ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನೆ

ಕಿನ್ನಿಗೋಳಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಯ ಜೊತೆಗೆ ಇತರ ಆಸಕ್ತ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳ ಮೂಲಕ ವಿಶೇಷ ತರಭೇತಿಯನ್ನು ಪಡೆಯುವುದರಿಂದ ಉತ್ತಮ ಉದ್ಯೋಗ ಪಡೆದುಕೊಳ್ಳಲು ಮತ್ತು ಸ್ವಂತ ಉದ್ಯೋಗ ಮಾಡಲು ಸಹಕಾರಿಯಾಗುತ್ತದೆ. ಪ್ರಪಂಚದ ಸುಮಾರು ಅರುವತ್ತಾರು ರಾಷ್ಟ್ರಗಳಲ್ಲಿ ಇಂಗ್ಲೀಷ್ ಅಧಿಕೃತ ಭಾಷೆಯಾಗಿದ್ದು ಉತ್ತಮಇಂಗ್ಲಿಷ್ eನ ಉದ್ಯೋಗ ಮಾರುಕಟ್ಟೆಯಲ್ಲಿಅತೀಅವಶ್ಯ ಎಂದು ಮಂಗಳೂರು ಸಂತ ಅಲೋಶಿಯಸ್ ಸಂಧ್ಯಾಕಾಲೇಜಿನ ಡಾ. ಚಾರ್ಲ್ಸ್ ವಿ ಫುರ್ಟಾಡೋ ಹೇಳಿದರು.
ಐಕಳ ಪೊಂಪೈ ಪದವಿ ಕಾಲೇಜಿನಲ್ಲಿ 2017-18 ನೇ ಸಾಲಿನಲ್ಲಿ ನಡೆಸುವ 12 ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಐಕಳ ಪೊಂಪೈ ಕಾಲೇಜು ಸಂಚಾಲಕ ರೆ. ಫಾ. ವಿಕ್ಟರ್ ಡಿ.ಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಸರ್ಟಿಫಿಕೇಟ್ ಕೋರ್ಸ್‌ಗಳ ಸಂಯೋಜಕ ಎಸೋಸಿಯೇಟ್ ಪ್ರೊಫೆಸರ್ ಪುರುಷೋತ್ತಮ ಕೆ. ವಿ. ವಿವಿಧ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರೆನ್ಸ್ ಸಿ. ಮಿರಾಂದ ಸ್ವಾಗತಿಸಿದರು. ಸರ್ಟಿಫಿಕೇಟ್ ಕೋರ್ಸ್‌ಗಳ ಸಹ ಸಂಯೋಜಕ ಡಾ. ಇ. ವಿಕ್ಟರ್ ವಾಜ್ ವಂದಿಸಿದರು. ಸಿಲ್ವಿಯ ಐಲಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigoli20071701

 

Comments

comments

Comments are closed.

Read previous post:
kINNIGOLI-150717014
ಸವಲತ್ತು ಮಾಹಿತಿ ಕಾರ್ಯಗಾರ

ಕಿನ್ನಿಗೋಳಿ: ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗಪಡಿಸಿ ಬಡತನದಿಂದ ಮುಕ್ತಿ ಪಡೆದು ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕು ಎಂದು ಸಿ.ಒ.ಡಿ.ಪಿ ಸಂಸ್ಥೆಯ ನಿರ್ದೇಶಕ ವಂ. ಫಾ. ಓಸ್ವಾಲ್ದ್ ಮೊಂತೇರೋ ಹೇಳಿದರು. ಕೆನರಾ...

Close