ಸ್ವಚ್ಚತಾ ನೀತಿ ಪ್ರತಿಜ್ಞಾ ವಿಧಿ ಬೋದನೆ

ಕಿನ್ನಿಗೋಳಿ : ಹಳೆಯಂಗಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಸಹಯೋಗದಲ್ಲಿ ಬರ್ಹಿದೆಸೆ ಮುಕ್ತ ಸಪ್ತಾಹ ನಡೆಯಿತು. ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ ಸ್ವಚ್ಚತಾ ನೀತಿ ಪ್ರತಿಜ್ಞಾ ವಿಧಿ ಬೋದನೆ ನಡೆಸಿದರು. ಹಳೆಯಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪ್ರಿನ್ಸಿಪಾಲ್ ವಿಶ್ವನಾಥ ಭಟ್, ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಚಿತ್ರಾ ಸುರೇಶ್, ಶರ್ಮಿಳಾ ಎಸ್. ಕೋಟ್ಯಾನ್, ಬೇಬಿ ಸುಲೋಚನಾ, ಸುಗಂಧಿ, ಜಯಂತಿ, ಉಪನ್ಯಾಸಕರಾದ ರೋಶನಿ ಯಶವಂತ್ ಮತ್ತು ಮಂಜುಳಾ ಮಯ್ಯ, ಗ್ರಾ.ಪಂ. ಕಾರ್ಯದರ್ಶಿ ಕೇಶವ, ಮೂಡಾ ಸದಸ್ಯ ಎಚ್.ವಸಂತ್ ಬೆರ್ನಾರ್ಡ್ ಉಪಸ್ಥಿತರಿದ್ದರು. ನಂತರ ಸ್ವಚ್ಚತೆಯ ಬಗ್ಗೆ ಮೂವತ್ತು ನಿಮಿಷದ ಕಿರು ಚಿತ್ರ ಪ್ರದರ್ಶನಗೊಂಡಿತು.

Kinnigoli-10081703

Comments

comments

Comments are closed.

Read previous post:
Kinnigoli-10081702
ಬೃಹತ್ ಜಲಸಂರಕ್ಷಣಾ ಜಾಗೃತಿ ಜಾಥಾ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಐಕಳ ಗ್ರಾಮ ಪಂಚಾಯಿತಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಕಿನ್ನಿಗೋಳಿ ಲಯನ್ಸ್ ಕ್ಲಬ್, ಕಿನ್ನಿಗೋಳಿ...

Close