ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಬೇಕು

ಕಿನ್ನಿಗೋಳಿ : ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಶಿಕ್ಷಣ ವಂಚಿತರಾನ್ನಾಗದೆ ಮಾಡದೆ ಪ್ರೋತ್ಸಾಹ ಪ್ರೇರಣೆ ನೀಡಿದಲ್ಲಿ ಭವಿಷ್ಯದ ಉತ್ತಮ ಪ್ರಜೆಯಾಗಬಲ್ಲರು. ಸೇವಾ ಮನೋಭಾವನೆಯ ಇಂತಹ ಸಂಘಟನೆಗಳು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಬೈಕಂಪಾಡಿ ಬ್ಲೂ ವಾಟರ್ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀನಿವಾಸ ಭಟ್ ಹೇಳಿದರು.
ಹಳೆಯಂಗಡಿ ಸಮೀಪದ ಕದಿಕೆ ಸಾಲ್ಯಾನ್ ಮೂಲಸ್ಥಾನದಲ್ಲಿ ಇತ್ತೀಚೆಗೆ ನಡೆದ ನಾಗದೇವರ ಪಂಚಮಿ ತಂಬಿಲೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಜಗನ್ನಾಥ ಸಾಲ್ಯಾನ್ ಕದಿಕೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ತರಗತಿಯ ಪ್ರತಿಭಾನ್ವಿತ ಒಟ್ಟು 142 ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಸಾಧಕರಿಗೆ ಆರ್ಥಿಕ ಧನ ಸಹಾಯ ಹಾಗೂ ವಿದ್ಯಾರ್ಥಿ ವೇತನ ನೀಡಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿ ಸುಪ್ರಸಾದ್ ದೇವದಾಸ್ ಸಾಲ್ಯಾನ್ ವೈದ್ಯಕೀಯ ಶಿಕ್ಷಣಕ್ಕಾಗಿ ಸ್ಥಳದಲ್ಲಿಯೇ ಸಮಾಜ ಬಾಂಧವರು 50 ಸಾವಿರ ರೂ. ಸಂಗ್ರಹಿಸಿ ಹಸ್ತಾಂತರಿಸಿದರು.
ಕ್ಷೇತ್ರದ ಆಡಳಿತ ಮಂಡಳಿಯ ಗೌರವ ಸಲಹೆಗಾರರಾಗಿದ್ದ ಜು. ೨೬ರಂದು ಅಗಲಿದ ದಿ. ಲಕ್ಷ್ಣಣ ಗುರಿಕಾರ ಅವರಿಗೆ ಸಂಘಟನಾ ಕಾರ್ಯದರ್ಶಿ ಶೋಭೇಂದ್ರ ಸಸಿಹಿತ್ಲು ಅವರು ನುಡಿ ನಮನ ಸಲ್ಲಿಸಿದರು.
ಕ್ಷೇತ್ರದ ಮೊಕ್ತೇಸರ ದೇವದಾಸ್ ಬೈಕಂಪಾಡಿ, ಕ್ಷೇತ್ರಾಡಳಿತ ಅಧ್ಯಕ್ಷ ಕೇಶವ ಸಾಲ್ಯಾನ್ ಬೈಕಂಪಾಡಿ, ಸುಂದರ ಜೆ. ಸಾಲ್ಯಾನ್, ಅರ್ಚಕರಾದ ಜಯ ಸಾಲ್ಯಾನ್ ಪಣಂಬೂರು, ಮಾಧವ ಸಾಲ್ಯಾನ್ ಬೈಕಂಪಾಡಿ, ಗೌರವ ಸಲಹೆಗಾರ ಪುರಂದರ ಗುರಿಕಾರ, ಸಮಿತಿಯ ಗೌರವಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಅಧ್ಯಕ್ಷ ಸಾಧು ಸಾಲ್ಯಾನ್ ಮಲ್ಪೆ, ಉಪಾಧ್ಯಕ್ಷರಾದ ಶರತ್ ಎಲ್. ಕರ್ಕೇರ, ಹೇಮಂತ್‌ಕುಮಾರ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಮೋಹನ್ ಕೋಡಿಕಲ್, ಉಪ ಕಾರ್ಯದರ್ಶಿಗಳಾದ ರಾಜೇಶ್ ಸಲ್ಯಾನ್, ಗಣೇಶ್ ಸಾಲ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ತಾರಾನಾಥ ಸಾಲ್ಯಾನ್, ಭರತ್ ಎರ್ಮಾಳ್, ಶೋಭೇಂದ್ರ ಸಾಲ್ಯಾನ್ ಕೋಶಾಧಿಕಾರಿ ಅರವಿಂದ ಸಾಲ್ಯಾನ್ ಸಸಹಿತ್ಲು, ಮಹಿಳಾ ಘಟಕದ ಅಧ್ಯಕ್ಷೆ ರಗುಣ ಉಮೇಶ್, ಕಾರ್ಯದರ್ಶಿ ಪ್ರಭಾವತಿ ಆರ್. ಪುತ್ರನ್. ಅನಿಲ್ ಸಾಲ್ಯಾನ್, ತಾರಾನಾಥ ಸಾಲ್ಯಾನ್ ದೊಡ್ಡೆಕೊಪ್ಲ, ವಿಶ್ವನಾಥ ಸಾಲ್ಯಾನ್ ಬೆಂಗಳೂರು ಉಪಸ್ಥಿತರಿದ್ದರು.
ಕೇಶವ ಸಾಲ್ಯಾನ್ ಡಿ. ಸುರತ್ಕಲ್ ಸ್ವಾಗತಿಸಿದರು, ಕುಮಾರ್ ಸಾಲ್ಯಾನ್ ಸುರತ್ಕಲ್ ವಂದಿಸಿದರು, ದೇವದಾಸ್ ಸಾಲ್ಯಾನ್ ಬೈಕಂಪಾಡಿ ಮತ್ತು ಮೋಹನ್ ಕೋಡಿಕಲ್ ನಿರೂಪಿಸಿದರು.

Kinnigoli-08081701

 

Comments

comments

Comments are closed.

Read previous post:
Kinnigoli-08081707
ಕಾವ್ಯ ಮನೆಗೆ ಕವಿತಾ ಸನಿಲ್ ಭೇಟಿ

ಕಿನ್ನಿಗೋಳಿ : ನಿಗೂಡವಾಗಿ ಮೃತ ಪಟ್ಟ ಮೂಡಬಿದಿರೆ ಆಳ್ವಾಸ್ ಕಾಲೇಜು ಹತ್ತನೆಯ ತರಗತಿ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕ್ರೀಡಾ ಪಟು ಕಾವ್ಯ ಮನೆಗೆ ಮಂಗಳೂರು ಮೇಯರ್ ಕವಿತಾ ಸನಿಲ್ ಭೇಟಿ...

Close