ಕಿನ್ನಿಗೋಳಿ ಆರಾಧನಾ ಮಹೋತ್ಸವ

ಕಿನ್ನಿಗೋಳಿ : ಸಮಾಜದಲ್ಲಿ ಧರ್ಮಜಾಗೃತಿ, ಧರ್ಮದ ಪುನರೋತ್ಥಾನಕ್ಕಾಗಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಮಹಾನ್ ಸಾಧಕ ರಾಘವೇಂದ್ರ ಸ್ವಾಮಿಜಿ ಅವರ ಆರಾಧನ ಮಹೋತ್ಸವ ನಿರಂತರ ನಡೆಯಬೇಕು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಉಳೆಪಾಡಿ ಶ್ರೀ ಮಹಾಮ್ಮಯಿ ದೇವಸ್ಥಾನದ ಧರ್ಮದರ್ಶಿ ಮೋಹನ್‌ದಾಸ ಸುರತ್ಕಲ್, ಉದ್ಯಮಿ ಪ್ರಥ್ವೀರಾಜ ಆಚಾರ್ಯ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಬಾಲಕೃಷ್ಣ ಉಡುಪ, ಕಿನ್ನಿಗೋಳಿ ಸಾರ್ವಜನಿಕ ಗಣೆಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಕುಲಾಲ್, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಅರ್ಚಕ ರಾಘವೇಂದ್ರ ಭಟ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Kinnigoli-10081705

Comments

comments

Comments are closed.

Read previous post:
Kinnigoli-10081704
ಯಕ್ಷಲಹರಿ ತಾಳಮದ್ದಳೆ ಸಪ್ತಾಹ ಸಮಾರೋಪ

ಕಿನ್ನಿಗೋಳಿ : ಕಿನ್ನಿಗೋಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಯಕ್ಷಲಹರಿ ಯಂತಹ ಸಂಸ್ಥೆ ನಿರಂತರ ೨೬ ವರ್ಷಗಳಿಂದ ಯಕ್ಷಗಾನದ ಜ್ಞಾನ ಸಂಪತ್ತು ಹಾಗೂ ತರೆಯ ಮರೆಯ ಯಕ್ಷಗಾನ ಹಿರಿ ಕಿರಿಯ ಕಲಾವಿದರನ್ನು...

Close