ಸವಲತ್ತು ಮಾಹಿತಿ ಕಾರ್ಯಗಾರ

ಕಿನ್ನಿಗೋಳಿ: ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗಪಡಿಸಿ ಬಡತನದಿಂದ ಮುಕ್ತಿ ಪಡೆದು ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕು ಎಂದು ಸಿ.ಒ.ಡಿ.ಪಿ ಸಂಸ್ಥೆಯ ನಿರ್ದೇಶಕ ವಂ. ಫಾ. ಓಸ್ವಾಲ್ದ್ ಮೊಂತೇರೋ ಹೇಳಿದರು.
ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ( ರಿ ) ಮಂಗಳೂರು ಸಿ. ಒ.ಡಿ. ಪಿ ಪ್ರವರ್ತಿತ ಹಾ ಒಕ್ಕೂಟದ ವತಿಯಿಂದ ಪಕ್ಷಿಕರೆ ರುಸೆಂಫ್ ಸಂಸ್ಥೆಯ ಸಭಾಭವನದಲ್ಲಿ ಕಟ್ಟಡ ಕಾರ್ಮಿಕರ ನೊಂದಾವಣೆ ಮತ್ತು ಇತರ ಸವಲತ್ತುಗಳ ಬಗ್ಗೆ ಕಾರ್ಯಗಾರ ಉದ್ಘಾಟಿಸಿ ಮಾತನಡಿದರು.
ಸಂಸ್ಥೆಯ ಸಂಯೋಜಕ ರವಿಕುಮಾರ ಕ್ರಾಸ್ತ ತರಬೇತಿ ಹಾಗೂ ಮಾಹಿತಿ ನೀಡಿದರು. ಉನ್ನತಿ ಮಹಾಸಂಘದ ಕಾರ್ಯದರ್ಶಿ ತೋಮಸ್ ರೋಡ್ರಿಗಸ್ ಸ್ವಾಗತಿಸಿದರು. ಪುಷ್ಪವೇಣಿ ವಂದಿಸಿದರು. ಸಿ.ಒ.ಡಿ.ಪಿ ಸಂಸ್ಥೆಯ ಕಲಾ ಗಿರೀಶ್ ಸಹಕರಿಸಿದರು.

kINNIGOLI-150717014

Comments

comments

Comments are closed.

Read previous post:
kINNIGOLI-150717013
ಕಿನ್ನಿಗೋಳಿ ವಿಶೇಷ ಯೋಗ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ವಿಶೇಷ ಶಿಬಿರವನ್ನು ಯೋಗಗುರು ಜಯಮುದ್ದು ಶೆಟ್ಟಿ ಕೆಂಚನಕೆರೆ ನಡೆಸಿಕೊಟ್ಟರು. ಸುಮಾರು 400 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು.ಈ ಸಂದರ್ಭ ಶಾಲಾ...

Close