ಕಿನ್ನಿಗೋಳಿ ವಲಯ ಟೈಲರ್ಸ್ ಎಸೋಸಿಯೇಶನ್ ವಾರ್ಷಿಕೋತ್ಸವ

ಕಿನ್ನಿಗೋಳಿ :  ಇಂದಿನ ಯಾಂತ್ರಿಕ ಯುಗದಲ್ಲಿ ರೆಡಿಮೆಡ್ ಬಟ್ಟೆಗಳು ಬಂದರೂ ಅದರ ಹಿಂದೆ ಟೈಲರ್ಸ್ ಗಳ ಕೆಲಸ ಕಾರ್ಯ ಇದ್ದೇ ಇರುತ್ತದೆ ನಾವು ಸಂಘಟನಾ ಶಕ್ತಿಯಿಂದ ಮೂಲಭೂತ ಬೇಡಿಕೆಗಳನ್ನು ಈಡೇರುವಂತೆ ಮಾಡಬೇಕಾಗಿದೆ ಎಂದು ಕೆ. ಎಸ್. ಟಿ. ಎ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಮಾಡೂರು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ರಿ) ವಲಯ ಸಮಿತಿಯ 17ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಈ ಸಂದರ್ಭ ನಿವೃತ್ತಿಗೊಂಡ ಹಿರಿಯ ಟೈಲರ್ ವೃತ್ತಿಬಾಂಧವರನ್ನು ಸನ್ಮಾನಿಸಲಾಯಿತು. ಟೈಲರ್ಸ್ ಎಸೋಸಿಯೇಶನ್ ಕಿನ್ನಿಗೋಳಿ ಸಮಿತಿಯ ಅಧ್ಯಕ್ಷ ಹರೀಶ್ ಟಿ. ಪದ್ಮಶಾಲಿ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಜಯಶಂಕರ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯೆಕ್ಷೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಮೂಲ್ಕಿ – ಮೂಡಬಿದಿರೆ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ಪ್ರಭಾಕರ ಶೆಟ್ಟಿಗಾರ್, ಜಯಂತ್ ಸಾಲ್ಯಾನ್, ರಮೇಶ್ ಬಂಗೇರ, ಚಂದ್ರಹಾಸ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಬೇಡಿಕೆಗಳ ಮನವಿಯನ್ನು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರಿಗೆ ನೀಡಲಾಯಿತು. ವಿವಿಧ ಸ್ಪರ್ಧೆಯ ವಿಜೇತರಿಗ ಬಹುಮಾನ ವಿತರಣೆ ನಡೆಯಿತು.
ಕಿನ್ನಿಗೋಳಿ ವಲಯ ಸಮತಿಯ ಶಂಕರ್ ಬಿ. ಕೋಟ್ಯಾನ್ ಪ್ರಸ್ತಾವನೆಗೈದರು. ಸರಿತ ಕೋಟ್ಯಾನ್ ಸ್ವಾಗತಿಸಿದರು. ದಾಮೋದರ ಶೆಟ್ಟಿಗಾರ್ ಬಹುಮಾನ ವಿಜೇತರ ವಿವರ ನೀಡಿದರು. ವಿಶ್ವನಾಥ ಶೆಟ್ಟಿ ಗಾರ್ ಹಾಗೂ ಮೋಹನ್ ಎಸ್. ಕೋಡಿ ಕಾರ್ಯಕ್ರಮ ನಿರೂಪಿಸಿದರು. ರಾಜಾರಾಂ ವಂದಿಸಿದರು.

Kinnigoli30071707

Comments

comments

Comments are closed.

Read previous post:
Kinnigoli30071706
ಪುನರೂರು ವಿಪ್ರ ಸಂಪದ ಆಟಿ ಕೂಟ

ಕಿನ್ನಿಗೋಳಿ : ಪುನರೂರು ವಿಪ್ರ ಸಂಪದವು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಉತ್ತಮ ಕೆಲಸ ಮಾಡುತ್ತಿದೆ. ಆಷಾಡ ಆಚರಣೆ ಕೇವಲ ಮೂಡ ನಂಬಿಕೆಯಲ್ಲ ಅದರಲ್ಲಿ ನಮ್ಮ ಸಂಸ್ಕ್ರತಿ ಸಂಸ್ಕಾರ...

Close