ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

ಕಿನ್ನಿಗೋಳಿ: ಕುಶಲಕರ್ಮಿಗಳು ಸದಾ ಕ್ರಿಯಶೀಲರಾಗಿ ಕೌಶಲ್ಯ ಭಾರತದ ಕನಸನ್ನು ನನಸಾಗಿಸಬೇಕು ಮತ್ತು ಕಲಿಕೆಯೊಂದಿಗೆ ಗಳಿಕೆಗೂ ಆದ್ಯತೆಕೊಟ್ಟು ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೋಳಿಸಬೇಕು ಎಂದು ಮಂಗಳೂರು ಹೆಬಿಕ್ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ಚೇತನ್ ಆರ್ ಹೇಳಿದರು.
ತಪೋವನ, ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎರಡು ವರ್ಷದ ತರಬೇತಿಯನ್ನು ಪೂರೈಸಿದ ಕುಶಲಕರ್ಮಿಗಳಿಗೆ ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಮಂತ್ರಾಲಯ ನವದೆಹಲಿ ಇವರು ಕೊಡಮಾಡಿದ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರಗಳನ್ನು ಮಂಗಳವಾರ ವಿತರಿಸಿ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್ ಮಾತನಾಡಿ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರವು ಭಾರತ ದೇಶದ ಲಾಂಛನವನ್ನು ಹೊಂದಿದ್ದು ದೇಶ ಹಾಗೂ ವಿದೇಶಗಳಲ್ಲಿ ಉದ್ಯೋಗಗಳಿಸುವಲ್ಲಿ ಮತ್ತು ತಮ್ಮದೇ ಸ್ವಂತ ಉದ್ಯಮ ಪ್ರಾರಂಭಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ರಘುರಾಮ್ ರಾವ್, ಸಂಜೀವ ದೇವಾಡಿಗ ಮತ್ತು ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಅಂಜಲಿ ಎಸ್. ಗಡಿಯಾರ್ ಮತ್ತು ನಿಕಿತ ಪ್ರಾರ್ಥಿಸಿದರು. ವಿಶ್ವನಾಥ್ ರಾವ್ ಪ್ರಸ್ತಾವಿಸಿ ಗಣ್ಯರನ್ನು ಸ್ವಾಗತಿಸಿದರು. ಉದಯಕುಮಾರ್ ವಂದಿಸಿದರು. ಹರಿ ಹೆಚ್ ಕಾರ್ಯಕ್ರಮ ನಿರೂಪಿಸಿದರು.

Kinnigoli-20071707

Comments

comments

Comments are closed.

Read previous post:
Kinnigoli-20071706
ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ

ಕಿನ್ನಿಗೋಳಿ: ಭಾರತ ಪರಿಕ್ರಮ ಯಾತ್ರೆಯನ್ನು ಮುಗಿಸಿದ ಆರ್‌ಎಸ್‌ಎಸ್ ಮಾಜಿ ಹಿರಿಯ ಪ್ರಚಾರಕ್ ಸೀತಾರಾಮ ಕೆದಿಲಾಯ ಪಕ್ಷಿಕೆರೆ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ ನೀಡಿದರು. ದೇವಳದ...

Close