ಉಚಿತ ವೈದ್ಯಕೀಯ ಚಿಕಿತ್ಸಾ ಮತ್ತು ಮಾಹಿತಿ ಶಿಬಿರ

ಕಿನ್ನಿಗೋಳಿ: ಹದಿಹರೆಯದ ಮಕ್ಕಳಲ್ಲಿ ಆರೋಗ್ಯ ಬಗ್ಗೆ ಜಾಗೃತಿ ಮತ್ತು ಮಾಹಿತಿ ಇದ್ದರೆ ಮುಂದೆ ಆಗಬಹುದಾದ ದೈಹಿಕ, ಮಾನಸಿಕ ತೊಂದರೆಗಳನ್ನು ತಡೆಗಟ್ಟಿ ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು ಎಂದು ಮುಲ್ಕಿ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ದಕ್ಷಿಣಕನ್ನಡ ಜಿಲ್ಲಾ ಯೋಜನಾ ಸಮಿತಿಯ ಸದಸ್ಯ ಹರ್ಷರಾಜ್ ಶೆಟ್ಟಿ ಹೇಳಿದರು.
ತಪೋವನ, ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ, ರಾಷ್ಟ್ರೀಯ ಸೇವಾ ಘಟಕ ಮತ್ತು ರೋವರ್ಸ್ ಘಟಕ, ಎಂ. ಆರ್.ಪೂಂಜಾ ಐ.ಟಿ.ಐ., ತಪೋವನ ಮತ್ತು ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯ ದೇರಳಕಟ್ಟೆ ಇವರ ಜಂಟೀ ಆಶ್ರಯದಲ್ಲಿ ಸೋಮವಾರ ನಡೆದ ವೈದ್ಯಕೀಯ ಚಿಕಿತ್ಸಾ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಡಾ. ರಶ್ಮಿ ಕುಂದಾಪುರ್ ಕ್ಷೇಮ, ದೇರಳಕಟ್ಟೆ ಶಿಬಿರದ ಮಹತ್ವ ತಿಳಿಸಿದರು.
ಈ ಸಂದರ್ಭ ಎಂ.ಆರ್.ಪೂಂಜಾ ಐ.ಟಿ.ಐ. ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್, ಸಂಸ್ಥೆಯ ತರಬೇತಿ ಅಧಿಕಾರಿ ರಘುರಾಮ್ ರಾವ್, ಎನ್.ಎನ್.ಎಸ್ ಅಧಿಕಾರಿ ಹರಿ.ಹೆಚ್ , ಸಂಜೀವ ದೇವಾಡಿಗ , ಸುರೇಶ್ ಎಸ್., ವಿಶ್ವನಾಥ್ ರಾವ್, ಶಯನಾ ಬಿ., ಮತ್ತಿತರರು ಉಪಸ್ಥಿತರಿದ್ದರು.

Kinnigoli-20071704

Comments

comments

Comments are closed.

Read previous post:
Kinnigoli-20071703
ಹಳೆಯಂಗಡಿ ಗ್ರಾಮ ಸಭೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ಪ್ರಥಮ ಹಂತದ ಗ್ರಾಮ ಸಭೆ ಕದಿಕೆ ಸಾಲ್ಯಾನ್ ಮೂಲಸ್ಥಾನದ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ...

Close