ಯುವಜನತೆ ಪರಿಸರ ಸಂರಕ್ಷಕರಾಗಲಿ

ಕಿನ್ನಿಗೋಳಿ : ಮನುಷ್ಯನ ದುರಾಸೆಯ ಫಲ ಮತ್ತು ಪರಿಸರ ನಾಶದಿಂದ ಸಾಂಕ್ರಾಮಿಕ ರೋಗಗಳಿಗೆ ಒಳಗಾಗುತ್ತಿದ್ದೇವೆ ಅನೇಕ ಜೀವಿಗಳು ಸಂತತಿಯೂ ಇಲ್ಲದೆ ನಾಶವಾಗಿದೆ. ಯುವ ಜನತೆಗೆ ಕಾಳಜಿವಹಿಸಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು ಎಂದು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಹೇಳಿದರು.
ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ವಿಭಾಗ, ವಿದ್ಯಾರ್ಥಿಸಂಘ ಮತ್ತು ಮಂಗಳೂರು ಅರಣ್ಯ ಇಲಾಖೆಯ ಆಶ್ರಯದಲ್ಲಿ ನಡೆದ ಗಿಡ ಬೆಳೆಸಿ ಪರಿಸರ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು. ರೆಡ್ ಕ್ರಾಸ್ ಅಧಿಕಾರಿಗಳು, ವೈಸ್ ಪ್ರಿನ್ಸಿಪಾಲ್ ಸುರೇಶ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಗಣಪತಿ ಭಟ್, ಪರಮೇಶ್ವರ್ ಸಿ.ಎಚ್., ಮಂಗಳೂರು ರೇಂಜ್ ಫಾರೆಸ್ಟ್ ಅಧಿಕಾರಿಗಳಾದ ಕೃಷ್ಣ ಜೋಗಿ, ದಿವಾಕರ, ಪ್ರಶಾಂತ್ ಭಾಗವಹಿಸಿದ್ದರು.
Kinnigoli-08081702

Comments

comments

Comments are closed.

Read previous post:
Kinnigoli-08081701
ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಬೇಕು

ಕಿನ್ನಿಗೋಳಿ : ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಶಿಕ್ಷಣ ವಂಚಿತರಾನ್ನಾಗದೆ ಮಾಡದೆ ಪ್ರೋತ್ಸಾಹ ಪ್ರೇರಣೆ ನೀಡಿದಲ್ಲಿ ಭವಿಷ್ಯದ ಉತ್ತಮ ಪ್ರಜೆಯಾಗಬಲ್ಲರು. ಸೇವಾ ಮನೋಭಾವನೆಯ ಇಂತಹ ಸಂಘಟನೆಗಳು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು...

Close