ಕಟೀಲು ಖಂಡನಾ ಸಭೆ

ಕಿನ್ನಿಗೋಳಿ : ರಾಷ್ಟ ಮಟ್ಟದ ಕ್ರೀಡಾ ಪಟು ಕಾವ್ಯ ಅಸಹಜ ಸಾವಿನ ಪಾರದರ್ಶಕ ತನಿಖೆ ನಡೆದು ಅದರ ಹಿಂದಿನ ರಹಸ್ಯ ಬಯಲಾಗಿ ಕಾವ್ಯಳ ಮನೆಯವರಿಗೆ ನ್ಯಾಯ ಸಿಗಬೇಕು ಎಂದು ಉಪಾನ್ಯಾಸಕ ಸೋಂದ ಬಾಸ್ಕರ ಭಟ್ ಹೇಳಿದರು
ಸೋಮವಾರ ಕಟೀಲು ಬಸ್ ನಿಲ್ದಾಣದಲ್ಲಿ ಕಾವ್ಯ ಅಸಹಜ ಸಾವು ಹಿನ್ನೆಲೆಯಲ್ಲಿ ಎಕ್ಕಾರು ಹಾಗೂ ಕಟೀಲು ಗ್ರಾಮಸ್ಥರು ಹಮ್ಮಿಕೊಂಡ ಖಂಡನಾ ಸಭೆಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಅನೇಕ ಅಸಹಜ ಸಾವುಗಳು ನಡೆದಿದೆ ಆದರೆ ತನಿಖೆಯ ನಂತರ ನಿಖರ ಫಲಿತಾಂಶಗಳು ಹೊರ ಬಂದಿಲ್ಲ, ಇದೀಗ ಕಾವ್ಯ ಅಸಹಜ ಸಾವಿನ ಹಿಂದೆ ಕೆಲವು ಗೊಂದಲಗಳಿದ್ದು ಸೂಕ್ತ ತನಿಖೆಯಿಂದಷ್ಟೇ ಹೊರಬರಬೇಕು, ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಲೇಬೇಕು ಎಂದರು.
ನಂತರ ಕಟೀಲು ದೇವಳದಲ್ಲಿ ಕಾವ್ಯ ಕುಟುಂಬಕ್ಕೆ ನ್ಯಾಯ ಸಿಗುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕಟೀಲು ಎಕ್ಕಾರು ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು.
Kinnigoli-31071702

Comments

comments

Comments are closed.

Read previous post:
Kinnigoli-31071701
ತೋಕೂರು ದೇವಳ ಜಲಕದ ಕೆರೆ ಅಭಿವೃದ್ದಿ ಪರಿಶೀಲನೆ

ಕಿನ್ನಿಗೋಳಿ : ನೀರಿಂಗಿಸುವಿಕೆ ಹಾಗೂ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಕೆರೆಗಳ ಅಭಿವೃದ್ದಿ ಅತೀ ಅಗತ್ಯ. ಇದರಿಂದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ ಮೂಡಾದಿಂದ ಪಡಪಣಂಬೂರು ಗ್ರಾಮ ಪಂಚಾಯಿತಿ...

Close