ಕಿನ್ನಿಗೋಳಿ ಪಶುಚಿಕಿತ್ಸಾಲಯಕ್ಕೆ ಭೂಮಿಪೂಜೆ

ಕಿನ್ನಿಗೋಳಿ: ಉತ್ತಮ ಆರೋಗ್ಯದಿಂದ ಮಾತ್ರ ಸುಖ ಜೀವನ ಸಾಧ್ಯ. ವನ್ನು ಅನುಭವಿಸಬಹುದು, ಮಕ್ಕಳ ಬಗ್ಗೆ ಕಾಳಜಿ ವಹಿಸುವ ಗೃಹಿಣಿಯರು ತಮ್ಮ ಆರೋಗ್ಯದತ್ತಲೂ ಗಮನ ಹರಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ್ಕಿ ವಲಯದ ಮೇಲ್ವಿಚಾರಕಿ ನಿಶ್ಮಿತಾ ವಿಜಯಕುಮಾರ್ ಹೇಳಿದರು.
ಹಳೆಯಂಗಡಿ ಹರಿ ಓಂ ಅಪಾರ್ಟ್‌ಮೆಂಟ್ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ್ಕಿ ವಲಯ, ಹಳೆಯಂಗಡಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್, ಹಳೆಯಂಗಡಿಯ ರೆ. ಜೋರ್ಜ್.ಎ.ಬೆರ್ನಾರ್ಡ್ ಮೆಮೋರಿಯಲ್ ಟ್ರಸ್ಟ್‌ನ ಜಂಟಿ ಸಂಯೋಜನೆಯಲ್ಲಿ ಹೆಲ್ತ್‌ಕೇರ್ ಡಯಗ್ನೋಸ್ಟಿಕ್ ಸೆಂಟರ್ ಹಾಗೂ ಬಜ್ಪೆಯ ರೋಯಲ್ ಐ ಕ್ಯಾರ್ ಸೆಂಟರ್‌ನ ಸಹಕಾರದಲ್ಲಿ ಭಾನುವಾರ ನಡೆದ ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ವೈದ್ಯ ಡಾ. ಸುಧಾಕರ ಅಮೀನ್ ಶಿಬಿರವನ್ನು ಉದ್ಘಾಟಿಸಿ ಆರೋಗ್ಯದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿದರು.
ಹಳೆಯಂಗಡಿ ಲಯನ್ಸ್ ಕ್ಲ್‌ಬ್‌ನ ನಿಯೋಜಿತ ಅಧ್ಯಕ್ಷ ವಾಸು ನಾಯಕ್, ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾನಿಲ್, ಮಾಜಿ ಅಧ್ಯಕ್ಷರಾದ ರಮೇಶ್ ಬಂಗೇರ, ಮೋಹನ್ ಸುವರ್ಣ, ಅಧ್ಯಕ್ಷ ಬ್ರಿಜೇಶ್‌ಕುಮಾರ್, ಹಿರಿಯ ಸದಸ್ಯರಾದ ಭಾಸ್ಕರ ಸಾಲ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಪಣಂಬೂರು ಸೇವಾ ಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು, ಹಳೆಯಂಗಡಿ ಸೇವಾ ಪ್ರತಿನಿಧಿ ಮೋಹಿನಿ ಕೆ., ಹಳೆಯಂಗಡಿ ಗ್ರಾ.ಪಂ.ನ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಹಳೆಯಂಗಡಿ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಕದಿಕೆ, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ಧರ್ಮಾನಂದ ಶೆಟ್ಟಿಗಾರ್ ತೋಕೂರು, ಮಿರ್ಜಾ ಸಾಹೇಬ್, ಹೆಲ್ತ್‌ಕೇರ್ ಸೆಂಟರ್‌ನ ಜಾರ್ಜ್‌ಟ್ ಬೆರ್ನಾಡ್, ಶಿಬಿರದ ವೈದ್ಯರಾದ ಡಾ.ಪ್ರಕಾಶ್ ಹರಿಶ್ಚಂದ್ರ, ಡಾ. ಜಾಫರ್, ಮಕ್ಕಳ ತಜ್ಞ ಡಾ. ಕಿರಣ್‌ರಾಜ್ ಉಪಸ್ಥಿತರಿದ್ದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್ ಸ್ವಾಗತಿಸಿ, ನಿರೂಪಿಸಿದರು. ಹಳೆಯಂಗಡಿ ಲಯನ್ಸ್ ಕ್ಲಬ್‌ನ ನಿಯೋಜಿತ ಕಾರ್ಯದರ್ಶಿ ರಾಕೇಶ್ ಸಾಲ್ಯಾನ್ ವಂದಿಸಿದರು.

Kinnigoli14071701

Comments

comments

Comments are closed.

Read previous post:
Kinnigoli-20071703
ಹಳೆಯಂಗಡಿ ಗ್ರಾಮ ಸಭೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ಪ್ರಥಮ ಹಂತದ ಗ್ರಾಮ ಸಭೆ ಕದಿಕೆ ಸಾಲ್ಯಾನ್ ಮೂಲಸ್ಥಾನದ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ...

Close