ಹಳೆಯಂಗಡಿ ಸ. ಕಾಲೇಜು ಅಭಿವೃದ್ಧಿಗೆ 1.20 ಕೋಟಿ ಮಂಜೂರು

 ಕಿನ್ನಿಗೋಳಿ : ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಗೊಂಡ ಹಳೆಯಂಗಡಿ ಕಾಲೇಜು ೨೫ ವರ್ಷಗಳನ್ನು ದಾಟಿದ್ದು ಪ್ರಸ್ತುತ ವರ್ಷದಲ್ಲಿ ಹೊಸ ತರಗತಿ ಕೋಣೆಗಳಿಗೆ ರೂ. ೭೦ಲಕ್ಷ, ರಿಪೇರಿ ಹಾಗೂ ಇನ್ನಿತರ ನಿರ್ವಹಣಾ ಕಾಮಗಾರಿಗಳಿಗಾಗಿ ರೂ. ೫೦ ಲಕ್ಷ ಸರಕಾರದಿಂದ ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ 2017-18 ನೇ ಸಾಲಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜು ಪ್ರಿನ್ಸಿಪಾಲ್ ಪೋ.ಎಂ.ವಿಶ್ವನಾಥ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್‌ಖಾದರ್, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಅಝೀಜ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗೋಪಾಲ ಭಂಡಾರಿ ತೋಕೂರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿ, ಹರ್ಷಿತಾ ವಂದಿಸಿದರು. ಕಾಲೇಜು ಉಪನ್ಯಾಸಕರಾದ ಮಂಜುಳ ಮಲ್ಯ ಮತ್ತು ರೋಶ್ನಿ ಯಶವಂತ್ ಕಾರ್ಯಕ್ರಮ ನಿರ್ವಹಿಸಿದರು.

Kinnigoli-10081701

Comments

comments

Comments are closed.

Read previous post:
Kinnigoli-09081701
ರಸ್ತೆ ಕಾನೂನು ಮಾಹಿತಿ ಶಿಭಿರ

ಮೂಲ್ಕಿ: ಶೈಕ್ಷಣಿಕವಾಗಿ ಪ್ರಗತಿಹೊಂದಿ ಉದ್ಯೋಗ ಗಳಿಸುವ ಹೊಸ್ತಿಲಲ್ಲಿ ಅಫಘಾತಕ್ಕೀಡಾಗಿ ಮೃತರಾದರೆ ಹೆತ್ತವರಿಗಿಂತ ದೇಶಕ್ಕೇ ಅಧಿಕ ನಷ್ಟ ಎಂದು ಮಂಗಳೂರು ಉತ್ತರ ಸಂಚಾರಿ ಪೋಲೀಸ್ ನಿರೀಕ್ಷಕ ಮಂಜುನಾಥ್ ಹೇಳಿದರು. ಮೂಲ್ಕಿ...

Close