ಕಾವ್ಯ ಮನೆಗೆ ಅಭಯಚಂದ್ರ ಜೈನ್

ಕಿನ್ನಿಗೋಳಿ : ಕಾವ್ಯ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಕಟೀಲು ದೇವರಗುಡ್ಡೆ ಕಾವ್ಯ ಮನೆಗೆ ಭೇಟಿ ನೀಡಿ ಕಾವ್ಯ ತಂದೆ ತಾಯಿ ಅವರಿಗೆ ಸಾಂತ್ವನ ಹೇಳಿ ಅವರ ಹತ್ತಿರ ಘಟನೆಯ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲಾಧಿಕಾರಿ ಮತ್ತು ಕಮಿಷನರ್ ಮೂಲಕ ನಿಪಕ್ಷಪಾತ ತನಿಖೆ ಆಗಬೇಕು ತಪ್ಪಿತಸ್ಥರಿಗೆ ಶಿಕ್ಷಾಗಬೇಕು ಕಮಿಷನರ್ ಅವರು ಮನೆಗೆ ಭೇಟಿ ನೀಡಿ ತನಿಖೆಯನ್ನು ನಡೆಸುವಂತೆ ತಿಳಿಸಲಾಗುವುದು ಎಂದರು.
ಕಾವ್ಯ ಆತ್ಮಕ್ಕೆ ಚಿರಶಾಂತಿ ಸದ್ಗತಿಯನ್ನು ದೊರೆಯುವಂತೆ ಶಾಸಕ ಕೆ. ಅಭಯಚಂದ್ರ ಜೈನ್ ಸಹಿತ ಕಾಂಗ್ರೇಸ್ ಕಾರ್ಯಕರ್ತರು ಮೌನ ಪ್ರಾರ್ಥನೆ ನಡೆಸಿದರು. ಕಾಂಗ್ರೇಸ್ ಮುಖಂಡರಾದ ಮಿಥುನ್ ರೈ, ಸುರೇಶ್ ಪ್ರಭು, ಸುಕುಮಾರ್ ಸನಿಲ್, ಧನಂಜಯ ಮಟ್ಟು, ವಸಂತ ಬೆರ್ನಾಡ್, ಪ್ರತಿಭಾ ಶೆಟ್ಟಿ ಎಕ್ಕಾರು, ಶಾಲೆಟ್ ಪಿಂಟೋ, ಪ್ರತಿಭಾ ಕುಳಾಯಿ, ಮೋನಪ್ಪ ಶೆಟ್ಟಿ ಎಕ್ಕಾರು, ಶಶೀಂದ್ರ ಸಾಲ್ಯಾನ್, ತಿಮ್ಮಪ್ಪ ಕೋಟ್ಯಾನ್, ಪ್ರಕಾಶ್ ಆಚಾರ್, ಯೋಗೀಶ್ ಕೋಟ್ಯಾನ್, ನವೀನ್ ಕುಮಾರ್ ಕಟೀಲು, ರಮಾನಂದ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಕರ್ನಾಟಕ ಸರಕಾರ ಮುಖ್ಯ ಸಚೇತಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಭೇಟಿ ನೀಡಿದರು.
ಹರಿಕೃಷ್ಣ ಬಂಟ್ವಾಳ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆ ಈ ಬಗ್ಗೆ ಸಿಒಡಿ ಅಥವಾ ಉನ್ನತ ಮಟ್ಟದ ತನಿಖೆಯಾಗಬೇಕು ಬಡ ಕಾವ್ಯ ಕುಟುಂಬಕ್ಕೆ ನ್ಯಾಯ ನೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸುಂದರ ಪೂಜಾರಿ, ಗಂಗಾಧರ ಪೂಜಾರಿ, ಸಂಜೀವ ಪೂಜಾರಿ, ಸುಕುಮಾರ್ ಸನಿಲ್, ನಾರಾಯಣ ಪೂಜಾರಿ ಉದಯ , ರವಿ ಪೂಜಾರಿ ಉಪಸ್ಥಿತರಿದ್ದರು.
ಪಣಂಬೂರು ಎಸಿಪಿ ರಾಜೇಂದ್ರ ಹಾಗೂ ಮೂಡಬಿದಿರೆ ಠಾಣಾಧಿಕಾರಿ ರಾಮಚಂದ್ರ ನಾಯಕ್, ಬಜಪೆ ಠಾಣಾಧಿಕಾರಿ ನಾಗರಾಜ ಕಾವ್ಯ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Kinnigoli30071701

Comments

comments

Comments are closed.

Read previous post:
Kinnigoli29071703
ಪದ್ಮನಾಭ ದೇವಾಡಿಗ

ಹಳೆಯಂಗಡಿ: ಹಳೆಯಂಗಡಿ ಸಮೀಪದ ಪಾವಂಜೆ ನಿವಾಸಿ ಪದ್ಮನಾಭ ದೇವಾಡಿಗ (36 ವರ್ಷ) ಅವರು ಶುಕ್ರವಾರ ನಿಧನ ಹೊಂದಿದರು, ಅತ್ಯಂತ ಸರಳವ್ಯಕ್ತಿತ್ವದ ಅವರು ಪತ್ನಿ, ಪುತ್ರ, ತಂದೆ, ತಾಯಿ,...

Close