ರಸ್ತೆ ಕಾನೂನು ಮಾಹಿತಿ ಶಿಭಿರ

ಮೂಲ್ಕಿ: ಶೈಕ್ಷಣಿಕವಾಗಿ ಪ್ರಗತಿಹೊಂದಿ ಉದ್ಯೋಗ ಗಳಿಸುವ ಹೊಸ್ತಿಲಲ್ಲಿ ಅಫಘಾತಕ್ಕೀಡಾಗಿ ಮೃತರಾದರೆ ಹೆತ್ತವರಿಗಿಂತ ದೇಶಕ್ಕೇ ಅಧಿಕ ನಷ್ಟ ಎಂದು ಮಂಗಳೂರು ಉತ್ತರ ಸಂಚಾರಿ ಪೋಲೀಸ್ ನಿರೀಕ್ಷಕ ಮಂಜುನಾಥ್ ಹೇಳಿದರು.
ಮೂಲ್ಕಿ ವಿಜಯಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ಸಂಚಾರ ವಿಭಾಗದ ರಸ್ತೆ ಕಾನೂನು ಮಾಹಿತಿ ಶಿಭಿರದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಯುವ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಸರಕಾರವು ಶೈಕ್ಷಣಿಕ ವ್ಯವಸ್ಥೆ ಉನ್ನತೀಕರಣ ಗೊಳಿಸಲು ಬಹಳಷ್ಟು ಹಣ ವೆಚ್ಚಮಾಡುತ್ತಿದ್ದು ಯುವ ಸಮಾಜ ಅಭಿವೃದ್ಧಿಗೊಂಡರೆ ಮಾತ್ರ ಈ ಋಣ ಸಂದಾಯ ಸಾಧ್ಯ ಈ ಬಗ್ಗೆ ಯುವ ಸಮಾಜ ತಿಳಿದುಕೊಂಡು ಕಾನೂನು ಪಾಲನೆ ಮಾಡುವ ಮೂಲಕ ತಾವೂ ಅಭಿವೃದ್ಧಿಯಾಗಿ ಕುಟುಂಬ ಹಾಗೂ ದೇಶದ ಉನ್ನತ ಭವಿಷ್ಯಕ್ಕೆ ಕಾರಣಕರ್ತರಾಗಬೇಕು ಎಂದರು.
ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ಪ್ರಸ್ತಾವಿಸಿ, ಇಂದು ಯುವ ಸಮಾಜ ರಸ್ತೆ ನಿಯಮಗಳ ಬಗ್ಗೆ ಅಸಡ್ಡೆ ತೋರಿಸುತ್ತಿರುವುವ ಕಾರಣ ಬೆಳೆದ ಮಕ್ಕಳು ಮನೆಗೆ ಬೆಳಕಾಗುವ ಮೊದಲೇ ಅಫಘಾತಕ್ಕೆ ಬಲಿಯಾಗುತ್ತಿರುವುದು ದುರಂತವಾಗಿದ್ದು ವಿದ್ಯಾರ್ಥಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ರಸ್ತೆ ಕಾನೂನುಗಳ ಬಗ್ಗೆ ಅರಿವುಮೂಡಿಸಿಕೊಂಡು ಪಾಲನೆ ಮಾಡಲು ಈ ಶಿಭಿರ ಸಹಕಾರಿಯಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಮಿದಾಬೇಗಂ ವಹಿಸಿದ್ದರು. ಅತಿಥಿಗಳಾಗಿ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಅನಸೂಯಾ ಕರ್ಕೇರಾ.ನೋಡಲ್ ಅಧಿಕಾರಿ ಸೋಮಶೇಖರ ಭಟ್ ಉಪಸ್ಥಿತರಿದ್ದರು.
ಹರ್ಷ ಸ್ವಾಗತಿಸಿದರು, ಶರಣ್ಯ ಪರಿಚಯಿಸಿದರು. ರಕ್ಷಾ ಶೆಣೈ ನಿರೂಪಿಸಿದರು. ಸೌಭಾಗ್ಯ ವಂದಿಸಿದರು.

Kinnigoli-09081701

Comments

comments

Comments are closed.