ಯಕ್ಷಗಾನಕ್ಕೆ ದಕ್ಕೆ ಬರದ ರೀತಿಯ ಬದಲಾವಣೆ ಅಗತ್ಯ

 ಕಿನ್ನಿಗೋಳಿ : ಆಧುನಿಕತೆಯ ಕಾಲದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಸ್ವಲ್ಪ ಮಟ್ಟಿನ ಬದಲಾವಣೆ ಕಂಡಿದೆ ಆದರೆ ಪರಂಪರೆ ಹಾಗೂ ಮೂಲ ಸ್ವರೂಪಕ್ಕೆ ದಕ್ಕೆ ಬಾರದಂತೆ ಬದಲಾವಣೆ ಮಾಡಬೇಕಾಗಿದೆ ಎಂದು ಕಟೀಲು ದೇವಳ ಅರ್ಚಕ ದೇವಿ ಕುಮಾರ್ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿಯ ಯಕ್ಷಲಹರಿ ( ರಿ) ಮತ್ತು ಯುಗ ಪುರುಷದ ಸಂಯುಕ್ತ ಆಶ್ರಯದಲ್ಲಿ ಸಹಯೋಗದೊಂದಿಗೆ ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017 ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಲೆ ಸಪ್ತಾಹದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಡಬಿದಿರೆಯ ಯಕ್ಷಮೇನಕಾದ ಅಧ್ಯಕ್ಷ ಸದಾಶಿವ ನೆಲ್ಲಿಮಾರು ಅಧ್ಯಕ್ಷತೆವಹಿಸಿ ಮಾತನಾಡಿ ಕಿನ್ನಿಗೋಳಿಯ ಯಕ್ಷಲಹರಿ ಸಂಸ್ಥೆ ತಾಳಮದ್ದಳೆಯಂತಹ ಯಕ್ಷಗಾನದ ಮೂಲಕವಾಗಿ ಧಾರ್ಮಿಕ ಜಾಗೃತಿ, ನೈತಿಕತೆ , ಸಾಂಸ್ಕೃತಿಕತೆಯ ಉದ್ದೀಪನದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಕಲಾವಿದ ವಸಂತ ಶೆಟ್ಟಿ ಮುಂಡ್ಕೂರು ಅವರನ್ನು ಸನ್ಮಾನಿಸಲಾಯಿತು. ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಕಿನ್ನಿಗೋಳಿ ಸಾಗರಿಕಾ ಸಂಸ್ಥೆಯ ಧನಂಜಯ ಶೆಟ್ಟಿಗಾರ್, ಗುತ್ತಿಗೆದಾರ ದೊಡ್ಡಯ್ಯ ಮೂಲ್ಯ, ರಾಘವೇಂದ್ರ ರಾವ್ ಕಟೀಲು, ಉದ್ಯಮಿ ಲೋಕಯ್ಯ ಕೊಂಡೇಲ, ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಸ್ವಾಗತಿಸಿದರು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ವಸಂತ ದೇವಾಡಿಗ ವಂದಿಸಿದರು. ಉಮೇಶ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.

Kinnigoli-05081701

Comments

comments

Comments are closed.

Read previous post:
Kinnigoli-07081701
ಸಸಿಹಿತ್ಲು ಆಟಿ ಸಡಗರ

ಮೂಲ್ಕಿ: ಸಂತೇಸಿದ ಸೌಭಾಗ್ಯ ದಾಂತಿನ ಪೆರ್ಗಡ್ತಿ, ಕದಿರೆಗ್ ಪರಕೆನ್ ಪಂಡೊಂದಲ್, ಬೊಳ್ಳಿ ತೊಟ್ಟಿಲ್ ಬಂಗಾರ್‌ದ ಬಾಲೆ ಕದಿರೆ ಮಂಜುನಾಥಗ್ ಸಂದಾಯಲ್. . . . . ಎಂಬ ಕರಾವಳಿಯ ಕಾರಣಿಕ ಅವಳಿ...

Close