ತೋಕೂರು ದೇವಳ ಜಲಕದ ಕೆರೆ ಅಭಿವೃದ್ದಿ ಪರಿಶೀಲನೆ

ಕಿನ್ನಿಗೋಳಿ : ನೀರಿಂಗಿಸುವಿಕೆ ಹಾಗೂ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಕೆರೆಗಳ ಅಭಿವೃದ್ದಿ ಅತೀ ಅಗತ್ಯ. ಇದರಿಂದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ ಮೂಡಾದಿಂದ ಪಡಪಣಂಬೂರು ಗ್ರಾಮ ಪಂಚಾಯಿತಿ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಜಲಕದ ಕೆರೆಗೆ ಮೂಡಾದಿಂದ 1 ಕೋಟಿ ಅನುದಾನ ನೀಡಲಾಗುವುದೆಂದು ಮೂಡಾದ ಅಧ್ಯಕ್ಷ ಸುರೇಶ್ ಬಲ್ಲಾಳ್ ಹೇಳಿದರು.
ಪಡಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕೆರೆಕಾಡು ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಜಲಕದ ಕೆರೆಯ ಅಭಿವೃದ್ದಿ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಿದ ಸಂದರ್ಭ ಮಾತನಾಡಿದರು.
ಶಾಸಕ ಕೆ ಅಭಯಚಂದ್ರ ಜ್ಯೆನ್ ರವರು ಹಲವಾರು ಬಾರಿ ಇಲ್ಲಿನ ಕೆರೆಯ ಅಭಿವೃದ್ದಿ ಬಗ್ಗೆ ಅನುದಾನ ಮೀಸಲಿಡಲು ತಿಳಿಸಿದ್ದು ಅದರಂತೆ ಇಲ್ಲಿಗೆ ಆಗಮಿಸಿದ್ದು ಇಲ್ಲಿ ತುಂಬಾ ಮನೆಗಳಿದ್ದು ಕೆರೆಯಲ್ಲಿ ನೀರಿನ ಒರತೆಯಿದ್ದು ವಿಸ್ತಾರವಾದ ಜಾಗವನ್ನು ಹೊಂದಿರುವ ಇಲ್ಲಿನ ಕೆರೆಯನ್ನು ವಿಶಾಲ ಗೊಳಿಸಿ ಪಾರ್ಕ್, ವಾಕಿಂಗ್, ಶೀಟ್ ಹಾಕಿ ಕುಳಿತುಕೊಳ್ಳುವ ವ್ಯವಸ್ಥೆ ಸೇರಿದಂತೆ 1 ಕೋಟಿ ಅನುದಾನವನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ಮೀಸಲಿರಿಸಲಾಗುವುದು. ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಪಾವಂಜೆ ದೇವಳದ ಬಳಿಯ ಕೆರೆಯ ಅಭಿವೃದ್ದಿ ಬಗ್ಗೆ ಮೂಡಾಕ್ಕೆ ಪ್ರಸ್ತಾವನೆ ಬಂದಿದ್ದು ಅಲ್ಲಿ ಅಭಿವೃದ್ದಿ ಕಾಮಗಾರಿ ಬಗ್ಗೆ ಸಮಸ್ಯೆಗಳಿರುವುದರಿಂದ ಅಲ್ಲಿನ ಅನುದಾನವನ್ನು ಇಲ್ಲಿಗೆ ಮೀಸಲಿಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಾದ ಸದಸ್ಯ ವಸಂತ ಬೆರ್ನಾಡ್, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಉಪಾಧ್ಯಕ್ಷೆ ಸುರೇಖ, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಇಂಜಿನೀಯರ್ ಮೋಹನ್ ಕುಮಾರ್, ಮೆಸ್ಕಾಂ ಸಲಹಾ ಸಮಿತಿಯ ಲತಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿ ನಿಧಿ ಸವಿತಾ, ಶರತ್ ಬೆಳ್ಳಾಯರು, ಉಮೇಶ್ ಕೆರೆಕಾಡು, ರಾಘವೇಂದ್ರ, ಗಣೇಶ, ನಾಗೇಶ್ ಸಾಲಿಯಾನ್, ದಿನೇಶ್ ಪಡುಪಣಂಬೂರು, ಪ್ರವೀಣ್ ಕೋಟ್ಯಾನ್, ಸಂದೀಪ್ ಆಚಾರ್ಯ, ಶ್ರೀನಿವಾಸ ಆಚಾರ್ಯ, ದಿನೇಶ್, ವಾಸು ಮತ್ತಿತರರು ಉಪಸ್ಥಿತರಿದ್ದರು.
Kinnigoli-31071701

Comments

comments

Comments are closed.

Read previous post:
Kinnigoli30071704
ಕಟೀಲು ಕಾವ್ಯ ಮನೆಗೆ ರಾಜಕೀಯ ಮುಖಂಡರ ಭೇಟಿ

ಕಿನ್ನಿಗೋಳಿ : ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನೇಣು ಬಿಗಿದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಕಟೀಲು ದೇವರ ಗುಡ್ಡೆ ನಿವಾಸಿ ಕಾವ್ಯ ಪೂಜಾರಿ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ...

Close