ಮೂಕಾಂಬಿಕ ದೇವಳದಲ್ಲಿ ಕಳ್ಳತನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದಲ್ಲಿ ಬುಧವಾರ ತಡ ರಾತ್ರಿ ಕಳ್ಳರು ನುಗ್ಗಿ ಬೆಳ್ಳಿಯ ಅಭರಣಗಳನ್ನು ಕದ್ದೊಯಿದ್ದಿದ್ದಾರೆ.
ಬೆಳಿಗ್ಗೆ ದೇವಳದ ಅರ್ಚಕರು ಪೂಜೆಗೆಂದು ಬರುವಾಗ ಪ್ರಕರಣ ಬೆಳಕಿಗೆ ಬಂದಿದೆ.
ದೇವರ ಬೆಳ್ಳಿಯ ಪ್ರಭಾವಳಿ, ಶಂಖ ಚಕ್ರ ಗದೆ ಹಸ್ತ ಮತ್ತಿತರ ಬೆಳ್ಳಿಯ ಸುಮಾರು 4.50 ಲಕ್ಷ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.
ದೇವಳದ ಪಕ್ಕದ ಮನೆಯಲ್ಲಿ ವಾಸವಾಗಿರುವ ಅರ್ಚಕ ಸಕಲೇಶಪುರ ಮೂಲದ ಲೋಕೇಶ್ ಅವರು ಗುರುವಾರ ಬೆಳಿಗ್ಗಿನ ಪೂಜೆಗೆಂದು ಮನೆಯಿಂದ ಹೊರಡುವಾಗ ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದು ಹೊರಬರಲಾಗದೆ ಸಮೀಪದಲ್ಲಿನ ಅಂಗಡಿ ಮಾಲಕ ಭಾಸ್ಕರ್ ಅವರಿಗೆ ಕರೆ ಮಾಡಿ ಚಿಲಕ ತೆಗೆಯಲು ಬರ ಹೇಳಿದರು. ಆಗಲೇ ಲೋಕೇಶ್ ಅವರಿಗೆ ಕಳ್ಳತನದ ಬಗ್ಗೆ ಸಂಶಯ ಬಂದು ದೇವಳದ ಪ್ರಧಾನ ಬಾಗಿಲ ಮೂಲಕ ಒಳಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ಸುತ್ತು ಪೌಳಿಯ ಮುಂಬಾಗದ ಬಾಗಿಲು ಬೀಗ ಹಾಕಿದ್ದು ಅದು ಯಥಾ ಸ್ಥಿತಿಯಲ್ಲಿತ್ತು. ಸುತ್ತು ಪೌಳಿಯ ಮೆಲ್ಭಾಗದ ಮೂಲಕ ಬಂದು ದೇವರ ಗರ್ಭಗುಡಿಯ ಮುಂಭಾಗದ ಎರಡೂ ಬಾಗಿಲಿನ ಚಿಲಕ ಮುರಿದು ಒಳಹೊಕ್ಕು ಕಳ್ಳತನ ನಡೆಸಿದ್ದಾರೆ. ನಂತರ ದೇವಳದ ಬಲ ಮತ್ತು ಎಡ ಬದಿಯ ಬಾಗಿಲು ತೆರೆದಿದ್ದು ಅದರ ಮೂಲಕ ಹೊರಹೋಗಿರುವ ಸಾದ್ಯತೆ ಇದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ಬೇಟಿ ನೀಡಿದ್ದು, ಮಂಗಳೂರು ಕ್ರೈಂ ಡಿ.ಸಿ.ಪಿ ಹನುಮಂತಯ್ಯ, ಮೂಲ್ಕಿ ಪೋಲಿಸ್ ನಿರೀಕ್ಷಕ ಅನಂತ ಪದ್ಮನಾಭ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಕಳೆದ ಮುಲ್ಕಿ ಪೂಲೀಸು ಠಾಣೆ ವ್ಯಾಪ್ತಿಯ ಹೆಚ್ಚಿನ ದೇವಸ್ಥಾನಗಳಿಗೆ ಮುಲ್ಕಿ ವೃತ್ತ ನಿರೀಕ್ಷರ ತಂಡ ಭೇಟಿ ನೀಡಿ ಕಳ್ಳತನದ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದ್ದು, ಜಾಗ್ರತಿಯ ಕರಪತ್ರವನ್ನೂ ನೀಡಿದ್ದರು. ಅದರಂತೆ ಈ ದೇವಳಕ್ಕೆ ಕಳೆದ 5 ದಿನದ ಹಿಂದೆಯೇ ಬೇಟಿ ನೀಡಿ ಅಮೂಲ್ಯ ವಸ್ತುಗಳ ಬಗ್ಗೆ ಜಾಗ್ರತೆ ವಹಿಸುವಂತೆ ಹೇಳಿದ್ದಾರೆ. ಆ ನಂತರ ದೇವರಿಗೆ ತೊಡಿಸಿದ್ದ ಚಿನ್ನದ ಸರವನ್ನು ದೇವಳದ ಆಡಳಿತ ಮಂಡಳಿಯವರು ತೆಗೆದಿರಿಸಿದ್ದು, ಆದ್ದರಿಂದ ಚಿನ್ನದ ಕರಿಮಣಿ ಸರ ಉಳಿದಿದೆ.

ಕಳೆದ ಜುಲೈ 9 ರಂದು ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಂತಿನಗರ ಶ್ರೀ ಮೂಕಾಂಬಿಕಾ ದೇವಳದಲ್ಲಿ ಕಳ್ಳತನ ನಡೆದಿದ್ದು 11 ದಿನಗಳ ಅಂತರದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ ಪ್ರಕರಣ ನಡೆದಿದ್ದು ಇಂತಹ ಸರಣಿ ಕಳ್ಳತನಗಳು ನಡೆಯುತ್ತಿದ್ದು ಮುಲ್ಕಿ ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಫೋಲಿಸರು ಸಾರ್ವಜನಿಕರನ್ನು ಮುಂಜಾಗ್ರತೆ ಬಗ್ಗೆ ಎಚ್ಚರಿಸಿದರೂ ಸಾರ್ವಜನಿಕರು ಗಮನಕೊಡದಿರುವುದು ವಿಷಾದನೀಯ

Kinnigoli-22071705 Kinnigoli-22071706 Kinnigoli-22071707

 

Comments

comments

Comments are closed.

Read previous post:
Kinnigoli-22071704
ವನಮಹೋತ್ಸವ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಮತ್ತು ರೋಟರಾಕ್ಟ್ ಸಂಸ್ಥೆಗಳ ಆಸರೆಯಲ್ಲಿ ಮೂರುಕಾವೇರಿ ರೋಟರ‍್ಯಾಕ್ಟ್ ಉದ್ಯಾನವನದಲ್ಲಿ ವನಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸೆವರಿನ್ ಲೋಬೊ, ಕಾರ್ಯದರ್ಶಿ ಸಂತೋಷ್...

Close