ಬೃಹತ್ ಜಲಸಂರಕ್ಷಣಾ ಜಾಗೃತಿ ಜಾಥಾ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಐಕಳ ಗ್ರಾಮ ಪಂಚಾಯಿತಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಕಿನ್ನಿಗೋಳಿ ಲಯನ್ಸ್ ಕ್ಲಬ್, ಕಿನ್ನಿಗೋಳಿ ರೋಟರಿ ಕ್ಲಬ್, ಯುಗಪುರುಷ, ಕಾಲೇಜು ಎನ್.ಸಿ.ಸಿ. ವಿಭಾಗ, ವಿಧ್ಯಾರ್ಥಿ ಕ್ಷೇಮಪಾಲನಾ ಘಟಕ, ಯೂತ್ ರೆಡ್ ಕ್ರಾಸ್ ಸಂಸ್ಥೆಗಳ ನೇತ್ರತ್ವದಲ್ಲಿ ಬೃಹತ್ ಜಲಸಂರಕ್ಷಣಾ ಜಾಗೃತಿ ಜಾಥಾ ಪೋಪೈ ಕಾಲೇಜಿನಿಂದ ಕಿನ್ನಿಗೋಳಿ ತನಕ ನಡೆಯಿತು.
ಕಿನ್ನಿಗೋಳಿ ಸುತ್ತಮುತ್ತಲಿನ ಜನರಲ್ಲಿ ನೀರಿನ ಮಹತ್ವವನ್ನು ಮತ್ತು ನೀರಿಂಗಿಸುವ ಅಗತ್ಯದ ಬಗ್ಗೆ ಅರಿವನ್ನು ಮೂಡಿಸುವ, ಜೀವಜಲಕ್ಕಾಗಿ ಮಾನವ ಸರಪಳಿ ಮತ್ತು ಬೀದಿ ನಾಟಕವನ್ನು ಪೊಂಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ನಡೆಸಿದರು.
ಐಕಳ ಗ್ರಾಮ ಪಂಚಾಯಿತಿ ಪಿಡಿಒ ನಾಗರತ್ನ ಬೃಹತ್ ಜಾಥ ಉದ್ಘಾಟಿಸಿ ಮಾತನಾಡಿ ನೀರಿನ ಸರಿಯಾದ ಉಪಯೋಗ ಮತ್ತು ದುರುಪಯೋಗವನ್ನು ತಡೆಗಟ್ಟುವ ಬಗ್ಗೆ ಪಂಚಾಯತ್ ಮಟ್ಟದಲ್ಲಿ ವಿದ್ಯಾರ್ಥಿಗಳು ಜನರಿಗೆ ತಿಳಿಹೇಳುವುದು ವಿದ್ಯಾರ್ಥಿಗಳ ಗುರುತರ ಜವಾಬ್ದಾರಿಗಳಲ್ಲಿ ಒಂದು ಎಂದರು.
ಕಾಲೇಜು ಸಂಚಾಲಕ ರೆ.ಫಾ. ವಿಕ್ಟರ್ ಡಿಮೆಲ್ಲೊರವರು ಜಾಥದ ಯಶಸ್ಸಿಗೆ ಶುಭ ಕೋರಿದರು.
ಮಳೆ ನೀರು ಇಂಗಿಸಿ, ಅಂತರ್ಜಲ ಹೆಚ್ಚಿಸಿ; ನೀರು ಉಳಿಸಿ, ಭವಿಷ್ಯ ಸಂರಕ್ಷಿಸಿ; ಜಲ ಸಂರಕ್ಷಣೆ, ನಮ್ಮೆಲ್ಲರ ಹೊಣೆ; ಎಚ್ಚರ! ಎಚ್ಚರ!! ನೀರಿನ ವೆಚ್ಚ ಹಾನಿಕರ; ಎಂಬ ಕೂಗು ಗಗನ ಮುಟ್ಟುವಂತೆ ಮೈದುಂಬಿ ಕೂಗಿದ ವಿದ್ಯಾರ್ಥಿ ಸಮೂಹ ಸುಮಾರು ಒಂದೂವರೆ ಘಂಟೆಗಳ ಕಾಲದ ಜಾಥವು ಮೂರುಕಾವೇರಿ ಮೂಲಕವಾಗಿ ಕಿನ್ನಿಗೋಳಿಯ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಬಸ್ಸು ನಿಲ್ದಾಣದ ಮೂಲಕ ಸುಖಾನಂದ ವೃತ್ತದಲ್ಲಿ ಸಮಾವೇಶಗೊಂಡಿತ್ತು.
ಉಪನ್ಯಾಸಕ ಯೋಗಿಂದ್ರ ಬಿ., ನೀರಿನ ಸಂರಕ್ಷಣೆಯ ಬಗ್ಗೆ ಪ್ರತಿಜ್ಞೆಯನ್ನು ಭೋಧಿಸಿದರು.
ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಸಮಾರೋಪ ಸಮಾವೇಶದಲ್ಲಿ ಮಾತನಾಡಿ ನೀರು ಜೀವಸಂಕೇತ. ಜೀವ ದೈವಸಂಕೇತ. ಎರಡನ್ನೂ ಸಂರಕ್ಷಿಸಿ ನಿಸರ್ಗದ ಸಮತೋಲನವನ್ನು ಕಾಪಾಡುವ ಆಶಯ ನಮ್ಮಲ್ಲಿರಬೇಕು ಎಂದರು.
ಮುಖ್ಯ ಭಾಷಣಕಾರರಾದ ಅಮಲೋದ್ಭವ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ. ವಿನ್ಸೆಂಟ್ ಮೊಂತೆರೊ ಮಾತನಾಡಿ ಮಳೆನೀರಿನ ಸಂರಕ್ಷಣೆ ಮತ್ತು ಮಳೆನೀರಿನ ಕೊಯ್ಲಿನಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬೇಕೆಂದು ಕರೆಕೊಟ್ಟರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಮಾತನಾಡಿ ನೀರು ಅತೀ ಅಮೂಲ್ಯ ಸಂಪತ್ತು, ಇದನ್ನು ಕಲುಷಿತಗೊಳಿಸಲು ಯುವ ಪೀಳಿಗೆ ಆಸ್ಪದ ನೀಡಬಾರದು ಎಂದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉಪನ್ಯಾಸಕಿ ಸಿಲ್ವಿಯ ಪಾಯಸ್, ಎನ್.ಎನ್.ಎಸ್. ವಿದ್ಯಾರ್ಥಿ ನಾಯಕ ವಿಶಾಲ್ ಬಿ. ಕುಲಾಲ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕಿ ವಷಿ ಕಾರ್ಯಕ್ರಮ ನಿರೂಪಿಸಿದರು.
ಎನ್.ಎನ್.ಎಸ್. ಯೋಜನಾಧಿಕಾರಿ ಡಾ. ವಿಕ್ಟರ್ ವಾಜ್ ಇ., ನಿರ್ದೇಶಿಸಿದ ಜೀವಜಲ ಎಂಬ ಬೀದಿನಾಟಕವನ್ನು ಪ್ರದರ್ಶಿಸಲಾಯಿತು.

Kinnigoli-10081702

Comments

comments

Comments are closed.

Read previous post:
Kinnigoli-10081701
ಹಳೆಯಂಗಡಿ ಸ. ಕಾಲೇಜು ಅಭಿವೃದ್ಧಿಗೆ 1.20 ಕೋಟಿ ಮಂಜೂರು

 ಕಿನ್ನಿಗೋಳಿ : ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಗೊಂಡ ಹಳೆಯಂಗಡಿ ಕಾಲೇಜು ೨೫ ವರ್ಷಗಳನ್ನು ದಾಟಿದ್ದು ಪ್ರಸ್ತುತ ವರ್ಷದಲ್ಲಿ ಹೊಸ ತರಗತಿ ಕೋಣೆಗಳಿಗೆ ರೂ. ೭೦ಲಕ್ಷ, ರಿಪೇರಿ ಹಾಗೂ ಇನ್ನಿತರ ನಿರ್ವಹಣಾ...

Close