ಹಳೆಯಂಗಡಿ ಗ್ರಾಮ ಸಭೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ಪ್ರಥಮ ಹಂತದ ಗ್ರಾಮ ಸಭೆ ಕದಿಕೆ ಸಾಲ್ಯಾನ್ ಮೂಲಸ್ಥಾನದ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಲಜಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಆರು ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಯಾರೂ ಸಹ ಈ ಬಗ್ಗೆ ಗಮನ ಕೊಡುವುದಿಲ್ಲ ಯಾಕೆ..? ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾವನೆ ನಡೆಸಲೇಬೇಕು ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆಕ್ಷೇಪಕ್ಕೆ ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಉತ್ತರಿಸಿ ಈ ಬಗ್ಗೆ ಕಳೆದ ಕೆಲವು ಸಭೆಗಳಲ್ಲಿ ವಿಷಯ ಪ್ರಸ್ತಾವನೆಗೊಂಡಿದೆ. ಕೆಲವೊಂದು ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ಅಲ್ಲದೆ ಅದೇ ದಿನದಲ್ಲಿ ಹಲವು ಕಡೆಗಳಲ್ಲಿ ಗ್ರಾಮ ಸಭೆಯು ನಡೆಯುತ್ತದೆ ಎಂಬ ಉತ್ತರ ಇಲಾಖಾಧಿಕಾರಿಗಳು ನೀಡುತ್ತಾರೆ ಎಂದರು.
ಗೊಂದಲದಲ್ಲಿ ಪಡಿತರ ಚೀಟಿ ಪರಿಪಾಟಲು
ಪಡಿತರ ಚೀಟಿ ಸಿಗದೇ ಇರುವುದರಿಂದ ಬಡವರಿಗೆ ತುಂಬಾ ತೊಂದರೆಯಾಗುತ್ತದೆ ಎಂಬ ಗ್ರಾಮಸ್ಥರ ಅಳಲಿಗೆ ಆಹಾರ ಮತ್ತು ಪಡಿತರ ವಿತರಣಾ ಸಹಾಯಕ ನಿರ್ದೇಶಕ ವಾಸು ಶೆಟ್ಟಿ ಉತ್ತರಿಸಿ ಎಪಿಎಲ್‌ನಿಂದ ಬಿಪಿಎಲ್ ಪಡಿತರ ಚೀಟಿಗೆ ವರ್ಗಾಯಿಸುವಲ್ಲಿ ತೊಡಕಾಗಿದೆ. ಸರಕಾರದ ನಿರ್ದೇಶನದಂತೆ ಪಡಿತರ ಚೀಟಿಯನ್ನು ವಿತರಿಸಲಾಗುತ್ತಿದೆ. ಹೊಸ ಆದೇಶ ಬರುವವರೆಗೆ ತಿದ್ದುಪಡಿ ಇನ್ನಿತರ ವ್ಯವಸ್ಥೆ ಇನ್ನೂ ನಡೆದಿಲ್ಲ. ಹೊಸ ಪಡಿತರ ಚೀಟಿಯನ್ನು ಪಡೆಯಲು ಸೂಕ್ತ ಮಾನದಂಡ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗುವುದು. ಎಂದರು.

ಆಧಾರ್ ನೋಂದಣಿಯನ್ನು ಬೇಡಿಕೆ ಇದ್ದಲ್ಲಿ ಅಂಗನವಾಡಿ ಕೇಂದ್ರದಲ್ಲಿಯೇ ಮಾಡಲಾಗುವುದು. ಕೌಶಲ್ಯ ಯೋಜನೆಯಲ್ಲಿ ನೇರವಾಗಿ ಗ್ರಾಮ ಪಂಚಾಯತ್‌ನ ಮೂಲಕ ಆನ್‌ಲೈನ್‌ನಲ್ಲಿ ನೋಂದಾವಣಿ ಮಾಡಲು ಸಾಧ್ಯವಿದೆ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಾಧುರಿ ಪ್ರತಿಕ್ರಿಯಿಸಿದರು.

Kinnigoli-20071703ಹಳೆಯಂಗಡಿ ವ್ಯಾಪ್ತಿಯಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ ಆದರೂ ಶುಚಿತ್ವಕ್ಕೆ ವಿಶೇಷ ಆದ್ಯತೆ ನೀಡಿ ಮಳೆಗಾಲದಲ್ಲಿ ಕೆಮ್ಮು, ಜ್ವರ ಬಂದರೇ ನೇರವಗಿ ವೈದ್ಯರಲ್ಲಿ ತಪಾಸಣೆ ನಡೆಸಿ ಔಷಧವನ್ನು ಪಡೆದುಕೊಳ್ಳಿ ನಿರ್ಲಕ್ಷ ಮಾಡಬೇಡಿ ಎಂದು ಕೆಮ್ರಾಲ್ ಆರೋಗ್ಯ ಕೇಂದ್ರದ ಚಂದ್ರಪ್ರಭಾ ಹೇಳಿದರು.
ಮಂಗಳೂರಿನಿಂದ ಎನ್‌ಐಟಿಕೆಯವರೆಗೆ ಬರುವ ಸರಕಾರಿ ಬಸ್ಸು ಹಳೆಯಂಗಡಿ ಮೂಲಕ ಕಟೀಲಿನತ್ತ ತೆರಳಲು ನಿರ್ಣಯಿಸಲು ಒತ್ತಾಯ, ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರ ಆಕ್ಷೇಪ, ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದ ಇಲಾಖೆಯ ಅಧಿಕಾರಿಗಳಿಂದ ಸ್ಪಷ್ಟವಾಗಿ ಮಾಹಿತಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿಕೊಂಡರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯಶೋಧರ್ ಜೆ. ನೋಡೆಲ್ ಅಧಿಕಾರಿಯಾಗಿ ಭಗವಹಿಸಿದ್ದರು. ಹಳೆಯಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ಹಮೀದ್, ಅಬ್ದುಲ್ ಬಶೀರ್, ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಝೀಝ್, ವಿನೋದ್‌ಕುಮಾರ್, ಸುಖೇಶ್, ಸುಗಂಧಿ, ಶರ್ಮಿಳಾ ಎನ್. ಕೋಟ್ಯಾನ್, ಅಶೋಕ್ ಬಂಗೇರ, ಚಿತ್ರಾ ಸುಖೇಶ್, ಗುಣವತಿ, ಮಾಲತಿ ಡಿ. ಕೋಟ್ಯಾನ್, ಪಂಚಾಯಿತಿರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವ, ಅರಣ್ಯ ಇಲಾಖೆಯ ಎಂ.ಬಿ.ಶೇಷಪ್ಪ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸ್ವಾಗತಿಸಿದರು, ಕಾರ್ಯದರ್ಶಿ ಕೇಶವ ದೇವಾಡಿಗ ವಂದಿಸಿದರು.

Comments

comments

Comments are closed.

Read previous post:
Kinnigoli-20071702
ಹಳೆಯಂಗಡಿ : ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ ಮೂರು ವರ್ಷಗಳಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಅನುದಾನ ವಿನಿಯೋಗಿಸಲಾಗಿದ್ದು ಮುದ್ರಾ ಯೋಜನೆಯಲ್ಲಿ 50744 ಫಲಾನುಭವಿಗಳು 747 ಕೋ.ರೂ. ಸಾಲವನ್ನು ಪಡೆದು ಸ್ವಾವಲಂಬಿ...

Close