ಎಕೌಂಟೆನ್ಸಿ ಪಠ್ಯ ಪುಸ್ತಕ ಬಿಡುಗಡೆ

ಕಿನ್ನಿಗೋಳಿ: ಕಾಲೇಜು ಮಟ್ಟದಲ್ಲಿ ವಾಣಿಜ್ಯ ವಿಭಾಗದ ಪದವಿಗೆ ಬಹಳ ಬೇಡಿಕೆಯಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಈ ಪದವಿಯಿಂದ ಉತ್ತಮ ಅವಕಾಶಗಳಿವೆ. ಇಂತಹ ಮಾರ್ಗದರ್ಶಿಕ ಪಠ್ಯಪುಸ್ತಕಗಳಿಂದ ಬಹಳಷ್ಟು ಪ್ರಯೋಜನಗಳು ಲಭಿಸಲಿದೆ ಎಂದು ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಬುಧವಾರ ಕಟೀಲು ದೇವಳದಲ್ಲಿ ಕಟೀಲು ಪದವಿ ಕಾಲೇಜು ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಡಾ. ಕೃಷ್ಣ ಕಾಂಚನ್ ಹಾಗೂ ಐಕಳ ಪೊಂಪೈ ಪದವಿ ಕಾಲೇಜು ಉಪನ್ಯಾಸಕ ಪ್ರೊ. ಜಗದೀಶ ಹೊಳ್ಳ ಅವರು ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಬರೆದ ಪೈನಾನ್ಸಿಯಲ್ ಎಕೌಂಟೆನ್ಸಿ ಪಠ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಹಾಗೂ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಪಠ್ಯ ಪುಸಕ್ತವನ್ನು ಬಿಡುಗಡೆಗೊಳಿಸಿದರು.
ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಪ್ರಕಾಶಕ ನವೀನ್, ಕಟೀಲು ಪದವಿ ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ. ಜಗದೀಶ ಹೊಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-07071704

Comments

comments

Comments are closed.

Read previous post:
Kinnigoli-07071703
ಬರೆಯುವ ಪುಸ್ತಕ ವಿತರಣೆ

ಕಿನ್ನಿಗೋಳಿ: ಪಂಜ ದ. ಕ. ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ಸೀತಾರಾಮ ಎಲ್ ಶೆಟ್ಟಿ ಪಂಜ ನೀಡಿದ ಬರೆಯುವ ಪುಸ್ತಕ ಹಾಗೂ ದಾನಿ ನಲ್ಯಗುತ್ತು ಪ್ರಕಾಶ್ ಶೆಟ್ಟಿ ನೀಡಿದ ಬ್ಯಾಗ್...

Close