ಹಳೆಯಂಗಡಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿದೆ

ಕಿನ್ನಿಗೋಳಿ: ಪ್ರಸ್ತುತ ವರ್ಷದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲವು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿದೆ. ಸಮಾಜಮುಖಿ ಚಿಂತನೆಯನ್ನು ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಎಲ್ಲಾ ಗ್ರಾಮೀಣ ಮಟ್ಟದ ಸಂಘ ಸಂಸ್ಥೆಗಳು ನಿರಂತರವಾಗಿ ನಡೆಸಿದಲ್ಲಿ ಜನರ ಮನ್ನಣೆ ಸಿಗುತ್ತದೆ ಎಂದು ದ.ಕ. ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು.
ಹಳೆಯಂಗಡಿ ಮತ್ತು ಪುತ್ತೂರು ಯುವಕ ಮಂಡಲಗಳು ತನ್ನ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದು, ನಿರಂತರವಾಗಿ ಚಟುವಟಿಕೆಯನ್ನು ಹಾಗೂ ಅದಕ್ಕೆ ಪೂರಕವಾದ ಮಾನದಂಡದಿಂದ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆಯಲು ಅರ್ಹತೆ ಪಡೆಯಲಿದೆ. ರಾಷ್ಟ್ರಮಟ್ಟದಲ್ಲಿ ರಚಿತವಾಗಿರುವ ಮೇಲುಸ್ತುವಾರಿ ಸಮಿತಿಯು ಅದನ್ನು ನಿರ್ಧರಿಸಲಿದೆ. ನಿರ್ಮಾಣ ಹಂತದಲ್ಲಿರುವ ವಿದ್ಯಾವಿನಾಯಕ ಯುವಕ ಮಂಡಲಕ್ಕೆ ತನ್ನ ಸಂಸತ್ ನಿಧಿಯಿಂದ ರೂ.೫ ಲಕ್ಷ ಅನುದಾನದ ಭರವಸೆಯನ್ನು ನೀಡಿರುತ್ತೇನೆ. ಗ್ರಾಮೀಣ ಭಾಗದ ಸಬಲೀಕರಣಕ್ಕೆ ಇಂತಹ ಸಂಸ್ಥೆಗಳು ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನೂತನ ಕಟ್ಟಡದ ನೀಲನಕ್ಷೆ ಹಾಗೂ ನಿರ್ಮಾಣದ ಹಂತದ ಪರಿಶೀಲನೆ ನಡೆಸಿದರು. ಒಳಾಂಗಣ ಹಾಗೂ ಹೊರಾಂಗಣದ ಕ್ರೀಡೆಗೆ ಪೂರಕವಾದ ಯೋಜನೆಯನ್ನು ನಿರ್ಮಿಸಲು ಸೂಚನೆಯನ್ನು ಸಂಸದರು ನೀಡಿದರು.
ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತ.ಪಂ. ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಮಾಜಿ ಜಿ.ಪಂ.ಸದಸ್ಯ ಈಶ್ವರ ಕಟೀಲು, ಪಡುಪಣಂಬೂರು ಗಾ.ಪಂ. ಸದಸ್ಯೆ ಲೀಲಾ ಬಂಜನ್, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಸೂರ್ಯಕುಮಾರ್, ಟ್ರಸ್ಟಿ ಎಚ್. ರಾಮಚಂದ್ರ ಶೆಣೈ, ಹಿರಿಯರಾದ ರಮೇಶ್ ಕೋಟ್ಯಾನ್, ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್, ಸಮಾಜ ಸೇವಕ ಶಶಿ ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-12071701

Comments

comments

Comments are closed.

Read previous post:
ಜು.10: ಹಳೆಯಂಗಡಿ ಗ್ರಾ.ಪಂ. ಗ್ರಾಮ ಸಭೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯತ್‌ನ ಹಳೆಯಂಗಡಿ, ಪಾವಂಜೆ ಮತ್ತು ಸಸಿಹಿತ್ಲು ಗ್ರಾಮಗಳ 2017-18ನೇ ಸಾಲಿನ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜು.10ಸೋಮವಾರ ಬೆಳಿಗ್ಗೆ 11ಕ್ಕೆ ಪಾವಂಜೆ ಗ್ರಾಮದ...

Close