ಪೊಂಪೈ ಪ್ರೌಢ ಶಾಲೆ ಸೈಕಲ್ ವಿತರಣೆ

ಕಿನ್ನಿಗೋಳಿ : ಸರಕಾರದ ಕ್ಷೀರ ಭಾಗ್ಯ, ಬಿಸಿಯೂಟ, ಪಠ್ಯಪುಸ್ತಕ ಹಾಗೂ ಸೈಕಲ್ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿ ನಾಡಿಗೆ ಹೆಸರನ್ನು ತರಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಸರಕಾರದ ಅನುದಾನದಿಂದ ನೀಡಲ್ಪಡುವ ಉಚಿತ ಸೈಕಲ್ಲುಗಳನ್ನು ಪೊಂಪೈ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ವಿತರಿಸಿ ಮಾತನಾಡಿದರು.
ಪೊಂಪೈ ಸಮೂಹ ಸಂಸ್ಥೆಗಳ ಸಂಚಾಲಕ ರೆ.ಫಾ. ವಿಕ್ಟರ್ ಡಿಮೆಲ್ಲೊ, ಐಕಳ ಗ್ರಾ. ಪಂ. ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಸುಧಾಕರ ಸಾಲ್ಯಾನ್, ಕಿನ್ನಿಗೋಳಿ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಸಂತೋಷ್, ಸಂತಾನ್ ಡಿಸೋಜ, ಪ್ರಿನ್ಸಿಪಾಲ್ ಮಾಥ್ಯೂ ಎನ್.ಎಮ್., ಶಿಕ್ಷಕಿ ವಿನ್ನಿಫ್ರೆಡ್ ಡಿಸೋಜ, ಲಕ್ಷ್ಮೀಶ ಎನ್. ಶಾಸ್ತ್ರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಪದ್ಮಿನಿ ವಸಂತ್, ಸಂತಾನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
Kinnigoli27071702

Comments

comments

Comments are closed.

Read previous post:
Kinnigoli27071701
ತೋಕೂರು : ನಾಗರಪಂಚಮಿ

ಕಿನ್ನಿಗೋಳಿ : ನಾಗರಪಂಚಮಿ ಪ್ರಯುಕ್ತ ಗುರುವಾರ ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ನಾಗ ಸನ್ನಿಧಿಯಲ್ಲಿ ಹಾಲು ಹಾಗೂ ಸೀಯಾಳಾಭಿಷೇಕ ನಡೆಯಿತು.

Close