ಕಟೀಲು ವಿದ್ಯಾರ್ಥಿಗಳ ಪ್ರತಿಭಟನೆ

ಕಿನ್ನಿಗೋಳಿ : ಕಟೀಲು ಪ್ರಥಮ ದರ್ಜೆ ಕಾಲೇಜು, ಐಕಳ ಪೊಂಪೈ ಕಾಲೇಜು, ಬಜಪೆ ಸುಂಕದ ಕಟ್ಟೆ ನಿರಂಜನ ಸ್ವಾಮಿ ಕಾಲೇಜುಗಳ ಎ.ಬಿ.ವಿ.ಪಿ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿ ಸಂಘಟನೆಗಳು ರಾಷ್ಟ್ರೀಯ ಕ್ರೀಡಾ ಪಟು ಕಾವ್ಯಳ ಅಸಹಜ ಸಾವಿನ ಬಗ್ಗೆ ಕಟೀಲು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಕಟೀಲು ಅಜಾರು ಸಮೀಪದ ಕಾಲೇಜಿನ ಬಳಿಯಿಂದ ಕಟೀಲು ಬಸ್ಸು ನಿಲ್ದಾಣದ ತನಕ ಮೆರವಣಿಗೆಯಲ್ಲಿ ಸಾಗಿದರು.
ಕಾವ್ಯಳ ಸಾವಿನ ನ್ಯಾಯಯುತ ತನಿಖೆಗೆ ಒತ್ತಾಯಿಸಿ ಘೊಷಣೆಗಳನ್ನು ಕೂಗಿದರು, ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಎ.ಬಿ.ವಿ.ಪಿ ಮುಲ್ಕಿ ನಗರ ಸಹ ಕಾರ್ಯದರ್ಶಿ ರಾಘವೇಂದ್ರ ಕಾವ್ಯ ಸಾವಿನ ಬಗ್ಗೆ ನ್ಯಾಯಯುತ ತನಿಖೆ ಆಗಬೇಕು, ಕಾವ್ಯ ಹಾಸ್ಟೆಲ್ ಒಳಗೆ ಮತ್ತು ಹೊರ ಹೋಗುತ್ತಿದ್ದನ್ನು ಸಿ.ಸಿ.ಟಿ.ವಿಯ ವಿಡಿಯೋಗಳನ್ನು ತೋರಿಸುತ್ತಿದೆ ಆದರೆ ಅವಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ದ್ರಶ್ಯ ಯಾಕೆ ತೋರಿಸಿಲ್ಲ. ಇದರ ಹಿಂದೆ ಯಾರೇ ಇರಲಿ ನ್ಯಾಯಯುತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನ್ಯಾಯಯುತ ತನಿಖೆ ಆಗದಿದ್ದಲ್ಲಿ ಪ್ರಧಾನ ಮಂತ್ರಿಗಳಿಗೂ ದೂರು ಸಲ್ಲಿಸಲಾಗುದು ಎಂದರು.
ಈ ಸಂದರ್ಭ ಕಟೀಲು ಗ್ರಾಮ ಪಂಚಾಯಿತಿ ಪಿ.ಡಿ.ಒ ಪ್ರಕಾಶ್ ಬಿ. ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮೂರು ಕಾಲೇಜುಗಳ ಸುಮಾರು 2000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಬಾಗವಹಿಸಿದರು.

Kinnigoli-01081701 Kinnigoli-01081702

Comments

comments

Comments are closed.

Read previous post:
Kinnigoli-31071702
ಕಟೀಲು ಖಂಡನಾ ಸಭೆ

ಕಿನ್ನಿಗೋಳಿ : ರಾಷ್ಟ ಮಟ್ಟದ ಕ್ರೀಡಾ ಪಟು ಕಾವ್ಯ ಅಸಹಜ ಸಾವಿನ ಪಾರದರ್ಶಕ ತನಿಖೆ ನಡೆದು ಅದರ ಹಿಂದಿನ ರಹಸ್ಯ ಬಯಲಾಗಿ ಕಾವ್ಯಳ ಮನೆಯವರಿಗೆ ನ್ಯಾಯ ಸಿಗಬೇಕು ಎಂದು...

Close