ಏಳಿಂಜೆ : ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ವಿವಿಧ ಸಮಾಜಮುಖಿ ಕೆಲಸಕಾರ್ಯಗಳನ್ನು ಏರ್ಪಡಿಸುತ್ತಿದ್ದು ಜನರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾ ಟ್ರಸ್ಟ್ ನ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನಾಥ ಶೆಟ್ಟ ಹೇಳಿದರು
ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ, ಸಂಚಾರಿ ನೇತ್ರ ಘಟಕ ವೆನ್ ಲಾಕ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಮಂಗಳೂರು, ಐಕಳ ಗ್ರಾಮ ಪಂಚಾಯಿತಿ, ಏಳಿಂಜೆ ನವಚೇತನ ಯುವಕ ಮಂಡಲ, ಏಳಿಂಜೆ ಶ್ರೀ ದೇವಿ ಯುವತಿ ಮತ್ತು ಮಹಿಳಾ ಮಂಡಲ ಸಂಸ್ಥೆಗಳ ಸಹಯೋಗದಲ್ಲಿ ಏಳಿಂಜೆ ಶ್ರೀ ಲಕ್ಷೀ ಜನಾರ್ಧನ ದೇವಳದ ಆವರಣದಲ್ಲಿ ಭಾನುವಾರ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಯೋಗೀಶ್ ರಾವ್ ಏಳಿಂಜೆ ಕಾರ್ಯಕ್ರಮ ಉದ್ಘಾಟಿಸಿದರು.
ವೆನ್‌ಲಾಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ ಅನಿಲ್ ನೇತ್ರಾ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು, ಈ ಸಂದರ್ಭ ಏಳಿಂಜೆ ದೇವಳದ ಪ್ರಧಾನ ಅರ್ಚಕ ಗಣೇಶ್ ಭಟ್, ನವಚೇತನ ಯುವಕ ಮಂಡಲ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದೇವಿ ಮಹಿಳಾ ಮತ್ತು ಯುವತಿ ಮಂಡಲದ ಅಧ್ಯಕ್ಷೆ ರಜನಿ ಆರ್ ಕೋಟ್ಯಾನ್ ಐಕಳ ಪಂಚಾಯಿತಿ ಪಿ.ಡಿ.ಓ ನಾಗರತ್ನ ಜಿ., ಏಳಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನಂದನ ಮನೆ, ಡಾ. ಕಾರ್ತಿಕ್ ಮತ್ತಿತರರು ಉಪಸ್ಥಿತಿಯಿದ್ದರು.
ಲಕ್ಷಣ ಬಿ ಬಿ ಏಳಿಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಸೀತಾರಾಮ ಶೆಟ್ಟಿ ವಂದಿಸಿದರು.

Kinnigoli21071701

Comments

comments

Comments are closed.

Read previous post:
Kinnigoli14071701
ಕಿನ್ನಿಗೋಳಿ ಪಶುಚಿಕಿತ್ಸಾಲಯಕ್ಕೆ ಭೂಮಿಪೂಜೆ

ಕಿನ್ನಿಗೋಳಿ: ಉತ್ತಮ ಆರೋಗ್ಯದಿಂದ ಮಾತ್ರ ಸುಖ ಜೀವನ ಸಾಧ್ಯ. ವನ್ನು ಅನುಭವಿಸಬಹುದು, ಮಕ್ಕಳ ಬಗ್ಗೆ ಕಾಳಜಿ ವಹಿಸುವ ಗೃಹಿಣಿಯರು ತಮ್ಮ ಆರೋಗ್ಯದತ್ತಲೂ ಗಮನ ಹರಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ...

Close