ಕಟೀಲು ಗ್ರಾಮಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿಯ 2017-18 ರ ಪ್ರಥಮ ಹಂತದ ಗ್ರಾಮ ಸಭೆ ಕಟೀಲು ಗ್ರ್ಯಾಂಡ್ ಸಭಾಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು
ಕಿನ್ನಿಗೋಳಿ-ಉಲ್ಲಂಜೆ-ಕಟೀಲು ರಸ್ತೆಯ ಕೊಂಡೇಲದ ಬಳಿ ಅಗಲ ಕಿರಿದಾದ ಸೇತುವೆ ಬೀಳುವ ಹಂತದಲ್ಲಿದ್ದು ಸಮೀಪದಲ್ಲಿ ಅಳವಡಿಸಲಾಗಿದ್ದ ಇಂಟರ್ ಲಾಕ್ ಕೂಡಾ ಕಿತ್ತು ಹೋಗಿದೆ. ಬೇಗ ಸರಿಪಡಿಸಿ ಇನ್ನಷ್ಟು ಅಪಘಾತ ಸಂಭವಿಸದಂತೆ ನೋಡಿಕೊಳ್ಳಿ ಹಿಂದಿನ ಹಲವು ಗ್ರಾಮ ಸಭೆಗಳಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ, ಇಲ್ಲಿ ರಾತ್ರಿ ಸಂಚರಿಸುವುದು ಕಷ್ಟ ಅಗತ್ಯವಾಗಿ ದಾರಿ ದೀಪ ಅಳವಡಿಸಿ ಎಂದು ಗ್ರಾಮಸ್ಥ ಲೋಕಯ್ಯ ಕೊಂಡೇಲ ಎಂದು ಭಿನ್ನವಿಸಿದರು. ಇದಕ್ಕೆ ಉತ್ತರಿಸಿದ ಇಂಜಿನಿಯರ್ ವಿಭಾಗದ ಅಕಾರಿ ಪ್ರಶಾಂತ್ ಆಳ್ವ ಮಾತನಾಡಿ ಜಿಲ್ಲಾ ಪಂಚಾಯಿತಿ ರಸ್ತೆ ಆಗಿರುವ ಕಾರಣ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿಯೇ ಸರಿಪಡಿಸಬೇಕಾಗಿದೆ ಎಂದರು.
ಕಟೀಲಿನ ಸಿತ್ಲ ಅಣೆಕಟ್ಟು ನಿರ್ಮಾಣಗೊಂಡು ಹಲವು ವರ್ಷಗಳಾದರೂ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣವಾಗಿಲ್ಲ ಇದರಿಂದ ಕೃಷಿ ಭೂಮಿ ನದಿ ಪಾಲಾಗುತ್ತಿದೆ ಎಂದು ಸಿತ್ಲ ಜಗನಾಥ ಶೆಟ್ಟಿ ಆರೋಪಿಸಿದರು.
ಕಟೀಲು ಕುದ್ರು ಬಳಿ ಗಾಂಜ ಗಾಂಜ ವ್ಯಸನ ನಡೆಯುತ್ತಿದೆ ಈ ಬಗ್ಗೆ ಗಮನ, ಕಟೀಲು ದೇವಳ ಪರಿಸರದಲ್ಲಿ ಪಿಕ್ ಪ್ಯಾಕೆಟ್ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆಗಳಿವೆ ಶೀಘ್ರ ಕಟೀಲಿನಲ್ಲಿ ಹೊರಠಾಣೆ ಮಾಡುವಂತೆ ಪಂಚಾಯಿತಿ ಆಡಳಿತ ಹಾಗೂ ಪೋಲೀಸ್ ಇಲಾಖೆಗೆ ಮನವಿ ಮಾಡಿದರು.
ಕಟೀಲು ಕುದ್ರುಗೆ ಹೋಗುವ ದಾರಿಯಲ್ಲಿ ಶೌಚಾಲಯದ ನೀರು ತುಂಬಿ ನದಿಗೆ ಹರಿಯುತ್ತಿದೆ ಈ ಬಗ್ಗೆ ಗಮನ ಹರಿಸಬೇಕು ಎಂದು ಸಂಜೀವ ಮಡಿವಾಳ ಒತ್ತಾಯಿಸಿದರು ಕಟೀಲು ಬಸ್ ಸ್ಯಾಂಡ್ ಬಳಿ ಸಿ.ಸಿ ಕ್ಯಾಮಾರ ಅಳವಡಿಕರ, ಮಿತ್ತಬೈಲ್ ನಲ್ಲಿ ನಲ್ಲಿಯಲ್ಲಿ ಕೊಳಚೆ ನೀರು, ಕಟೀಲು ಹಾಲಿನ ಸೋಸೈಟಿ ಬಳಿ ಮುರಿದ ಕಂಬ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ತೋಟಗಾರಿಕೆ ಇಲಾಖೆಯ ಸುಕುಮಾರ್ ಹೆಗ್ಡೆ ನೋಡಲ್ ಅಕಾರಿಯಾದ್ದರು. ಕಂದಾಯ ಇಲಾಖೆಯ ಪ್ರದೀಪ್ ಶೆಣೈ, ಪಂಚಯಿತಿರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಮೆಸ್ಕಾಂ ಅಕಾರಿ ಚಂದ್ರಹಾಸ್, ಪಶು ವೈದ್ಯಾಕಾರಿ ಸತ್ಯ ಶಂಕರ್, ಸಮಾಜ ಕಲ್ಯಾಣ ಇಲಾಖೆಯ ಶೀಲಾವತಿ, ಕಟೀಲು ಪ್ರಾಥಮಿಕ ಕೇಂದ್ರ ವೈದ್ಯಾಕಾರಿ ಡಾ. ಭಾಸ್ಕರ ಕೋಟ್ಯಾನ್ ಮಾಹಿತಿ ನೀಡಿದರು.
ಕಟೀಲು ದೇವಳದ ಪ್ರಭಂಧಕ ತಾರಾನಾಥ ಶೆಟ್ಟಿ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಸುಕುಮಾರ್ ಸನೀಲ್, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

kINNIGOLI-15071709

Comments

comments

Comments are closed.

Read previous post:
kINNIGOLI-15071708
ಕೌಶಲ್ಯಾಧಾರಿತ ಶಿಕ್ಷಣ ಅಗತ್ಯವಿದೆ

ಕಿನ್ನಿಗೋಳಿ: ಕೇವಲ ಪದವಿ ಮಾಡಿ ಉದ್ಯೋಗ ಅರಸುವ ಬದಲಿಗೆ ಕೌಶಲ್ಯಾಧಾರಿತ ಶಿಕ್ಷಣದ ಮೂಲಕ ಉತ್ತಮ ತರಬೇತಿ ಪಡೆದು ಸ್ವ ಉದ್ಯೋಗದ ಕನಸು ಕಂಡು ಯುವಜನರು ಸ್ವಾವಲಂಬಿಯಾಗಬೇಕು. ಸರಕಾರದ ಮುಖ್ಯಮಂತ್ರಿ...

Close