ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಬೇಕು

ಮುಲ್ಕಿ : ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬು. ಕಾರ್ಯಕರ್ತರು ಪಕ್ಷದ ಸಂಘಟನೆಗೆ ವಿನಿಯೋಗಿಸಿದ ಸಮಯವನ್ನು ಪಕ್ಷವು ಸೂಕ್ತ ಕಾಲದಲ್ಲಿ ಗುರುತಿಸಿದ ಇತಿಹಾಸ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ನೈರುತ್ಯ ಪದವೀಧರ ಎಮ್‌ಎಲ್‌ಸಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಹೇಳಿದರು.
ಮುಲ್ಕಿ ಬ್ಲಾಕ್ ಕಾಂಗ್ರೇಸ್ ಸಮಿತಿಗೆ ಭೇಟಿ ನೀಡಿ ಎಮ್‌ಎಲ್‌ಸಿ ಚುನಾವಣೆಯ ಬಗ್ಗೆ ಸಹಕಾರ ಕೋರಿ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾರ್ಗದರ್ಶನ ನೀಡಿದರು.  ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕೆಪಿಸಿಸಿ ಸದಸ್ಯ ಎಚ್.ವಸಂತ್ ಬೆರ್ನಾರ್ಡ್, ಮುಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತು ಬಾವ, ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಸಾಹುಲ್ ಹಮೀದ್ ಅಭಿಪ್ರಾಯಗಳನ್ನು ಮಂಡಿಸಿದರು, ಕಾರ್ಯಕ್ರಮದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೇಸ್ ಅಧ್ಯಕ್ಷ ಹಕೀಂ ಕಾರ್ನಾಡ್, ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಗಂಧಿ ಕೊಂಡಾಣ, ಮುಲ್ಕಿ ನಗರ ಪಂಚಾಯಿತಿ ಸದಸ್ಯ ಅಶೋಕ್ ಪೂಜಾರಿ, ಸಂದೀಪ್ ಚಿತ್ರಾಪು, ಮುಖಂಡರುಗಳಾದ ಸಂದೀಪ್ ಕೆ.ಎಸ್ ರಾವ್ ನಗರ, ಮಂಜುನಾಥ ಕಂಬಾರ, ಶಶೀಂದ್ರ ಎಂ. ಸಾಲ್ಯಾನ್, ಅತಿಕಾರು ಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವಸಂತಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ ಉಪಸ್ಥಿತರಿದ್ದರು.

Kinnigoli-05081701

Comments

comments

Comments are closed.

Read previous post:
Kinnigoli-04081701
ವರಮಹಾಲಕ್ಷಿ ವೃತ ಪೂಜೆ

ಕಿನ್ನಿಗೋಳಿ ಶ್ರೀ ಕಾಳಿಕಾಂಬ ಮಹಿಳಾ ವೃಂದ  ತೋಕೂರು ಕುಲಾಲ ಸಮಾಜ ಸೇವಾ ಸಂಘ ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ  ಶ್ರೀ ಅರಸು ಕುಂಜಿರಾಯ ದೈವಸ್ಥಾನ...

Close