ಹಳೆಯಂಗಡಿ : ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ ಮೂರು ವರ್ಷಗಳಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಅನುದಾನ ವಿನಿಯೋಗಿಸಲಾಗಿದ್ದು ಮುದ್ರಾ ಯೋಜನೆಯಲ್ಲಿ 50744 ಫಲಾನುಭವಿಗಳು 747 ಕೋ.ರೂ. ಸಾಲವನ್ನು ಪಡೆದು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ವಿವಿಧ ಯೋಜನೆಗಳಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೇ ಇರುವುದರಿಂದ ಬಿಜೆಪಿ ಕಾರ್ಯಕರ್ತರು ನಾಗರಿಕರಿಗೆ ಯೋಜನೆಯ ಬಗ್ಗೆ ನಿಖರ ಮಾಹಿತಿ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ವಿಕಾಸ ಪುತ್ತೂರು ಹೇಳಿದರು.
ಹಳೆಯಂಗಡಿ ಶ್ರೀನಿವಾಸ ಕಲಾಮಂದಿರದಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಾರ್ಟಿ ಗ್ರಾಮ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿ ಶಕ್ತಿಕೇಂದ್ರದ ಸಹಕಾರದಲ್ಲಿ ಎನ್‌ಡಿಎ ಸರಕಾರದ 3 ವರ್ಷಗಳ ಸಾಧನೆ ಹಾಗೂ ಯೋಜನೆಗಳ ಮಾಹಿತಿ ಕಾರ್ಯಾಗಾರ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ವಿಸ್ತಾರಕ ಪ್ರಮುಖ್ ಶ್ಯಾಮಲಾ ಕುಂದರ್ ಕಾರ್ಯಾಗಾರ ಉದ್ಘಾಟಿಸಿದರು.
ಮೂಲ್ಕಿ ಮೂಡಬಿದಿರೆ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯರಾದ ಜೀವನ್ ಪ್ರಕಾಶ್ ಕಾಮೆರೊಟ್ಟು, ರಶ್ಮಿ ಆಚಾರ್ಯ, ವಜ್ರಾಕ್ಷಿ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ವಿನೋದ್ ಸಾಲ್ಯಾನ್ ಬೆಳ್ಳಾಯರು, ಬಿ.ಜೆ.ಪಿ ಮುಖಂಡ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಕೆಮ್ರಾಲ್‌ನ ಪಂಚಾಯಿತಿ ನಾಗೇಶ್, ವೈದ್ಯರ ಪ್ರಕೋಷ್ಠದ ಡಾ.ನಿಶಾಂಕ್ ಶೆಟ್ಟಿಗಾರ್, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು ಸ್ವಾಗತಿಸಿದರು, ನಿಶಾ ಎಂ. ವಂದಿಸಿದರು. ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್ ನಿರೂಪಿಸಿದರು.

Kinnigoli-20071702

Comments

comments

Comments are closed.

Read previous post:
Kinnigoli-20071701
ಕೆಂಚನಕರೆ: ಕೊಡೆ ವಿತರಣೆ

ಕಿನ್ನಿಗೋಳಿ: ಕೆಂಚನಕರೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಂಗರಗುಡ್ಡೆ ರಾಮನಗರ ಶ್ರೀ ರಾಮ ಭಜನಾ ಮಂದಿರದ ಆಶ್ರಯದಲ್ಲಿ ಕೊಡೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಶ್ರೀರಾಮ ಭಜನಾ ಮಂದಿರ ಮಾಜಿ...

Close