ಕಿನ್ನಿಗೋಳಿ 12 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ

ಕಿನ್ನಿಗೋಳಿ: ಶಾಲಾ ಹಂತದಲ್ಲಿಯೇ ಮಕ್ಕಳು ಸಂಘಟನಾ ಶಕ್ತಿಯೊಂದಿಗೆ ನಾಯಕತ್ವ ಮತ್ತು ಸಮಾಜ ಸೇವೆಯ ಗುಣಗಳನ್ನು ಮೈಗೂಡಿಸಿದಾಗ ವ್ಯಕ್ತಿತ್ವ ವಿಕಸನಗೊಂಡು ಭವಿಷ್ಯದಲ್ಲಿ ಸತ್ಪ್ರಜೆಯಾಗುತ್ತಾರೆ ಎಂದು ರೋಟರಿಜಿಲ್ಲೆ ೩೧೮೧ ರ ಇಂಟರಾಕ್ಟ್ ಜಿಲ್ಲಾ ಉಪ ಸಭಾಪತಿ ಪಿ. ರಾಘವೇಂದ್ರ ಸುರತ್ಕಲ್ ಹೇಳಿದರು.
ಕಿನ್ನಿಗೋಳಿ ರೋಟರಿ ರಜತಭವನದಲ್ಲಿ ಶನಿವಾರ ನಡೆದ ಕಿನ್ನಿಗೋಳಿ ರೋಟರಿ ಸಂಸ್ಥೆ ಪ್ರವರ್ತಿತ ೧೧ ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿ ಭೂಮಿಕಾ ಪ್ರಿಯದರ್ಶಿನಿ ಇಂಟರ‍್ಯಾಕ್ಟ್ ಕ್ಲಬ್ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ ಇಂಟರ‍್ಯಾಕ್ಟ್‌ನ ನೂತನ ಅಧ್ಯಕ್ಷ, ಕಾರ್ಯದರ್ಶಿ, ಶಿಕ್ಷಕ ನಿರ್ದೇಶಕ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ತೇಜಸ್ವಿನಿ ಎನ್., ಕಟೀಲು ಪ್ರೌಢ ಶಾಲೆಯ ವೈದೇಹಿ, ಬಳ್ಕುಂಜೆ ಸಂತ ಫೌಲರ ಪ್ರೌಢಶಾಲೆಯ ಸ್ವಾತಿ, ಮುಂಡ್ಕೂರು ವಿದ್ಯಾವರ್ಧಕ ಪ್ರೌಢ ಶಾಲೆಯ ನರೇಶ್, ಐಕಳ ಪೊಂಪೈ ಜ್ಯೂನಿಯರ್ ಕಾಲೇಜಿನ ದೇವಾನಂದ, ನಡುಗೋಡು ಸರಕಾರಿ ಪ್ರೌಢಶಾಲೆಯ ಶ್ವೇತಾ, ಕೆಮ್ರಾಲ್ ಸರಕಾರಿ ಪ್ರೌಢಶಾಲೆಯ ದೀಕ್ಷಿತಾ, ಎಕ್ಕಾರು ಸರಕಾರಿ ಪ್ರೌಢಶಾಲೆಯ ಆಕಾಶ್, ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ಮಾದೆವ್, ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ಬ್ರಂದಾ, ಕಿನ್ನಿಗೋಳಿ ಮೇರಿವೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಲೀಸಾ ಹ್ಯಾರಿಟ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ರೋಟರಿಜಿಲ್ಲೆ ೩೧೮೧ ವಲಯ ೧ರ ಸಹಾಯಕ ಗವರ್ನರ್ ಜೊಸ್ಸಿ ಪಿಂಟೊ, ಕಿನ್ನಿಗೋಳಿ ಇಂಟರ‍್ಯಾಕ್ಟ್ ಸಭಾಪತಿ ಜೆರಾಲ್ಡ್ ಮಿನೇಜಸ್, ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ ಸ್ವಾಗತಿಸಿದರು. ಇಂಟರಾಕ್ಟ್ ವಲಯ ಸಂಯೋಜಕ ಹೆರಿಕ್ ಪಾಯಸ್ ಪ್ರಸ್ತಾವನೆಗೈದರು. ಜೊಸ್ವಿನ್ ಡಿಸೋಜ ವಂದಿಸಿದರು. ಅಂಕಿತಾ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.

Kinnigoli29071701

Comments

comments

Comments are closed.

Read previous post:
Kinnigoli27071702
ಪೊಂಪೈ ಪ್ರೌಢ ಶಾಲೆ ಸೈಕಲ್ ವಿತರಣೆ

ಕಿನ್ನಿಗೋಳಿ : ಸರಕಾರದ ಕ್ಷೀರ ಭಾಗ್ಯ, ಬಿಸಿಯೂಟ, ಪಠ್ಯಪುಸ್ತಕ ಹಾಗೂ ಸೈಕಲ್ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿ ನಾಡಿಗೆ ಹೆಸರನ್ನು ತರಬೇಕು ಎಂದು ಮುಲ್ಕಿ ಮೂಡಬಿದಿರೆ...

Close