ಕಾವ್ಯ ಮನೆಗೆ ನಳಿನ್ ಭೇಟಿ

 ಕಿನ್ನಿಗೋಳಿ : ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯ ಕಟೀಲು ಅವರ ಮನೆ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಶನಿವಾರ ಭೇಟಿ ನೀಡಿ ಕಾವ್ಯ ತಂದೆ ತಾಯಿಗೆ ಸಾಂತ್ವಾನ ಹೇಳಿದರು, ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಸಂಸದ ನಳಿನ್ ಕಾವ್ಯ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಪಟು ಊರಿಗೆ ಒಳ್ಳೆಯ ಹೆಸರನ್ನು ತಂದವಳು, ಆಳ್ವಾಸ್ ಗೆ ಹೋಗುವ ಪ್ರಾರಂಭದ ದಿನ ಅವಳು ಕಟೀಲು ದೇವಳದಲ್ಲಿ ಸಿಕ್ಕಿದ್ದಳು ಮಾತನಾಡಿದ್ದೇನೆ, ಅವಳ ಸಾವಿನ ಕಾರಣಗಳ ಬಗ್ಗೆ ತನಿಖೆ ಆಗಬೇಕು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ, ರಾಜ್ಯ ಸರಕಾರ ಮತ್ತು ಕೇಂದ್ರ ಗೃಹ ಇಲಾಖೆಯ ಗಮನ ಸೆಳೆಯುತ್ತೇನೆ ಎಂದರು. ಈ ಸಂದರ್ಭ ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ಕುಮಾರ್ ಬೋಳ್ಳೂರು, ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಈಶ್ವರ್ ಕಟೀಲ್, ಸುದರ್ಶನ್ ಮೂಡಬಿದ್ರೆ, ಸಂದೇಶ್ ಶೆಟ್ಟಿ, ಸುಕೇಶ್ ಶಿರ್ತಾಡಿ, ಕೆ.ಭುವನಾಬಿರಾಮ ಉಡುಪ, ಸುರೇಶ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ಲೀಲಾವತಿ ರಾವ್, ಆದರ್ಶ್ ಶೆಟ್ಟಿ ಎಕ್ಕಾರು, ನಿತೀಶ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Kinnigoli29071702

Comments

comments

Comments are closed.

Read previous post:
Kinnigoli29071701
ಕಿನ್ನಿಗೋಳಿ 12 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ

ಕಿನ್ನಿಗೋಳಿ: ಶಾಲಾ ಹಂತದಲ್ಲಿಯೇ ಮಕ್ಕಳು ಸಂಘಟನಾ ಶಕ್ತಿಯೊಂದಿಗೆ ನಾಯಕತ್ವ ಮತ್ತು ಸಮಾಜ ಸೇವೆಯ ಗುಣಗಳನ್ನು ಮೈಗೂಡಿಸಿದಾಗ ವ್ಯಕ್ತಿತ್ವ ವಿಕಸನಗೊಂಡು ಭವಿಷ್ಯದಲ್ಲಿ ಸತ್ಪ್ರಜೆಯಾಗುತ್ತಾರೆ ಎಂದು ರೋಟರಿಜಿಲ್ಲೆ ೩೧೮೧ ರ ಇಂಟರಾಕ್ಟ್...

Close