ಹಳೆಯಂಗಡಿ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಪ್ರಶಸ್ತಿ

ಕಿನ್ನಿಗೋಳಿ: ಹಳೆಯಂಗಡಿ ಲಯನ್ಸ್ ಕ್ಲಬ್‌ಗೆ ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ ಹಾಗೂ ಹಾಸನದ ವ್ಯಾಪ್ತಿಯ ಅಂತರ್ ಜಿಲ್ಲಾ ಮಟ್ಟದಲ್ಲಿ ಹತ್ತು ವರ್ಷದ ಅವಽಯ ಕ್ಲಬ್‌ನ ವಿಭಾಗದಲ್ಲಿ ಅತ್ಯುತ್ತಮ ಕ್ಲಬ್ ಎಂಬ ಜಿಲ್ಲಾ ಪ್ರಶಸ್ತಿಯ ಸಹಿತ ವಿವಿಧ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಅಧ್ಯಕ್ಷ ಬ್ರಿಜೇಶ್‌ಕುಮಾರ್, ಕಾರ್ಯದರ್ಶಿ ಶರತ್‌ಕುಮಾರ್, ಕೋಶಾಧಿಕಾರಿ ವಾಸು ನಾಯಕ್, ಸ್ಥಾಪಕಾಧ್ಯಕ್ಷ ಚಂದ್ರಶೇಖರ ನಾನಿಲ್, ಮಾಜಿ ವಲಯಾಧ್ಯಕ್ಷರುಗಳಾದ ಯಾದವ ದೇವಾಡಿಗ ಹಾಗೂ ಮೋಹನ್ ಸುವರ್ಣ, ಲಿಯೋ ಅಧ್ಯಕ್ಷ ಹೇಮಂತ್ ಪೂಜಾರಿ, ಕಾರ್ಯದರ್ಶಿ ನಿಖಿಲ್ ದೇವಾಡಿಗ, ಕೋಶಾಧಿಕಾರಿ ಸೌರಭ್ ಸಾಲ್ಯಾನ್ ಹಾಗೂ ಸ್ಥಾಪಕಾಧ್ಯಕ್ಷ ಪ್ರಜ್ವಲ್ ಪೂಜಾರಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಮಂಗಳೂರು ಹೊರವಲಯದ ವಾಮಂಜೂರಿನಲ್ಲಿ ನಡೆದ ಜಿಲ್ಲಾ ಅಧಿವೇಶನದಲ್ಲಿ ಜಿಲ್ಲಾ ಗವರ್ನರ್ ಎಂ.ಅರುಣ್ ಶೆಟ್ಟಿ ಹಾಗೂ ಇಂದಿರಾ ಶೆಟ್ಟಿ ಅವರಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಹಳೆಯಂಗಡಿ ಲಯನ್ಸ್ ಕ್ಲಬ್‌ನ ಪ್ರಶಸ್ತಿ ಪುರಸ್ಕೃತರ ಸಹಿತ ಮಾಜಿ ಅಧ್ಯಕ್ಷರಾದ ಎಚ್.ವಸಂತ ಬೆರ್ನಾಡ್, ಮತ್ತು ರಮೇಶ್ ಬಂಗೇರ, ಹಿರಿಯ ಸದಸ್ಯರಾದ ಎಚ್.ಭಾಸ್ಕರ ಸಾಲ್ಯಾನ್, ಯಶೋಧರ ಸಾಲ್ಯಾನ್, ಸ್ನೇಹಾ ಬ್ರಿಜೇಶ್‌ಕುಮಾರ್, ರಾಕೇಶ್ ಸಾಲ್ಯಾನ್, ಪ್ರವೀಣ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

kINNIGOLI-15071701

Comments

comments

Comments are closed.

Read previous post:
Kinnigoli-12071701
ಹಳೆಯಂಗಡಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿದೆ

ಕಿನ್ನಿಗೋಳಿ: ಪ್ರಸ್ತುತ ವರ್ಷದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲವು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿದೆ. ಸಮಾಜಮುಖಿ ಚಿಂತನೆಯನ್ನು ಹಾಗೂ ಸಾಮಾಜಿಕ ಕಳಕಳಿಯ...

Close