ಕಿನ್ನಿಗೋಳಿ ಯಕ್ಷಲಹರಿ ( ರಿ ) ಯುಗಪುರುಷ ತಾಳಮದ್ದಳೆ ಸಪ್ತಾಹ

ಕಿನ್ನಿಗೋಳಿ : ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಯಕ್ಷಗಾನ ಜ್ಞಾನದ ಬಗ್ಗೆ ಅರಿವು ಮೂಡಿಸಿದಾಗ ಭವಿಷ್ಯದಲ್ಲಿ ಉತ್ತಮ ವಾಗ್ಮೀ ಕಲಾವಿದರಾಗಬಲ್ಲರು ಎಂದು ಮೂಡಬಿದಿರೆ ವಿಜಯಲಕ್ಷ್ಮಿ ಕ್ಯಾಶ್ಯೂ ಸಂಸ್ಥೆಯ ಅನಂತಕೃಷ್ಣ ರಾವ್ ಹೇಳಿದರು.
ಕಿನ್ನಿಗೋಳಿಯ ಯಕ್ಷಲಹರಿ ( ರಿ) ಮತ್ತು ಯುಗ ಪುರುಷದ ಸಂಯುಕ್ತ ಆಶ್ರಯದಲ್ಲಿ ಸಹಯೋಗದೊಂದಿಗೆ ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017 ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಲೆ ಸಪ್ತಾಹದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡಬಿದಿಯ ಉದ್ಯಮಿ ಶ್ರೀಪತಿ ಭಟ್ ಮಾತನಾಡಿ ಜನರಿಗೆ ಸಂಸ್ಕೃತಿ ಸಂಸ್ಕಾರ ಪುರಾಣ ಜ್ಞಾನ ನೀಡುವ ಮಾಧ್ಯಮ ತಾಳಮದ್ದಳೆಯಾಗಿದೆ. ಎಂದು ಹೇಳಿದರು.
ಈ ಸಂದರ್ಭ ಕಲಾವಿದರ ನೆಲೆಯಲ್ಲಿ ಉಮೇಶ್ ಶೆಟ್ಟಿ ಮಚ್ಚಾರು ಅವರನ್ನು ಯಕ್ಷಗಾನಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಲವ ಶೆಟ್ಟಿ , ಕೊಡೆತ್ತೂರು ದೇವಸ್ಯ ಮಠದ ಸುಧಾ ವೇದವ್ಯಾಸ ಉಡುಪ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ,ಉಮೇಶ್ ನೀಲಾವರ, ಶ್ರೀವತ್ಸ, ಅಶೋಕ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಸ್ವಾಗತಿಸಿದರು. ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ವಸಂತ ದೇವಾಡಿಗ ವಂದಿಸಿದರು. ವಿನಯ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗುರುದಕ್ಷಿಣೆ ತಾಳಮದ್ದಲೆ ನಡೆಯಿತು.

Kinnigoli-08081706

Comments

comments

Comments are closed.

Read previous post:
Kinnigoli-08081705
ಕಟೀಲು: ಭಾಗವತ ಪುರಾಣ ಕಥಾ ಮಾಲಿಕೆ

ಕಿನ್ನಿಗೋಳಿ : ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿ. ಪ್ರಾ. ಶಾಲೆಯ ಶಾರದಾ ಸದನ ಸಭಾಂಗಣದಲ್ಲಿ ಭಾಗವತ ಪುರಾಣ ಕಥಾ ಮಾಲಿಕೆ ೨ನೇ ಸ್ಕಂದ ಬಗ್ಗೆ ನಿವೃತ್ತ ಉಪನ್ಯಾಸಕ...

Close