ಕಾವ್ಯ ಮನೆಗೆ ಕೋಟ ಶ್ರೀನಿವಾಸ ಪೂಜಾರಿ ಬೇಟಿ

ಕಿನ್ನಿಗೋಳಿ : ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನೇಣು ಬಿಗಿದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಕಟೀಲು ದೇವರ ಗುಡ್ಡೆ ನಿವಾಸಿ ಕಾವ್ಯ ಪೂಜಾರಿ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭಾನುವಾರ ಭೇಟಿ ನೀಡಿ ಕಾವ್ಯ ತಂದೆ ತಾಯಿಗೆ ಸಾಂತ್ವಾನ ಹೇಳಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿ ಬಡ ಕುಟುಂಬಕ್ಕೆ ಅವಳ ಸಾವಿನ ಕಾರಣಗಳ ಬಗ್ಗೆ ನಿಖರ ಮಾಹಿತಿ ಸಿಗಬೇಕು. ಬಡ ಕುಟುಂಬಕ್ಕೆ ಗರಿಷ್ಟ ಮಟ್ಟದ ಪರಿಹಾರ ಸರಕಾರ ನೀಡಬೇಕು ಈ ಬಗ್ಗೆ ರಾಜ್ಯ ಸರಕಾರ ಮತ್ತು ಕೇಂದ್ರ ಗೃಹ ಇಲಾಖೆಯಲ್ಲಿ ಒತ್ತಾಯ ಮಾಡಲಾಗುವುದು. ಎಂದು ಹೇಳಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಸುರೇಶ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ಆದರ್ಶ್ ಶೆಟ್ಟಿ ಎಕ್ಕಾರು, ಗುರುರಾಜ ಮಲ್ಲಿಗೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli30071702

 

Comments

comments

Comments are closed.

Read previous post:
Kinnigoli30071707
ಕಿನ್ನಿಗೋಳಿ ವಲಯ ಟೈಲರ್ಸ್ ಎಸೋಸಿಯೇಶನ್ ವಾರ್ಷಿಕೋತ್ಸವ

ಕಿನ್ನಿಗೋಳಿ :  ಇಂದಿನ ಯಾಂತ್ರಿಕ ಯುಗದಲ್ಲಿ ರೆಡಿಮೆಡ್ ಬಟ್ಟೆಗಳು ಬಂದರೂ ಅದರ ಹಿಂದೆ ಟೈಲರ್ಸ್ ಗಳ ಕೆಲಸ ಕಾರ್ಯ ಇದ್ದೇ ಇರುತ್ತದೆ ನಾವು ಸಂಘಟನಾ ಶಕ್ತಿಯಿಂದ ಮೂಲಭೂತ...

Close