ದ.ಸಂ.ಸ. ವತಿಯಿಂದ ಕಾವ್ಯ ಸಾವಿನ ಬಗ್ಗೆ ಪ್ರತಿಭಟನೆ

ಕಿನ್ನಿಗೋಳಿ : ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕಟೀಲು ದೇವರಗುಡ್ದೆ ನಿವಾಸಿ ಕಾವ್ಯ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ಕಟೀಲು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಡಿ ವೈ ಎಫ್ ಐ ನ ಮುನೀರ್ ಕಾಟಿಪಳ್ಳ ಮಾತನಾಡಿ ಕಾವ್ಯ ಸಾವಿನ ಬಗ್ಗೆ ಸಮಗ್ರ ನಿಖರ ಪಾರದರ್ಶಕ ನ್ಯಾಯ ಪರ ತನಿಖೆ ಆಗಬೇಕು. ಇದು ಅನುಮಾನಾಸ್ಪದ ಸಾವು ಎಂಬುದು ಹಲವರ ಸಂಶಯವಾಗಿದೆ. ಶಿಕ್ಷಣ ಸಂಸ್ಥೆಗೆ ಕೆಸರೆಚುವ ಕೆಲಸ ಆಗುತ್ತಿದೆ. ಆಳ್ವರಿಗೆ ಈ ಪ್ರಕರಣದಿಂದ ಅಘಾತವಾಗಿದೆ. ಕಾವ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಹೇಳುವ ಕೆಲವರು ಕಾವ್ಯ ಪರವಾಗಿ ನಿಲ್ಲದೆ ಆಳ್ವರ ಪರವಾಗಿ ನಿಂತಿದ್ದಾರೆ ಇದು ದುರಂತ ಇಂದು ಕರಾವಳಿಯ ಜನ ಜಾತಿ ಧರ್ಮವನ್ನು ಮರೆತು ಕಾವ್ಯ ಪರ ನಿಂತಿದ್ದು ಅಭಿನಂದನೀಯ. ಈಗೀಗ ಶಿಕ್ಷಣ ವ್ಯಾಪಾರೀಕರಣ ಆಗುತ್ತಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್ ಮಾತನಾಡಿ ಕಾವ್ಯ ನಿಗೂಡ ಸಾವು ಅವಳ ತಂದೆ ತಾಯಿಗೆ ಮಾತ್ರವಲ್ಲ ಮಕ್ಕಳ ಪೋಷಕರಿಗೂ ಆತಂಕ ಉಂಟು ಮಾಡಿದೆ. ನ್ಯಾಯ ದೊರಕುವುದಲ್ಲಿ ಬಡವ ಬಲ್ಲಿದ ಎಂಬ ತಾರತಮ್ಯ ಆಗಬಾರದು ಸತ್ಯಕ್ಕೆ ಯಾವಾಗಲೂ ನ್ಯಾಯ ಸಿಗಬೇಕು. ಎಂದರು.
ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ವಿವಿಧ ಸಂಘಟನೆಗಳ ಸುನಿಲ್ ಕುಮಾರ್ ಬಜಾಲ್, ಯಶವಂತ ಮರೋಳಿ, ದೀಪಕ್ ಕೋಟ್ಯಾನ್, ರಾಬರ್ಟ್ ರೊಸಾರಿಯೋ, ಕೃಷ್ಣಾನಂದ, ಸೀತಾರಾಮ್, ಬಾಸ್ಕರ್, ಮ್ಯಾಕ್ಸಿಮ್ ಪಿಂಟೋ ಸಭೆಯಲ್ಲಿ ಮಾತನಾಡಿದರು.

Kinnigoli-08081701

Comments

comments

Comments are closed.

Read previous post:
Kinnigoli-05081701
ಯಕ್ಷಗಾನಕ್ಕೆ ದಕ್ಕೆ ಬರದ ರೀತಿಯ ಬದಲಾವಣೆ ಅಗತ್ಯ

 ಕಿನ್ನಿಗೋಳಿ : ಆಧುನಿಕತೆಯ ಕಾಲದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಸ್ವಲ್ಪ ಮಟ್ಟಿನ ಬದಲಾವಣೆ ಕಂಡಿದೆ ಆದರೆ ಪರಂಪರೆ ಹಾಗೂ ಮೂಲ ಸ್ವರೂಪಕ್ಕೆ ದಕ್ಕೆ ಬಾರದಂತೆ ಬದಲಾವಣೆ ಮಾಡಬೇಕಾಗಿದೆ ಎಂದು...

Close