ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಶನಿವಾರ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಿತು.
ವಿವಿಧ ಇಲಾಖಾಧಿಕಾರಿಗಳು ಗೈರು ಹಾಜಾರಾಗಿದ್ದು ಏಕಕಾಲದಲ್ಲಿ ಮುಲ್ಕಿ ಹೋಬಳಿಯ ಕೆಮ್ರಾಲ್ ಹಾಗೂ ಬಳ್ಕುಂಜೆ ಗ್ರಾಮ ಸಭೆಗಳು ನಡೆಯುತ್ತಿರುವುದರಿಂದ ಗ್ರಾಮ ಸಭೆಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಯದೆ ಗ್ರಾಮ ಸಭೆ ನೀರಸವಾಗಿತ್ತು. ಗ್ರಾಮ ಸಭೆಗೆ ವಿವಿಧ ೨೨ ಇಲಾಖಾಧಿಕಾರಿಗಳು ಹಾಜರಾಗಬೇಕಿದ್ದು ಕೇವಲ ೬ ಇಲಾಖಾಧಿಕಾರಿಗಳು ಮಾತ್ರ ಹಾಜಾರಾಗಿದ್ದು ಗ್ರಾಮಸ್ಥರು ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದರು. ಅಧಿಕಾರಿಗಳ ಹಾಜರಾತಿ ಕೊರತೆ ಬಗ್ಗೆ ಪಂಚಾಯಿತಿ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ತಿಳಿಸಿದರು.
ಕೆಮ್ರಾಲ್ ಪೇಟೆಯಲ್ಲಿ ರಿಕ್ಷಾ ಪಾರ್ಕ್ ಹತ್ತಿರ ಚರಂಡಿ ಹಾಗೂ ಮೋರಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಬ್ಲಾಕ್ ಆಗಿ ಕೆಸರು ನೀರು, ರಿಕ್ಷಾ ಪಾರ್ಕ್ ಹಾಗೂ ರಸ್ತೆಯಲ್ಲಿ ಹರಿಯುತ್ತಿದೆ ಪದೆ ಪದೇ ದೂರು ನೀಡುತ್ತಿದ್ದರೂ ಪ್ರಯೋಜನ ವಾಗಿಲ್ಲ. ಎಂಬ ರಿಕ್ಷಾ ಚಾಲಕರು ದೂರಿಕೊಂಡಾಗ ಉತ್ತರಿಸಿದ ಪಿಡಿಒ ರಮೇಶ್ ರಾಥೋಡ್ ಪಕ್ಕದ ಅಂಗಡಿಯವರಿಗೆ ಈ ಬಗ್ಗೆ ತಿಳಿಸಲಾಗಿದೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.
ಹಲವಾರು ವರ್ಷಗಳಿಂದ ಹೊಸಕಾಡು ರಸ್ತೆ ಹಾಗೂ ಸೈಂಟ್ ಜೂಡ್ ಪಕ್ಷಿಕೆರೆ ಪ್ರಾಥಮಿಕ ಶಾಲಾ ರಸ್ತೆ ಸಂರ್ಪೂಣ ಹದಗೆಟ್ಟು ಹೋಗಿದ್ದು ನಡೆದಾಡಲು ಮಕ್ಕಳಿಗೆ ಕಷ್ಟ ಸಾಧ್ಯವಾಗಿದೆ ಗಮನಹರಿಸಿ ಎಂದು ಗ್ರಾಮಸ್ಥರು ದೂರಿಕೊಂಡರು.
ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ರಜೆಯಲ್ಲಿ ತೆರಳಿರುವುದರಿಂದ ಕಟೀಲು ಆರೋಗ್ಯ ಕೇಂದ್ರ ವೈದ್ಯರು ವಾರದಲ್ಲಿ ಎರಡು ದಿನ ಬಂದು ಜನರಿಗೆ ಸಮಸ್ಯೆ ಆಗಿದೆ ಆದುದರಿಂದ ಸಮಸ್ಯೆಯ ಪರಿಹಾರ ಮಾಡಿ ಎಂದು ಗ್ರಾಮಸ್ಥ ಹರೀಶ್ ತಿಳಿಸಿದಾಗ ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗುವುದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್ ತಿಳಿಸಿದರು.

ಭಟ್ಟಕೋಡಿ ನಡುಗೋಡು ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದಿರುವುದು ಹಾಗೂ ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಹರಿದು ಹೋಗುವುದರಿಂದ ರಸ್ತೆ ಹದಗೆಡುತ್ತಿದೆ. ರಸ್ತೆಯಲ್ಲಿ ದೊಡ್ಡ ಹೊಂಡವಾಗಿದೆ ಈಗಾಗಲೇ ಹಲವಾರು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ ಕಳೆದ ಐದು ವರ್ಷಗಳಿಂದ ಸಮಸ್ಯೆ ಬಗ್ಗೆ ಗ್ರಾಮಸ್ಥರು ಪದೇ ಪದೇ ತಿಳಿಸಿದ್ದರೂ ಗ್ರಾಮ ಪಂಚಾಯಿತಿ ಮೌನವಿರುವುದು ಯಾಕೇ ಎಂದು ನಿತಿನ್ ವಾಸ್ ಕೇಳಿದಾಗ ಈ ಬಗ್ಗೆ ಅಲ್ಲಿನ ವಾರ್ಡ್ ಸದಸ್ಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆ ಹರಿಸುವ ಬಗ್ಗೆ ಪ್ರಯತ್ನ ಮಾಡಿ ಸರಕಾರಿ ಜಾಗದಲ್ಲಿ ತಡೆಯಿದೆಯೇ ಅಥವಾ ಖಾಸಗಿ ಜಾಗಗಳಲ್ಲಿ ತಡೆಯಿದೆಯೆಂದು ಪರಾಮರ್ಶಿಸಿ ಎಲ್ಲರ ವಿಶ್ವಾಸ ಪಡಕೊಂಡು ಸಮಸ್ಯೆ ಬಗೆಹರಿಸಿ ಎಂದು ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಸಲಹೆ ಇತ್ತರು.
ಕೋರ‍್ಡಬ್ಬು ದೈವಸ್ಥಾನ ಬಳಿ ಕಾಂಕ್ರೀಟ್ ರಸ್ತೆ ಅಂಚಿನಲ್ಲಿ ಮಣ್ಣನ್ನು ಸರಿಯಾಗಿ ತುಂಬಿಸಿಲ್ಲ, ಕೆಮ್ರಾಲ್ ಪರಿಸರದಲ್ಲಿ ಗಾಂಜಾ , ಸಿಗರೇಟು ಸೇದುವರ ಅಡ್ಡೆಯಾಗದಂತೆ ನೋಡಿಕೊಳ್ಳಿ
ಪಕ್ಷಿಕೆರೆಯಲ್ಲಿ ಬೀದಿ ನಾಯಿಗಳ ಕಾಟ ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಉಪವಲಯ ಅರಣ್ಯಾಧಿಕಾರಿ ಟಿ. ಜಯಚಂದ್ರಯ್ಯ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಮಂಗಳೂರು ತಾ. ಪಂ. ಸದಸ್ಯರಾದ ವಜ್ರಾಕ್ಷಿ ಶೆಟ್ಟಿ, ಶುಭಲತಾ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಸಮಾಜಕಲ್ಯಾಣ ಇಲಾಖೆಯ ಅಶ್ವಿನಿ, ಮೆಸ್ಕಾಂ ಇಲಾಖೆಯ ಶ್ರೀನಿವಾಸ ಮೂರ್ತಿ, ದಾಮೋದರ್, ಕಂದಾಯ ಇಲಾಖೆಯ ಸಂತೋಷ್, ಪಂಚಾಯತ್ ರಾಜ್ಯ ಇಲಾಖೆಯ ಹರೀಶ್‌ರಾಜ್, ಇತರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

Kinnigoli-22071702

Comments

comments

Comments are closed.

Read previous post:
Kinnigoli-22071701
ಪೊಂಪೈ ಕಾಲೇಜು ಯೋಗ ಶಿಬಿರ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಜುಲೈ 10ರಿಂದ ಏಳು ದಿನಗಳ ಯೋಗ ಶಿಬಿರವನ್ನು ಸಂಸ್ಥೆಯ ಸಂಚಾಲಕ ವಂದನೀಯ ಫಾ. ವಿಕ್ಕರ್ ಡಿಮೆಲ್ಲೋ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಯೋಗ...

Close