ಕಟೀಲು ಕಾವ್ಯ ಮನೆಗೆ ರಾಜಕೀಯ ಮುಖಂಡರ ಭೇಟಿ

ಕಿನ್ನಿಗೋಳಿ : ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನೇಣು ಬಿಗಿದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಕಟೀಲು ದೇವರ ಗುಡ್ಡೆ ನಿವಾಸಿ ಕಾವ್ಯ ಪೂಜಾರಿ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭಾನುವಾರ ಭೇಟಿ ನೀಡಿ ಸಾಂತ್ವಾನ ಹೇಳಿದರು. ಮಾದ್ಯಮದವರೊಂದಿಗೆ ಮಾತನಾಡಿ ಕಾವ್ಯಳ ತಂದೆ ತಾಯಿ ತಮ್ಮ ಮಗಳ ಸಾವಿನ ಬಗ್ಗೆ ಕೆಲವಾರು ಸಂಶಯಗಳನ್ನು ಮುಂದಿಟ್ಟಿದ್ದಾರೆ. ಕಮಿಷನರ್ ಬಳಿ ನಿನ್ನೆಯೇ ಮಾತನಾಡಿದ್ದೇನೆ. ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆ ಆಗಲೇಬೇಕು. ಸತ್ಯಾಸತ್ಯತೆ ತನಿಖೆ ಮಾಡಲಾಗುತ್ತದೆ. ಸರಕಾರದಿಂದ ಈ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಕೂಲಂಕುಷ ತನಿಖೆ ನಡೆಸಲು ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು

ಮಾಜಿ ಸಚಿವ ಅಮರನಾಥ ಶೆಟ್ಟಿ ಭೇಟಿ ನೀಡಿ ಪ್ರಕರಣ ದಾಖಲಾಗಿದೆ. ಸಂಬಂಧಪಟ್ಟ ಎಲ್ಲರನ್ನೂ ಸೂಕ್ತ ತನಿಖೆಗೆ ಒಳಪಡಿಸಲಿ ಸತ್ಯಾಂಶ ಹೊರಬರಬೇಕು ನಾವು ಸದಾ ಕಾವ್ಯಳ ಕುಟುಂಬದೊಂದಿಗೆ ಇದ್ದೇವೆ ಎಂದರು.
ಸಿಪಿಐಎಮ್ ಮುಖಂಡ ರಾಮ ರೆಡ್ಡಿ ಮಾತನಾಡಿ ಜನರಲ್ಲಿ ದಕ್ಷಿಣ ಕನ್ನಡ ಪೋಲಿಸರ ಬಗ್ಗೆ ಭರವಸೆ ಕಡಿಮೆಯಾಗುತ್ತಿದೆ. ನಿಪಕ್ಷಪಾತ ಪಾರದರ್ಶಕ ತನಿಖೆ ಆಗಲೇಬೇಕು. ವಿಶೇಷ ತಂಡದಿಂದ ತನಿಖೆ ನಡೆದರೆ ಮಾತ್ರ ನಿಜಾಂಶ ಹೊರ ಬೀಳಬಹುದು ಎಂದರು.

Kinnigoli30071704 Kinnigoli30071703Kinnigoli30071705

Comments

comments

Comments are closed.

Read previous post:
Kinnigoli-30071708
ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ವಾರ್ಷಿಕ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಹಾಲು ಉತ್ಪಾದಕರ ಸಂಘ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ...

Close