ಗುತ್ತಕಾಡು ಶಾಲೆ ಸೈಕಲ್ ವಿತರಣೆ

ಕಿನ್ನಿಗೋಳಿ : ಕನ್ನಡ ಶಾಲೆಯ ಬಗ್ಗೆ ಕೀಳರಿಮೆ ತಾತ್ಸರ ಭಾವನೆ ಇರಬಾರದು. ಆಂಗ್ಲ ಮಾಧ್ಯಮ ಶಾಲೆಗಳಿಗಿಂತಲೂ ಉತ್ತಮ ತರಬೇತಿ ಪಡೆದ ಶಿಕ್ಷಕರು ಕನ್ನಡ ಮಾಧ್ಯಮ ಶಾಲೆಗಳಲ್ಲಿದ್ದಾರೆ. ಎಂದು ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿದರು.
ಗುತ್ತಕಾಡು ಸರಕಾರಿ ಶಾಲೆಯಲ್ಲಿ ಸರಕಾರದಿಂದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಮಾಡುವ ಸೈಕಲ್‌ಗಳನ್ನು ಇತ್ತೀಚೆಗೆ ವಿತರಿಸಿ ಮಾತನಾಡಿದರು.
ಮಂಗಳೂರು ತಾಲೂಕು ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರ, ಗ್ರಾಮ ಪಂಚಾಯಿತಿ ಸದಸ್ಯರಾದ ವಾಣಿ, ಚಂದ್ರ ಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ರೂಪ, ಹರೀ ಸಾಲ್ಯಾನ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೆಸಾ ಸ್ವಾಗತಿಸಿದರು.

Kinnigoli-08081703

Comments

comments

Comments are closed.

Read previous post:
Kinnigoli-08081702
ಯುವಜನತೆ ಪರಿಸರ ಸಂರಕ್ಷಕರಾಗಲಿ

ಕಿನ್ನಿಗೋಳಿ : ಮನುಷ್ಯನ ದುರಾಸೆಯ ಫಲ ಮತ್ತು ಪರಿಸರ ನಾಶದಿಂದ ಸಾಂಕ್ರಾಮಿಕ ರೋಗಗಳಿಗೆ ಒಳಗಾಗುತ್ತಿದ್ದೇವೆ ಅನೇಕ ಜೀವಿಗಳು ಸಂತತಿಯೂ ಇಲ್ಲದೆ ನಾಶವಾಗಿದೆ. ಯುವ ಜನತೆಗೆ ಕಾಳಜಿವಹಿಸಿ ಪರಿಸರ ಸಂರಕ್ಷಣೆಯ...

Close