ಸರಕಾರಿ ಶಾಲಾ ಅಭಿವೃದ್ಧಿಗೆ ಸಹಕಾರ

ಕಿನ್ನಿಗೋಳಿ: ಸರಕಾರಿ ಶಾಲೆಗಳಲ್ಲಿಯೂ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ತೋಕೂರು ಯುವಕ ಸಂಘ ತನ್ನ ಸುವರ್ಣ ವರ್ಷದಲ್ಲಿ ಹಲವಾರು ಯೋಜನೆಗಳನ್ನು ಸರಕಾರಿ ಶಾಲೆಗಳಲ್ಲಿಯೇ ನಡೆಸುತ್ತಿದೆ. ಪೋಷಕರು ಸಹ ಸರಕಾರಿ ಖಾಸಗಿ ಶಾಲೆಗಳೆಂಬ ಭೇಧವನ್ನು ತೋರದೇ ಶಿಕ್ಷಣದ ಮೌಲ್ಯಕ್ಕೆ ಆದ್ಯತೆ ನೀಡಬೇಕು ಎಂದು ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಹೇಳಿದರು.
ತೋಕೂರು ಯುವಕ ಸಂಘದಿಂದ ಸುವರ್ಣ ಮಹೋತ್ಸವದ ವರ್ಷದ ಅಂಗವಾಗಿ ಸಾಮಾಜಿಕ ಕಾರ್ಯಕ್ರಮದ ನೆಲೆಯಲ್ಲಿ ಪಡುಪಣಂಬೂರು ಗ್ರಾಮ ಪಂಚಾಯಿತಿ ಬೆಳ್ಳಾಯರು ಗ್ರಾಮದ ಕೆರೆಕಾಡು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಹೇಮನಾಥ್ ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಪಡೆಯುವ ಹಕ್ಕು ಮಕ್ಕಳಲ್ಲಿದ್ದು ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸಬೇಕು. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಗ್ರಾಮದ ಸಂಘ ಸಂಸ್ಥೆಗಳು ಆಸರೆಯಾಗಿರಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರೀ. ತೋಕೂರು ಯುವಕ ಸಂಘದ ಸದಸ್ಯರಾದ ಗೋಪಾಲ ಮೂಲ್ಯ, ಮಧುಸೂಧನ್ ಸುವರ್ಣ ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕ ನವೀನ್ ಡಿ ಕೋಸ್ತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

kINNIGOLI-150717012

 

Comments

comments

Comments are closed.

Read previous post:
kINNIGOLI-150717011
ಕಟೀಲು : ಧನಸಹಾಯ

ಕಿನ್ನಿಗೋಳಿ: ಅನಾರೋಗ್ಯದಿಂದ ಬಳಲುತ್ತಿರುವ ಕೊಂಡೇಲ ಕಾಂತಪ್ಪ ಪೂಜಾರಿ ಅವರಿಗೆ ಚಿಕಿತ್ಸೆಗಾಗಿ ಕಟೀಲು ರಿಕ್ಷಾ ಚಾಲಕ ಮಾಲಕರ ಸಂಘದ ಆರೋಗ್ಯ ನಿಧಿಯಿಂದ ರೂ. 10 ಸಾವಿರವನ್ನು ನೀಡಲಾಯಿತು. ಸಂಘದ ಅಧ್ಯಕ್ಷ ಶ್ರೀಧರ...

Close