ಕಾವ್ಯ ಮನೆಗೆ ಸೌಜನ್ಯ ತಂದೆ ತಾಯಿ ಭೇಟಿ

ಕಿನ್ನಿಗೋಳಿ : ನಿಗೂಡ ಸಾವು ಸಂಭವಿಸಿದ ಮೂಡಬಿದ್ರಿ ಆಳ್ವಾಸ್ ಕಾಲೇಜು ಹತ್ತನೆಯ ತರಗತಿ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕ್ರೀಡಾ ಪಟು ಕಾವ್ಯ ಮನೆಗೆ ನಾಲ್ಕು ವರ್ಷದ ಹಿಂದೆ ಕೊಲೆಯಾದ ಧರ್ಮಸ್ಥಳದ ಸೌಜನ್ಯ ತಂದೆ ತಾಯಿ ಭೇಟಿ ನೀಡಿದರು.
ಕಾವ್ಯ ಸಾವಿನ ಮಾಹಿತಿ ಪಡೆದ ಸೌಜನ್ಯ ತಂದೆ ಚಂದಪ್ಪ ಗೌಡ, ಕುಸುಮ ದಂಪತಿಗಳು ಕಾವ್ಯ ತಂದೆ ತಾಯಿಗೆ ಸಾಂತ್ವಾನ ನೀಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸೌಜನ್ಯ ತಾಯಿ ಕುಸುಮ ಮಾತನಾಡಿ ನನ್ನ ಮಗಳು ಸೌಜನ್ಯ ಕೊಲೆಯ ನ್ಯಾಯಕ್ಕಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ, ಆದರೆ ನ್ಯಾಯ ಸಿಕ್ಕಿಲ್ಲ. ನಮ್ಮಂತಹ ಬಡ ಮಕ್ಕಳ ತಾಯಂದಿರು ಎಷ್ಟು ದಿನ ಕಣ್ಣೀರಿನಲ್ಲಿ ಕೈ ತೊಳೆಯಬೇಕು ಎಂದು ಗೊತ್ತಾಗುವುದಿಲ್ಲ. ಸೌಜನ್ಯಳ ತನಿಖೆ ಹಳ್ಳ ಹಿಡಿದಂತೆ ಇದು ಆಗಬಾರದು. ಕಾವ್ಯ ಹೆತ್ತವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಸಾಹಿತಿ, ಸಾಮಾಜಿಕ ಕಾರ್ಯಕರ್ತೆ ಅಮೃತ ಶೆಟ್ಟಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಹೊರಟು ಹೋಗುವಂತೆ ಅನಿಸುತ್ತದೆ. ಸೌಜನ್ಯ ಹೋರಾಟದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ಇದುವರೆಗೆ ಸಿಕ್ಕಿಲ್ಲ. ಈಗಲಾದರೂ ಕಾವ್ಯ ತಂದೆ ತಾಯಿಗಳ ಪ್ರಶ್ನೆಗಳಿಗೆ ಉತ್ತರ ಸಿಗಲೇಬೇಕು. ಸೌಜನ್ಯ ಕೊಲೆ ಪ್ರಕರಣದಂತೆ ಕಾವ್ಯ ಪ್ರಕರಣ ನಡೆದಿದೆ ಎಂಬ ಸಂಶಯವಿದೆ. ಸೌಜನ್ಯ ಪ್ರಕರಣದಲ್ಲಿ ನಾವು ಸಾಕಷ್ಟು ಪಾಠ ಕಲಿತ್ತಿದ್ದೇವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಇನ್ನು ಮುಂದೆ ನಡೆಯಬಾರದು. ಕಾವ್ಯ ಸಾವಿನ ನ್ಯಾಯದ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದರು.
ಈ ಸಂದರ್ಭ ಸೌಜನ್ಯ ಅಜ್ಜ ಬಾಬು ಗೌಡ, ಮಾವ ವಿಠಲ ಗೌಡ, ಪುರಂದರ ಗೌಡ , ಸಾಮಾಜಿಕ ಕಾರ್ಯಕರ್ತ ವಿಷ್ಣು ಮೂರ್ತಿ ಭಟ್, ಪಡಂಗಾಡಿ ಕಲ್ಲಾಡಿ ಯುವ ಬಿಲ್ಲವ ವೇದಿಕೆಯ ಗೋಪಾಲ, ಪ್ರಜಾಪ್ರಭುತ್ವ ವೇದಿಕೆಯ ಕಾರ್ಯದರ್ಶಿ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03081701

Comments

comments

Comments are closed.

Read previous post:
Kinnigoli-02081701
ಹಿಂದೂ ರುದ್ರಭೂಮಿ ವನಮಹೋತ್ಸವ

ಕಿನ್ನಿಗೋಳಿ : ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್, ಯುವ ವಾಹಿನಿ ಹಳೆಯಂಗಡಿ...

Close