ಗುರುಶಿಷ್ಯ ಬಾಂಧವ್ಯಕ್ಕೆ ಕೊರ್ಗಿ ಮಾದರಿ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಲೆ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿರುವ ಬಹುಶ್ರುತ ವಿದ್ವಾಂಸ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು ತನ್ನ ಗುರುಗಳನ್ನು ಬಹುವಾಗಿ ಆರಾಧಿಸಿದವರು, ಶಿಷ್ಯೋತ್ತಮರನ್ನು ತಿದ್ದಿ ತೀಡಿ ಪ್ರತಿಭಾವಂತರನ್ನಾಗಿ ಮಾಡಿದ್ದಾರೆ. ಎಂದು ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಬೆಳುವಾಯಿ ಯಕ್ಷದೇವ ಮಿತ್ರ ಮಂಡಳಿಯ ವಿಂಶತಿ ವರ್ಷಾಚರಣೆಯ ಪ್ರಯುಕ್ತ ಶನಿವಾರ ಕಟೀಲು ಸರಸ್ವತಿ ಭವನದಲ್ಲಿ ನಡೆದ 20 ನೇ ಸರಣಿ ಕಾರ‍್ಯಕ್ರಮದಲ್ಲಿ ಕೊರ್ಗಿ ಉಪಾಧ್ಯಾಯರ ಸಂಸ್ಮರಣೆ ಭಾಷಣಗೈದು ಮಾತನಾಡಿದರು.
ಖ್ಯಾತ ಹಿಮ್ಮೇಳ ವಾದಕ ವಿಶ್ವೇಶರಾವ್ ಕಟೀಲು ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಯ್ಯೂರು ಸುಬ್ರಹ್ಮಣ್ಯ ರಾವ್, ಬೆಳುವಾಯಿ ಯಕ್ಷದೇವ ಮಿತ್ರ ಮಂಡಳಿಯ ಗೌರವಾಧ್ಯಕ್ಷ ಮೂಡುಬಿದ್ರೆ ಶ್ರೀಪತಿ ಭಟ್, ಕೊಡೆತ್ತೂರುಗುತ್ತು ಸುಧೀರ್ ಶೆಟ್ಟಿ, ರವೀಂದ್ರ ಶೆಟ್ಟಿ, ಸಂಸ್ಥೆಯ ಮುಖ್ಯಸ್ಥ ದೇವಾನಂದ ಭಟ್, ವಾಸುದೇವ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಖ್ಯಾತ ಕಲಾವಿದರಿಂದ ಯಕ್ಷಗಾನ ನಡೆಯಿತು.

Kinnigoli21071702

Comments

comments

Comments are closed.

Read previous post:
Kinnigoli-22071707
ಮೂಕಾಂಬಿಕ ದೇವಳದಲ್ಲಿ ಕಳ್ಳತನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದಲ್ಲಿ ಬುಧವಾರ ತಡ ರಾತ್ರಿ ಕಳ್ಳರು ನುಗ್ಗಿ ಬೆಳ್ಳಿಯ ಅಭರಣಗಳನ್ನು ಕದ್ದೊಯಿದ್ದಿದ್ದಾರೆ. ಬೆಳಿಗ್ಗೆ ದೇವಳದ ಅರ್ಚಕರು ಪೂಜೆಗೆಂದು ಬರುವಾಗ ಪ್ರಕರಣ...

Close