ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

ಕಿನ್ನಿಗೋಳಿ : ಕನ್ನಡ ಮಾಧ್ಯಮ ಶಿಕ್ಷಣದಲ್ಲಿ ನಡುಗೋಡು ಶಾಲೆ ಎಸ್.ಎಸ್.ಎಲ್.ಸಿಯಲ್ಲಿ ಸತತ 4 ಬಾರಿ ನೂರು ಶೇಕಡ ದಾಖಲಿಸುತ್ತಿರುವುದು ಅಭಿನಂದನಾರ್ಹ ಬಡವರ್ಗದ ಕುಟುಂಬದ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ದೃಷ್ಟಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ವಿವಿಧ ಸವಲತುಗಳನ್ನು ನೀಡುತ್ತಿದೆ, ಶೂ ಬಾಗ್ಯ, ಅನ್ನ ಬಾಗ್ಯದೊಂದಿಗೆ ಸರಕಾರ ಈ ಬಾರಿ ಕ್ಷೀರ ಬಾಗ್ಯವನ್ನು ನೀಡುತ್ತಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು
ನಡುಗೋಡು ಜಿಲ್ಲಾ ಪಂಚಾಯಿತಿ ಸರಕಾರಿ ಪ್ರೌಡ ಶಾಲೆಗೆ ಸರಕಾರದಿಂದ ನೀಡುವ ಸೈಕಲ್‌ಗಳನ್ನು ವಿತರಿಸಿ ಮಾತನಾಡಿದರು
ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಎಸ್.ಡಿ.ಎಂ.ಸಿ ಸದಸ್ಯ ಜಗದೀಶ್ ಆಚಾರ್ಯ, ಗೋವಿಂದ ಪೂಜಾರಿ, ಹರಿಶ್ಚಂದ್ರ ಆಚಾರ್ಯ, ಶಿಕ್ಷಕಿಯರಾದ ವಿದ್ಯಾ ಟಿ, ರೇಖಾ ಬಗ್ಗನ್, ಮಂಗಳಾ ನಾಯಕ್, ನಾಗರಾಜ್, ಸುಂದರ ತೋಡಾರ್ ಮತ್ತಿತರರು ಇದ್ದರು,
ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿ, ಸೀತಾ ಚಂದ್ರಿಕಾ ವಂದಿಸಿದರು. ಮೇರಿ ವಿಜಯ ಗೋವಿಯಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08081704

Comments

comments

Comments are closed.

Read previous post:
Kinnigoli-08081703
ಗುತ್ತಕಾಡು ಶಾಲೆ ಸೈಕಲ್ ವಿತರಣೆ

ಕಿನ್ನಿಗೋಳಿ : ಕನ್ನಡ ಶಾಲೆಯ ಬಗ್ಗೆ ಕೀಳರಿಮೆ ತಾತ್ಸರ ಭಾವನೆ ಇರಬಾರದು. ಆಂಗ್ಲ ಮಾಧ್ಯಮ ಶಾಲೆಗಳಿಗಿಂತಲೂ ಉತ್ತಮ ತರಬೇತಿ ಪಡೆದ ಶಿಕ್ಷಕರು ಕನ್ನಡ ಮಾಧ್ಯಮ ಶಾಲೆಗಳಲ್ಲಿದ್ದಾರೆ. ಎಂದು ಮಂಗಳೂರು...

Close