ಪುನರೂರು ವಿಪ್ರ ಸಂಪದ ಆಟಿ ಕೂಟ

ಕಿನ್ನಿಗೋಳಿ : ಪುನರೂರು ವಿಪ್ರ ಸಂಪದವು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಉತ್ತಮ ಕೆಲಸ ಮಾಡುತ್ತಿದೆ. ಆಷಾಡ ಆಚರಣೆ ಕೇವಲ ಮೂಡ ನಂಬಿಕೆಯಲ್ಲ ಅದರಲ್ಲಿ ನಮ್ಮ ಸಂಸ್ಕ್ರತಿ ಸಂಸ್ಕಾರ ಪದ್ದತಿಗಳಿವೆ. ಅದನ್ನು ಯುವ ಜನಾಂಗಕ್ಕೆ ತಿಳಿಸಿ ಅವರನ್ನು ಸಂಸ್ಕಾರವಂತನ್ನಾಗಿ ಮಾಡಬೇಕು ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು
ಪುನರೂರಿನ ವಿಪ್ರ ಸಂಪದದ ನೇತ್ರತ್ವದಲ್ಲಿ ಪುನರೂರು ವಿಶ್ವನಾಥ ದೇವಳದಲ್ಲಿ ಭಾನುವಾರ ನಡೆದ ವಿಪ್ರ ಆಟಿ ಕೂಟದಲ್ಲಿ ಮಾತನಾಡಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ ರಾವ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಉಪನ್ಯಾಸ ನೀಡಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ವಿಶ್ವೇಶ್ವ ಭಟ್, ಪುನರೂರು ವಿಪ್ರಸಂಪದ ಗೌರವಾಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಉದ್ಯಮಿ ಸತೀಶ್ ಭಟ್ ಕೊಳುವೈಲು, ಗುರು ಭಟ್ ಪಾವಂಜೆ , ದೇವಪ್ರಸಾದ್ ಪುನರೂರು, ವಿಶ್ವನಾಥ ರಾವ್ ಪುನರೂರು ಉಪಸ್ಥಿತರಿದ್ದರು.
ಉದ್ಯಮಿ ಪಟೇಲ್ ವಾಸುದೇವ ರಾವ್ ಸ್ವಾಗತಿಸಿದರು. ಸುಧಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli30071706

Comments

comments

Comments are closed.

Read previous post:
Kinnigoli30071701
ಕಾವ್ಯ ಮನೆಗೆ ಅಭಯಚಂದ್ರ ಜೈನ್

ಕಿನ್ನಿಗೋಳಿ : ಕಾವ್ಯ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಭಾನುವಾರ ಕಟೀಲು ದೇವರಗುಡ್ಡೆ ಕಾವ್ಯ ಮನೆಗೆ...

Close