಯೂತ್ ಕ್ಲಬ್ ಸಂಯೋಜನೆಯಲ್ಲಿ ಕೆರೆಕಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವಿಧ ಸಮಾಜ ಸೇವಾ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕಗಳು, ಶಾಲೆಯ ಅಕ್ಷರ ದಾಸೋಹದ ಬಿಸಿಯೂಟಕ್ಕೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಬೇಕಾಗುವ ತರಕಾರಿಯನ್ನು ಖರೀದಿಸಲು ಒಂದು ವರ್ಷದ ದೇಣಿಗೆಯಾಗಿ ಪಂಡಿತ್ ದೀನ್ ದಯಾಳ್ ಅವರ ವರ್ಷಾಚರಣೆಯ ಪ್ರಯುಕ್ತ ರೂ.೨೫ ಸಾವಿರವನ್ನು ಹಿಂದೂಸ್ತಾನಿ ಯೂತ್ ಕ್ಲಬ್‌ನ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಅವರು ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರೀ ಅವರಿಗೆ ಹಸ್ತಾಂತರಿಸಿದರು.
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷ ಜಯರಾಂ ಆಚಾರ್ಯ, ಹಿಂದೂ ಸಂಘಟನೆಯ ಸದಾಶಿವ ಶೆಟ್ಟಿಗಾರ್, ಬಿಜೆಪಿಯ ದಿವೇಶ್ ದೇವಾಡಿಗ, ಕ್ಲಬ್‌ನ ಅರುಣ್‌ಕುಮಾರ್, ಗಿರೀಶ್ ಪೂಜಾರಿ, ದಿನೇಶ್, ಉದಯ ಬೆಳ್ಳಾಯರು, ಗಿರೀಶ್ ಸುವರ್ಣ, ಹರೀಶ್ ಶೆಟ್ಟಿ, ಹಾಗೂ ಶಾಲಾ ಸಹ ಶಿಕ್ಷಕರು, ಅಂಗನವಾಡಿ ಶಿಕ್ಷಕರು, ಪೋಷಕರು ಮತ್ತಿತರರು ಇದ್ದರು.

Kinnigoli-07071705

Comments

comments

Comments are closed.

Read previous post:
Kinnigoli-07071704
ಎಕೌಂಟೆನ್ಸಿ ಪಠ್ಯ ಪುಸ್ತಕ ಬಿಡುಗಡೆ

ಕಿನ್ನಿಗೋಳಿ: ಕಾಲೇಜು ಮಟ್ಟದಲ್ಲಿ ವಾಣಿಜ್ಯ ವಿಭಾಗದ ಪದವಿಗೆ ಬಹಳ ಬೇಡಿಕೆಯಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಈ ಪದವಿಯಿಂದ ಉತ್ತಮ ಅವಕಾಶಗಳಿವೆ. ಇಂತಹ ಮಾರ್ಗದರ್ಶಿಕ ಪಠ್ಯಪುಸ್ತಕಗಳಿಂದ ಬಹಳಷ್ಟು ಪ್ರಯೋಜನಗಳು ಲಭಿಸಲಿದೆ ಎಂದು...

Close