ಸಸಿಹಿತ್ಲು ಆಟಿ ಸಡಗರ

ಮೂಲ್ಕಿ: ಸಂತೇಸಿದ ಸೌಭಾಗ್ಯ ದಾಂತಿನ ಪೆರ್ಗಡ್ತಿ, ಕದಿರೆಗ್ ಪರಕೆನ್ ಪಂಡೊಂದಲ್, ಬೊಳ್ಳಿ ತೊಟ್ಟಿಲ್ ಬಂಗಾರ್‌ದ ಬಾಲೆ
ಕದಿರೆ ಮಂಜುನಾಥಗ್ ಸಂದಾಯಲ್. . . . . ಎಂಬ ಕರಾವಳಿಯ ಕಾರಣಿಕ ಅವಳಿ ಸೋದರರಾದ ಕಾಂತಾಬಾರೆ ಬೂದಾಬಾರೆ ಬೀರದ ಇಂಪಾದ ದನಿಯ ಹಿನ್ನಲೆ. ಧೋ ಎಂದು ಸುರಿಯುವ ಆಷಾಡದ ಮಳೆಗಾಳಿ. ಹೆಣೆದ ಹಸಿಮಡಲು ಛಾವಣಿಯ ವೇದಿಕೆ, ವೇದಿಕೆಯಲ್ಲಿ ತುಳುನಾಡಿನ ಮನೆಗಳ ಮುಂದೆ ವಿರಾಜಿಸುವ ತುಳಸಿಕಟ್ಟೆಯ ಹಿನ್ನಲೆಯಲ್ಲಿ ತಟ್ಟಿಕುಡುಪು, ತೆಂಗಿನ ಚಿಪ್ಪಿನ ಸೌಟಿನ ಶೃಂಗಾರ, ಜೊತೆಗೆ ಕರಾವಳಿಯ ತರಕಾರಿ ವಸ್ತು ವೈವಿಧ್ಯ ಪ್ರದರ್ಶನ ಸಾದಕರಿಗೆ ಸನ್ಮಾನ ಆಟಿವಿಚಾರಗಳ ಬಗ್ಗೆ ಚಿಂತನೆ ಅಪ್ಪಟ ತುಳುವಿನಲ್ಲಿ ಸಂಪೂರ್ಣವಾಗಿ ನಡೆದ ಕಾರ್ಯಕ್ರಮ ವಿವಿಧ ತುಳು ಜಾನಪದ ಪದ್ಯ,ಆಟಗಳು,ಹಾಗೂ ಹಾಸ್ಯದ ಹೊನಲಿನನಲ್ಲಿ ನಡೆದ ಆಟಿ ಸಡಗರ ಸುಮಾರು ೨೦ಕ್ಕೂ ಅಧಿಕ ಆಟಿ ಖಾಧ್ಯಗಳ ಜೊತೆಗೆ ಊಟ ವೈವಿಧ್ಯವು ಕಾಂತಾ ಬಾರೆ ಬೂದಾ ಬಾರೆ ನಿರ್ಮಿಸಿದ್ದಾರೆ ಎನ್ನಲಾಗುತ್ತಿರು ಐತಿಹಾಸಿಕ ಸಸಿಹಿತ್ಲು ಶ್ರೀ ಸಾರಾಂತಾಯ ಗರೋಡಿಯಲ್ಲಿ ಸಸಿಹಿತ್ಲು ಬಿಲ್ಲವರ ಹಿತವರ್ದಕ ಸಂಘದ ಆಸರೆಯಲ್ಲಿ ಭಾನುವಾರ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಕಸ್ತೂರಿ ಬಾ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾದ್ಯಾಪಕ ಡಾ.ಎಂ.ಎಸ್.ಕೋಟ್ಯಾನ್ ಮಾತನಾಡಿ,ಕರಾವಳಿಯ ಆಹಾರ ವೈವಿದ್ಯಗಳಲ್ಲಿ ವೈದ್ಯಕೀಯ ಮತ್ತು ವೈಜ್ಞಾನಿಕ ಚಿಂತನೆ ಅಡಗಿದೆ ನಮ್ಮ ಪ್ರಕೃತಿಯಲ್ಲಿ ಲಭ್ಯ ವಸ್ತುಗಳನ್ನು ಉಪಯೋಗಿಸಿ ಆರೋಗ್ಯ ರಕ್ಷಿಸುವ ವಿಚಾರವನ್ನು ಪೂರ್ವಿಕರು ಕಂಡುಕೊಂಡು ನಮಗಾಗಿ ನೀಡಿದ್ದಾರೆ ಆದರೆ ಆಧುನಿಕ ಜೀವನ ಪದ್ದತಿಯಲ್ಲಿ ಈ ಹಳೆಯ ಕ್ರಮಗಳನ್ನು ಕೈಬಿಟ್ಟಿರುವ ನಾವು ವಿಜ್ಞಾನ ಎಷ್ಟೇ ಮುಂದುವರಿದರೂ ಬಹಳಷ್ಟು ಆರೋಗ್ಯ ಸಮಸ್ಯೆಗೆ ಪರಿಹಾರವಿಲ್ಲದೆ ಕಷ್ಟಪಡುವಂತಾಗಿದೆ. ಪ್ರಕೃತಿಯ ರಕ್ಷಣೆಯೊಂದಿಗೆ ಹಿಂದಿನ ಉತ್ತಮ ತಿಳುವಳಿಕೆಯನ್ನು ಬೆಳೆಸುವ ಪ್ರಯತ್ನವಾಗಬೇಕು ಅದು ಕೇವಲ ಕಾರ್ಯಕ್ರಮಕ್ಕಾಗಿ ಸೀಮಿತವಾಗಬಾರದು ಎಂದರು.
ಎಂ.ಆರ್.ಪಿ.ಎಲ್. ಸಿ.ಆರ್.ಎಸ್ ಘಟಕದ ಹಿರಿಯ ಪ್ರಭಂದಕರಾದ ವೀಣಾ.ಟಿ.ಶೆಟ್ಟಿ ಮಾತನಾಡಿ, ಹಿಂದಿನ ಆಟಿ ಕಷ್ಟದ ದಿನಗಳು ಎಂದು ಗುರುತಿಸಲಾಗಿದ್ದರೂ ಇಂದು ಸಡಗರ ಆಚರಿಸುವ ದಿನವಾಗಿದೆ ಈ ವಿಚಾರಗಳ ವೈಜ್ಞಾನಿಕ ತಳಹದಿಯನ್ನು ತಿಳಿದುಕೊಂಡು ಮುಂದಿನ ಯುವ ಸಮಾಜಕ್ಕೆ ತಿಳಿಸುವ ಕಾರ್ಯ ನಡೆಯಬೇಕು ಆಧುನಿಕ ಜನ ಜೀವನದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರೂ ಸಾಧನೆಗಳನ್ನು ಮಾಡುತ್ತಿರುವ ಕಾರಣ ಕೌಟುಂಬಿಕ ಅಭಿವೃದ್ಧಿ ಸಾಧ್ಯವಾಗಿದೆ. ಆದರೆ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಕರ್ತವ್ಯದಲ್ಲಿ ಮಹಿಳೆಯರು ಮುನ್ನಡೆಯಿಡಬೇಕು ಎಂದರು.
ಉದ್ಘಾಟನೆ: ತುಳಸಿ ಕಟ್ಟೆಗೆ ಹಾಲು ಮತ್ತು ನೀರು ಎರೆಯುವ ಮೂಲಕ ಖಂಡಿಗೆ ಬೀಡು ಧರ್ಮರಸು ಉಳ್ಳಾಯ ದೈವಸ್ಥಾನದ ಆದಿತ್ಯ ಮುಕ್ಕಾಲ್ದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾರಂತಾಯ ಗರೋಡಿಯಲ್ಲಿ ನಿಸ್ವಾರ್ಥ ಸೇವೆಗೈದ ದಾಮೋದರ ಅಂಚನ್ ರವರನ್ನು ಅಕ್ಕಿಮುಡಿಯಲ್ಲಿ ಕುಳ್ಳಿರಿಸಿ ವಿಶೇಷ ಸನ್ಮಾನ ನಡೆಯಿತು. ಮಕ್ಕಳು ಮತ್ತು ಹಿರಿಯರಿಗಾಗಿ ನಡೆಸಲಾದ ಕರಾವಳಿಯ ಗ್ರಾಮೀಣ ಸ್ಪರ್ದೆಗಳನ್ನು ನವೀನ್ ಕುಮಾರ್ ಮತ್ತು ದೀಕ್ಷಿತ್ ನಿರ್ವಹಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಾರಂತಾಯ ಗರೋಡಿಯ ಅನುವಂಶಿಕ ಮೊಕ್ತೇಸರ ಕಾಂತುಲಕ್ಕಣ ಗುರಿಕಾರ ಯಾನೆ ಯಾದವ ಬಂಗೇರ ನಡೆಸಿಕೊಟ್ಟರು.
ಅತಿಥಿಗಳಾಗಿಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ, ಉದ್ಯಮಿಗಳಾದ ಪ್ರಸಾದ್ ಶೆಟ್ಟಿ ಮತ್ತು ಶಾನು ಪ್ರಸಾದ್ ಶೆಟ್ಟಿ, ಪದ್ಮನಾಭ ಬಂಗೇರಾ ಮತ್ತುಸುಧಾಕರ ಪೂಂಜಾ,ಬಿಲ್ಲವರ ಹಿತವರ್ದಕ ಸಂಘದ ಅಧ್ಯಕ್ಷ ಸಂದೀಪ್ ಮತ್ತು ಮಹಿಳಾ ಕೂಟದ ಕಾರ್ಯದರ್ಶಿ ಜಯಶ್ರೀ ರಮೇಶ್ ಉಪಸ್ಥಿತರಿದ್ದರು.
ಲೀಲಾ ಮತ್ತು ಸುಂದರಿ ಕೋಟಿ ಚನ್ನಯ್ಯ ಪಾಡ್ದನ ಹಾಡಿದರು. ಹಿರಿಯ ರಂಗಕರ್ಮಿ ಪರಮಾನಂದ ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆ ಗೈದರು. ಪ್ರ್ರಾದ್ಯಾಪಕ ಪ್ರಭಾತ್ ಎಸ್.ಆರ್ ನಿರೂಪಿಸಿ ವಂದಿಸಿದರು.
ಆಟಿ ವಿಶೇಷತೆ:
#ಪಾಡ್ದನದ ಮೂಲಕ ಪ್ರಾರಂಭ
#ತುಳಸಿಕಟ್ಟೆಗೆ ಹಾಲು ಮತ್ತು ನೀರು ಎರೆಯುವ ಮೂಲಕ ಉದ್ಘಾಟನೆ.
#ಅತಿಥಿಗಳಿಗೆ ತುಳು ಸಂಪ್ರದಾಯದಂತೆ ಕೆರ‍್ಚಿ ಕಟ್ಟಿದ ಕಾಯಿ ಬೊಂಡ ಸಮರ್ಪಣೆಯೊಂದಿಗೆ ಸ್ವಾಗತ.
#ಗ್ರಾಮದ ಹಿರಿಯರು ಮತ್ತು ಕಿರಿಯರಿಗೆ ತುಳು ಜಾನಪದ ಕ್ರೀಡಾ ಕೂಟ. ಕುಸಲ್‌ದ ಪಂಥ.ಎದುರು ಕಥೆ.
#ಅದೃಷ್ಟ ವ್ಯಕ್ತಿಗೆ ಕಟ್ಟದ ಕೋಳಿ ಬಹುಮಾನ
ಆಟಿ ಊಟ ವೈವಿಧ್ಯ: ಪತ್ರೋಡೆ, ಮೆತ್ತೆ ಗಂಜಿ,ತೇವು ತೇಟ್ಲ. ಪೆಲಕಾಯಿ ಗಟ್ಟಿ ಬೊಕ್ಕ ಗಾರ್ಯ,ತಿಮರೆ ಚಟ್ನಿ,ಕುಡು ಚಟ್ನಿ, ಪೂಂಬೆ ಚಟ್ನಿ, ಕಣಿಲೆ ಪದೆಂಗಿ, ಅರೆಪುದಡ್ಡೆ, ನುಪ್ಪು-ಸಾರ್. ಸಾರ್ನಡ್ಡೆ ಮುಂತಾದ ವಿಶೇಷ ಗಳೊಂದಿಗೆ ನೂರಾರು ಜನ ಆಟಿ ಖಾಧ್ಯ ಸವಿದರು.

Kinnigoli-07081701

Comments

comments

Comments are closed.

Read previous post:
Kinnigoli-07081701
ಕಟೀಲು ರಕ್ತದಾನ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಮಂಗಳೂರು ಕೆಎಂಸಿ ಆಸ್ಪತ್ರೆ, ವೆನ್‌ಲಾಕ್ ಆಸ್ಪತ್ರೆ, ರೋಟರಿ ಕ್ಲಬ್ ಕಿನ್ನಿಗೋಳಿ, ಇನ್ನರ್ ವೀಲ್ ಕ್ಲಬ್, ಕಟೀಲು ಸಮೂಹ ಸಂಸ್ಥೆಗಳ ಹಳೇ...

Close