ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ

ಕಿನ್ನಿಗೋಳಿ: ಭಾರತ ಪರಿಕ್ರಮ ಯಾತ್ರೆಯನ್ನು ಮುಗಿಸಿದ ಆರ್‌ಎಸ್‌ಎಸ್ ಮಾಜಿ ಹಿರಿಯ ಪ್ರಚಾರಕ್ ಸೀತಾರಾಮ ಕೆದಿಲಾಯ ಪಕ್ಷಿಕೆರೆ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ ನೀಡಿದರು. ದೇವಳದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ ಅವರು ಸೀತಾರಾಮ ಕೆದಿಲಾಯ ಅವರಿಗೆ ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಗೌರವಿಸಿದರು ಈ ಸಂದರ್ಭ ಕೆದಿಲಾಯರ ಜೊತೆ ಯಾತ್ರೆಯಲ್ಲಿದ್ದ ರವೀಂದ್ರನಾಥ ರೈ, ಕೆಮ್ರಾಲ್ ಪಂಚಾಯತ್ ಸದಸ್ಯ ಸುಧಾಕರ ಶೆಟ್ಟಿ , ಸುರಗಿರಿ ಯುವಕ ಮಂಡಲದ ಅಧ್ಯಕ್ಷ ಸಚಿನ್ ಶೆಟ್ಟಿ, ಉಮೇಶ್ ಪಂಜ, ಪಾರ್ಥಸಾರಥಿ, ಅಶೋಕ ದಾದಿ, ರಮಣಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-20071706

Comments

comments

Comments are closed.

Read previous post:
Kinnigoli-20071705
ಕಿನ್ನಿಗೋಳಿ ರೋಟರಿ ವನಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್ ಹಾಗೂ ರೋಟರಿ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಸಹಯೋಗದಲ್ಲಿ ಗುರುವಾರ ವನಮಹೋತ್ಸವ ಆಚರಿಸಲಾಯಿತು. ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ, ಶಾಲಾ...

Close