ಕಿನ್ನಿಗೋಳಿ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರ

ಕಿನ್ನಿಗೋಳಿ: ದೈಹಿಕ ಶಿಕ್ಷಕರು ಶಿಸ್ತು ಸಂಯಮಗಳ ಮೂಲಕವಾಗಿ ವಿದ್ಯಾರ್ಥಿಗಳಿಗೆ ಮಾಗದರ್ಶಕರಾಗಿದ್ದಾರೆ. ಇಂತಹ ಕಾರ್ಯಗಾರದ ಮೂಲಕ ಕೌಶಲ್ಯ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ವರದಾನವಾಗಲಿ ಎಂದು ಮೇರಿವೆಲ್ ಶಾಲಾ ಸಂಚಾಲಕಿ ಭಗಿನಿ ಡಿವಿನಾ ಬಿಎಸ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ ಮಂಗಳೂರು, ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘ( ರಿ ) ಮಂಗಳೂರು ಉತ್ತರ ವಲಯದ ಜಂಟಿ ಆಶ್ರಯದಲ್ಲಿ ಕಿನ್ನಿಗೋಳಿ ಮೇರಿವೇಲ್ ಆಂಗ್ಲಮಾದ್ಯಮ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ 2017-18 ನೇ ಸಾಲಿನ ಶೈಕ್ಷಣಿಕ ವರ್ಷದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ. ಎಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಶಿಬಿರ ಪೂರಕವಾಗಿ ಕೆಲಸಮಾಡಲಿ ಎಂದು ಹೇಳಿದರು.
ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧಕ್ಷ ಕೆ. ಎಚ್ ನಾಯಕ್, ಮೇರಿವೆಲ್ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಬಿ. ಎಸ್, ಶಿಕ್ಷಣ ಸಂಯೋಜಕಿ ಜಾನೆಟ್ ಲೋಬೋ, ತಾಲೂಕು ದೈಹಿಕ ಕ್ರೀಡಾಧಿಕಾರಿ ಆಶಾ ನಾಯಕ್, ನಾಗೇಶ್ ಎಸ್, ಬಾಲಕೃಷ್ಣ , ತ್ಯಾಗಂ, ಕರಿಯಪ್ಪ ರೈ, ಪ್ರೀಡಾ ರೋಡ್ರಿಗಸ್, ಶೇಖರ್ ಕಡ್ತಲ್, ಶಕೂರ್, ಐರಿನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಶೈಕ್ಷಣಿಕ ವರ್ಷದಲ್ಲಿ ಅಧಿಕ ಅಂಕ ಗಳಿಸಿದ ದೈಹಿಕ ಶಿಕ್ಷಣ ಶಿಕ್ಷಕರ ಮಕ್ಕಳಿಗೆ ಪ್ರತಿಭಾಪುರಸ್ಕಾರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನ ಹಾಗೂ ಅಪಘಾತಕ್ಕಿಡಾದವರಿಗೆ ನಗದು ರೂಪದಲ್ಲಿ ಸಹಕಾರ ನೀಡಲಾಯಿತು.
ತಾಲೂಕು ಸಂಘದ ಹರೀಶ್ ರೈ, ಪ್ರಸ್ತಾವನೆಗೈದರು. ಗೌರವಾಧ್ಯಕ್ಷ ದಯಾನಂದ ಮಾಡ ಸ್ವಾಗತಿಸಿದರು. ಉಮೇಶ್ ಹಾಗೂ ಹರಿಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ನಾಯಕ್ ವಂದಿಸಿದರು.

Kinnigoli-07071706

Comments

comments

Comments are closed.

Read previous post:
Kinnigoli-07071705
ಸರ್ಕಾರಿ ಶಾಲೆಗೆ ಆಸರೆಯಾಗಬೇಕು

ಕಿನ್ನಿಗೋಳಿ: ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಆಸರೆಯಾದಾಗ ಮಾತ್ರ ಶಾಲೆ ಉಳಿಸಬಹುದು. ಶಿಕ್ಷಣ ಎನ್ನುವುದು ಸರ್ಕಾರಿ ಮತ್ತು ಖಾಸಗಿ ಶಾಲೆಯ ಸೊತ್ತಲ್ಲ ಬದಲಾಗಿ...

Close